ಆದಿತ್ಯ-ಎಕ್ಸೆಲ್ ಡಯಾಗ್ನೋಸ್ಟಿಕ್ ಸೆಂಟರ್ ಉದ್ಘಾಟನೆ

ಲೋಕದರ್ಶನ ವರದಿ

ಮುಗಳಖೋಡ 17: ಪಟ್ಟಣದ ಹಿರಿಯರು, ಶಿಕ್ಷಣ ಪ್ರೇಮಿ, ಸಮಾಜ ಸುಧಾರಕ, ಜಿ.ಪಂ ಮಾಜಿ ಸದಸ್ಯರಾದ ಡಾ.ಸಿ.ಬಿ.ಕುಲಿಗೋಡ ಅವರು ಸುಪುತ್ರರಾದ ಸಂತೋಷ ಕುಲಿಗೋಡ ಹಾಗೂ ಅವರ ತಂಡದವರು ಬೆಳಗಾವಿ ನಗರದ ಪಾಶ್ರ್ವನಾಥ ಪ್ಲಾಜಾ, ಹರ್ಷಾ  ಎಲೇಕ್ಟ್ರಾನಿಕ್ಸ್ ಹತ್ತಿರ ನೂತನವಾಗಿ ನಿರ್ಮಿಸಿದ ಆದಿತ್ಯ & ಎಕ್ಸೆಲ್ ಡಯಾಗ್ನೋಸ್ಟಿಕ್ ಸೆಂಟರ್ದ ಉದ್ಘಾಟಣಾ ಸಮಾರಂಭವು ರವಿವಾರ ದಿ 16 ರಂದು ಜರುಗಿತು. 

     ಈ ಉದ್ಘಾಟಣಾ ಸಮಾರಂಭಕ್ಕೆ ಆಗಮಿಸಿದ ಬೆಳಗಾವಿ ರುದ್ರಾಕ್ಷಿಮಠ ನಾಗನೂರದ ಶ್ರೀಗಳಾದ ಅಲ್ಲಮಪ್ರಭು ಸ್ವಾಮಿಜಿ ಅವರು ಜ್ಯೋತಿ ಬೆಳಗಿಸುವುದರೊಂದಿಗೆ ಆದಿತ್ಯ & ಎಕ್ಸೆಲ್ ಡಯಾಗ್ನೋಸ್ಟಿಕ್ ಸೆಂಟರ್ನ್ನು ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಕೆ.ಎಲ್.ಇ ಸಂಸ್ಥೆಯ ಅಧ್ಯಕ್ಷರಾದ ಪ್ರಭಾಕರ ಕೋರೆ, ಶಾಸಕ ಅನೀಲ ಬೆನಕೆ, ಪಿಎಲ್.ಡಿ.ಬ್ಯಾಂಕಿನ ಅಧ್ಯಕ್ಷ ಪ್ರತಾಪಅಣ್ಣಾ ಪಾಟೀಲ, ಪ್ರಣಯಣ್ಣಾ ಪಾಟೀಲ, ಡಾ.ಸಿ.ಬಿ.ಕುಲಿಗೋಡ, ಡಾ.ರಮೇಶ ಪಟ್ಟಣಶೆಟ್ಟಿ, ಕಿತ್ತೂರಿನ ಪಿ.ಎಸ್.ಐ ಕುಮಾರ ಹಿತ್ತಲಮನಿ, ಡಾ.ಸಂತೋಷ ಕುಲಿಗೋಡ, ಡಾ.ಅಜಯ.ಎಂ.ಕೆ, ಡಾ.ಸಂದೀಪ ಪಟ್ಟಣಶೆಟ್ಟಿ, ಡಾ.ಪ್ರವೀಣ ವಾಲಿ, ಡಾ.ಶ್ರೀದೇವಿ ಬೋಬಾಟೆ, ಸಂಜಯ ಕುಲಿಗೋಡ, ಹಾಗೂ ವಿವಿಧ ಊರುಗಳಿಂದ ಆಗಮಿಸಿದ ವೈಧ್ಯರು ಹಾಗೂ ಹಿರಿಯರು, ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು. ಎಂ.ಆರ್.ಐ 1.5. ಟೇಸ್ಲಾ, ಸಿಟಿ ಸ್ಕ್ಯಾನಿಂಗ್, ಅಲ್ಟ್ರಾ ಸೌಂಡ್, ಮ್ಯಾಮೊಗ್ರಾಫಿ, ಡೆಕ್ಸಾ ಸ್ಕ್ಯಾನ್, ಒಪಿಜಿ, ಡಿಜಿಟಲ್ ಎಕ್ಸ್ರೇ, ಲ್ಯಾಬರೋಟರಿ, ಎಕೋ, ಟಿ.ಎಂ.ಟಿ. ಬಯೋಪಿಸ್ & ಡ್ರೈನೆಜ್ ಮುಂತಾದ ಸೌಲ್ಯಗಳನ್ನು ಆದಿತ್ಯ & ಎಕ್ಸೆಲ್ ಡಯಾಗ್ನೋಸ್ಟಿಕ್ ಸೆಂಟರ್ದಲ್ಲಿ ಕಾಣಬಹುದು. ಗಣ್ಯರಾದ ಜಲಸಂನ್ಮೂಲ ಸಚಿವ ರಮೇಶ ಜಾರಕಿಹೊಳೆ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳೆ, ಮುಖ್ಯ ಸಚೇತಕ ಮಹಾಂತೇಶ ಕವಟಿಗಿಮಠ, ಜವಳಿ ಸಚಿವ ಶ್ರೀಮಂತ ಪಾಟೀಲ, ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸತೀಶ ಜಾರಕಿಹೊಳೆ, ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ, ಶಾಸಕ ಮಹೇಶ ಕುಮಟಳ್ಳಿ, ಬೆಳಗಾವಿ ಕೆ.ಎಂ.ಎಫ್.ಅಧ್ಯಕ್ಷ ವಿವೇಕರಾವ ಪಾಟೀಲ, ಎಂ.ಪಿ. ಅಣ್ಣಾಸಾಹೇಬ ಜೊಲ್ಲೆ, ಶಾಸಕ ಅಭಯ ಪಾಟೀಲ, ಮಾಜಿ ಸಚಿವ ಹಾಗೂ ಹಾಲಿ ಶಾಸಕ ಉಮೇಶ ಕತ್ತಿ ಇವರು ನಾಡಿನ ಜನತೆಯ ಹಿತಾಶಕ್ತಿ ಕೆಲಸಗಳಲ್ಲಿ ತೊಡಗಿ ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮಕ್ಕೆ ಆಗಮಿಸಲು ಆಗಿರುವುದಿಲ್ಲ. ನಿಮ್ಮ ಈ ಕಾರ್ಯಕ್ರಮ ಯಶಸ್ವಿಯಾಗುವುದರೊಂದಿಗೆ ಆದಿತ್ಯ & ಎಕ್ಸೆಲ್ ಡಯಾಗ್ನೋಸ್ಟಿಕ್ ಸೆಂಟರ್ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದ್ದಾರೆ.