ಲೋಕದರ್ಶನ ವರದಿ
ಸಂಕೇಶ್ವರ,24: ಪಟ್ಟಣದ ಆದ್ಯ ಶ್ರೀ ನಿಜಲಿಂಗೇಶ್ವರ ಶಿಕ್ಷ ಣ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಜ.6 ರಂದು ಮಹಾತ್ಮ ಗಾಂಧಿ ಕಾನೂನು ಮಹಾವಿದ್ಯಾಲಯದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಮಾಜಿ ಸಚಿವ ಹಾಗೂ ಸಂಸ್ಥೆಯ ಸಂಸ್ಥಾಪಕ ಮಲ್ಹಾರಿಗೌಡಾ ಪಾಟೀಲ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ಕ್ಕೆ ನಡೆಯಲಿರುವ ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀಶೈಲ್ ಯಡೂರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ನಿಡಸೋಸಿಯ ಸಿದ್ಧ ಸಂಸ್ಥಾನ ಮಠದ ಶಿವಲಿಂಗೇಶ್ವರ ಸ್ವಾಮಿಗಳು, ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೇಂದ್ರ ಸ್ವಾಮಿಗಳು, ಸಂಕೇಶ್ವರದ ಶಂಕರಲಿಂಗ ಪೀಠದ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮಿಗಳು, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ವಹಿಸುವರು ಎಂದು ತಿಳಿಸಿದರು.
ಸಂಸದ ಎಂ. ವೀರಪ್ಪ ಮೊಯ್ಲಿ ಕಟ್ಟಡ ಉದ್ಘಾಟಿಸುವರು. ಶಾಸಕ ಉಮೇಶ ಕತ್ತಿ ಅಧ್ಯಕ್ಷತೆ ವಹಿಸುವರು. ಸಚಿವ ಸತೀಶ ಜಾರಕಿಹೊಳಿ ಹಾಜರಿರುವರು. ಗ್ರಂಥಾಲಯವನ್ನು ಸ್ಪೀಕರ್ ಕೆ.ಆರ್. ರಮೇಶಕುಮಾರ್ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಔಪಾದ ನಾಯಕ, ಕನರ್ಾಟಕದ ಸಚಿವರಾದ ಕೃಷ್ಣ ಬೈರೇಗೌಡ, ಆರ್.ವಿ. ದೇಶಪಾಂಡೆ, ಶಿವಾನಂದ ಪಾಟೀಲ ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಗಣೇಶ ಹುಕ್ಕೇರಿ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ ಭಾಗವಹಿಸುವರು.
ಅತಿಥಿಗಳಾಗಿ ಶಾಸಕ ಶಾಮನೂರು ಶಿವಶಂಕರಪ್ಪ, ರಮೇಶ ಜಾರಕಿಹೊಳಿ, ಎನ್.ತಿಪ್ಪಣ್ಣ, ಪಿ.ಈಶ್ವರ ಭಟ್ಟ್, ಲೀಲಾದೇವಿ ಪ್ರಸಾದ್, ಸತೇಜಾ ಬಂಟಿ ಪಾಟೀಲ ಪಾಲ್ಗೊಳ್ಳುವರು ಎಂದು ವಿವರಿಸಿದರು. ಸಂಸ್ಥೆಯ ಉಪಾಧ್ಯಕ್ಷ ಪ್ರಕಾಶ ಕಣಗಲಿ, ನಿದರ್ೆಶಕ ಎಸ್.ಎಸ್.ಕಣಗಲಿ, ಕುಣಾಲ ಪಾಟೀಲ, ಸುನೀಲ ಪರ್ವತರಾವ್, ಡಾ. ಎ.ಕೆ. ಮರಿಗುದ್ದಿ, ಎಲ್.ಎಂ.ಪಾಟೀಲ, ಮಲ್ಲಿಕಾಜರ್ುನ ಭಾವಿಮನಿ, ಎಸ್.ಐ. ಹೆದ್ದೂರಶೆಟ್ಟಿ, ಸಾರವಾಡಿ, ಅಪ್ಪು ತಂಬದ ಮತ್ತಿತರರು ಉಪಸ್ಥಿತರಿದ್ದರು.