ಬೆಳಗಾವಿ: ಕ್ಲಿಷ್ಟಕರ ಪರಿಸ್ಥಿತಿಗಳನ್ನು ಎದುರಿಸಲು ಶಕ್ತಿ, ಸ್ಪಧರ್ಾ ಮನೋಭಾವನೆ, ಏಕಾಗ್ರತೆಗಳನ್ನು ಬೆಳಸಿಕೊಳ್ಳಲು ಸಾಹಸದಂತಾಹ ತರಬೇತಿ ಶಿಬಿರಗಳಿಂದ ಮಾತ್ರ ಸಾಧ್ಯ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಉಪ ನಿದರ್ೆಶಕಾರದ ಸಿ.ಬಿ.ರಂಗಯ್ಯಾ ಅವರು ಹೇಳಿದರು.
ವಿಜಯಪುರ ಹಾಗೂ ಬೆಳಗಾವಿ ಜಿಲ್ಲಾ ನೆಹರು ಯುವ ಕೇಂದ್ರ, ಬೆಳಗಾವಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಬೆಳಗಾವಿಯ ನಿಸರ್ಗ ಸಾಹಸ ಅಕಾಡೆಮಿ ಸಹಯೋಗದಲ್ಲಿ ಸೊಗಲ ಸುಕ್ಷೇತ್ರದ ಕ್ರೀಡಾ ವಸತಿ ನಿಲಯದಲ್ಲಿ ಜುಲೈ 18 ರಂದು ಏರ್ಪಡಿಸಿದ್ದ ಅಂತರ್ ಜಿಲ್ಲಾ ಮಟ್ಟದ ಭೂ ಸಾಹಸ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ಸೈಕಲ್ ತರಬೇತುದಾರರಾದ ಎಂ.ಪಿ. ಮರನೂರ ಅವರು ಮಾತನಾಡಿ, ಸಾಹಸ ತರಬೇತಿಗಳಲಿ ಭಾಗವಹಿಸಿ ತರಬೇತಿ ಪಡೆಯುವುದರಿಂದ ಪ್ರಕೃತಿ ವಿಕೋಪಗಳಾದ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರನ್ನು ರಕ್ಷಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಸಾಹಸ ತರಬೇತುದಾರರ ರಮೇಶ ಅಲಗೂಡೆಕರ ಅವರು ಮಾತನಾಡಿ, "ಧೈರ್ಯಂ ಸರ್ವತ್ರ ಸಾಧನಂ" ಎಂದು ಹೇಳಿದರು.
ವಿಜಯಪುರ ಜಿಲ್ಲಾ ನೆಹರು ಯುವ ಕೇಂದ್ರದ ಯುವಸಮನ್ವಯ ಅಧಿಕಾರಿ ಡಿ.ದಯಾನಂದ ಅವರು ಮಾತನಾಡಿ ನೆಹರು ಯುವ ಕೇಂದ್ರದಿಂದ ಯುವಕರಿಗಾಗಿ ಅನೇಕ ಸೌಲಭ್ಯಗಳಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲೂರ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಬಿ.ಎಫ್. ಸನದಿ ಅವರು ವಹಿಸಿದರು. ಗ್ರಾ.ಪಂ ಸದಸ್ಯರಾದ ನಾಮದೇವ ದಾಂಡೇಲಿ ಸೇರಿದಂತೆ ಇಲಾಖೆ ಸಿಬ್ಬಂದಿಗಳು ಹಾಗೂ ಐದು ಜಿಲ್ಲೆಗಳಿಂದ ತರಬೇತಾಥರ್ಿಗಳು ಉಪಸ್ಥಿತರಿದ್ದರು.
ಪ್ರಿಯಾಂಕ ಸೂರ್ಯವಂಶಿ ಪ್ರಾಥರ್ಿಸಿದರು. ಬೇಬಿ ದೊಡ್ಡಮನಿ ಅವರು ವಂದಿಸಿದರು. ಮಾಳಿಂಗರಾಯ ಕಡ್ಲಿಮಟ್ಟಿ ನಿರೂಪಿಸಿದರು.