ಲೋಕದರ್ಶನವರದಿ
ರಾಣೇಬೆನ್ನೂರು16: ಮಹಾನ್ ಸಾಧಕರ, ಮಹಾತ್ಮರ ಹಾಗೂ ದೇಶದ ಪ್ರಗತಿಗಾಗಿ ಶೃಮಿಸಿದವರ ತತ್ವ, ಆದರ್ಶ, ಜೀವನ ಚರಿತ್ರೆಗಳನ್ನು ಸರ್ವ ಸಮಾಜದವರು ಜೀವನದುದ್ದಕ್ಕೂ ಅಳವಡಿಸಿಕೊಂಡು ಮುನ್ನಡೆದರೆ ಎಲ್ಲರ ಬದುಕು ಪಾವನವಾಗುವುದು ಎಂದು ತಹಸೀಲ್ದಾರ ಬಸನಗೌಡ ಕೋಟೂರ ಹೇಳಿದರು.
ಮಂಗಳವಾರ ಇಲ್ಲಿನ ಮಿನಿವಿಧಾನಸೌಧದ ಸಭಾಭವನದಲ್ಲಿ ನಡೆದ ಶಿವಯೋಗಿ ಸಿದ್ಧರಾಮೇಶ್ವರರ 845ನೇಯ ಜಯಂತ್ಯೋತ್ಸವದ ನಿಮಿತ್ಯ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಸರ್ವ ಸಮಾಜ ಸುಧಾರಣೆಯಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ಕೊಡುಗೆ ಅಪಾರವಾದುದು ಎಂದರು.
ತಾಲೂಕು ಭೋವಿ ಸಮಾಜ ಸಂಘದ ಅಧ್ಯಕ್ಷ ಮಂಜಪ್ಪ ವಡ್ಡರ ಮಾತನಾಡಿ, ಸಿದ್ದರಾಮೇಶ್ವರರು ಕ್ರಿ.ಶ 1160 ಮಹಾರಾಷ್ಟ್ರದಲ್ಲಿ ಜನಿಸಿದ್ದರು. ಇವರು ವೀರಶೈವದ ತತ್ವವನ್ನು ಒಪ್ಪಿಕೊಂಡು ಬಸವಣ್ಣನವರ ಆಸ್ಥಾನದಲ್ಲಿ ವಚನಕಾರರಾಗಿ ಸೇವೆ ಸಲ್ಲಿಸಿದವರಲ್ಲಿ ಓರ್ವರಾಗಿದ್ದರು ಎಂದರು.
ಸಿದ್ದರಾಮೇಶ್ವರರು 68ಸಾವಿರ ವಚನಗಳನ್ನು ಬರೆದ ಕೀರ್ತಿಗೆ ಪಾತ್ರರಾಗಿದ್ದಾರೆ, ಮಹಾಪುರುಷರ ಜಯಂತಿ ಆಚರಿಸಿದರೆ ಸಾಲದು, ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನೆಡದರೆ ಸಾರ್ಥಕವಾಗುದು.
ಸಮಾಜ ಭಾಂದವರು ಇವರುಗಳ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ರೂಢಿಸಿಕೊಳ್ಳಬೇಕು ಎಂದರು.
ತಾಪಂ ಇಓ ಎಸ್ಎಂ ಕಾಂಬಳೆ, ಎಸ್ ವಿ ಹಿರೇಮಠ, ಎಬಿ ಚಂದ್ರಶೇಖರ, ವೀರಪ್ಪ ಬಜ್ಜಿ, ಚಿಕ್ಕಣ್ಣನವರ, ಹಾದಿಮನಿ, ವೆಂಕಟೇಶ ಹೊಸಮನಿ, ಜಗದೀಶ ಕೆರೂಡಿ, ಎಚ್ ಟಿ ಅರಳಿಕಟ್ಟಿ, ಮುತ್ತಣ್ಣ ಒಡ್ಡರ, ಡಾ.ರಂಗಪ್ಪ, ನಾಗರಾಜ ಒಡ್ಡರ, ರಾಮಣ್ಣ ಬಜಾರಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ-ಕಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.