ಬೆಳಗಾವಿ 24: ಮುಪ್ಪಿನ ಅವಸ್ಥೆ ಜೀವನದ ಒಂದು ಅನಿವಾರ್ಯ ಸ್ಥಿತಿ. ಪರಿವರ್ತನೆಯ ಸಮಯದಲ್ಲಿ ಬರುವ ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡು ಇದರ ಜೊತೆಗೆ ಹೊಂದಾಣಿಕೆಯಿಂದ ಅನೇಕ ಪ್ರಕಾರದ ಯುಕ್ತಿಗಳಿಂದ ಯೋಜನಾಬದ್ಧವಾಗಿ ಜೀವಿಸುವ ಅವಶ್ಯಕತೆ ಇದೆ. ಇದರಿಂದಲೇ ನಮ್ಮ ವೃದ್ಧ ಜೀವನ ಸರಳ, ಸುಂದರ, ಸಫಲತೆಯಿಂದ ಕೂಡಿದ ಹಷರ್ಿತ ಜೀವನವಾಗುತ್ತದೆ ಎಂದು ಡಾ. ಮಹೇಶ ಹೇಮಾದ್ರಿ ಹೇಳಿದರು.
ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಹಿರಿಯ ನಾಗರಿಕರಿಗಾಗಿ ಭಾಗ್ಯನಗರದ ರಾಮನಾಥ ಭವನದಲ್ಲಿ ಆಯೋಜಿಸಲಾಗಿದ್ದ ವೃದ್ಧಾಪ್ಯದಲ್ಲಿ ಆರೋಗ್ಯ ನಿರ್ವಹಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಆಧ್ಯಾತ್ಮಿಕ ಹಾಗೂ ಸಕಾರಾತ್ಮಕ ದೃಷ್ಠಿಕೋನದಿಂದ ಪರಿಸ್ಥಿತಿಗಳ ಮೇಲೆ ಜಯ ಸಾಧಿಸುವ ಶಕ್ತಿಶಾಲಿ ವ್ಯಕ್ತಿತ್ವ ನಿಮರ್ಾಣ ಮಾಡುತ್ತದೆ. ಆಶಾವಾದಿಗಳನ್ನಾಗಿ ಮಾಡುತ್ತದೆ. ಸಹಜ ರಾಜಯೋಗದ ಸಕಾರಾತ್ಮಕ ಚಿಂತನೆಯಿಂದ ದೇಹ ಮತ್ತು ಮನಸ್ಸು ಆಧ್ಯಾತ್ಮಿಕ ಆಭಾಮಂಡಲದಲ್ಲಿ ಸ್ಥಿತವಾಗಿರಿಸಿ ಸಂಪೂರ್ಣ ಆರೋಗ್ಯದ ಅನುಭವ ಮಾಡಿಸುತ್ತದೆ. ನಮ್ಮೆಲ್ಲರ ಜೀವನದಲ್ಲಿ ಹೂಸತನ ಬರಲಿ, ಹೂಸ ವಿಷಯಗಳನ್ನು ಕಲಿತುಕೂಂಡು ಜೀವನ ಸಾರ್ಥಕ ಮಾಡಿಕೂಳ್ಳಲಿ ಎನ್ನುವದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಡಾ. ಹಣಮಂತ ಭಾರಶೆಟ್ಟಿ ಮನೆಯಲ್ಲಿಯೇ ಕುಳಿತು ಮಾಡುವ ಸೂಕ್ಷ್ಮ ವ್ಯಾಯಾಮ ಪ್ರತ್ಯಕ್ಷವಾಗಿ ಮಾಡಿ ತೋರಿಸಿದರು. ಬಿ. ಕೆ ಅನಿತಾ ರಾಜಯೋಗದ ಅನುಭೂತಿ ಮಾಡಿಸಿದರು. ಕಾರ್ಯಕ್ರಮದಲ್ಲಿ ರಾಜಯೋಗಿನಿ ಬಿ. ಕೆ. ಮೀನಾಕ್ಷಿ, ಮಹಾದೇವಿ, ಹಿರಿಯ ನಾಗರಿಕ ಸಂಘದ ಮುಖ್ಯ ಕಾರ್ಯದಶರ್ಿ ಪಿ. ಡಿ. ಶಿಂಧೆೇ ಹಾಗೂ ಆರ್ ಯಲ್ ಲಾ ಕಾಲೇಜಿನ ನಿವೃತ್ತ ಪ್ರಾಂಶಿಪಾಲ ವಿ ಯನ್ ಜೋಶಿ ಮುಂತಾದವರು ಉಪಸ್ಥಿತರಿದ್ದರು.
ಬಿ. ಕೆ. ರೂಪಾ ಸ್ವಾಗತಿಸಿದರು. ಬಿ ಕೆ. ವಿದ್ಯಾ ಅಕ್ಕನವರು ನಿರೂಪಿಸಿದರು, ಬಿ. ಕೆ ದತ್ತಾತ್ರೆಯ ವಂದಿಸಿದರು.