ಗ್ರಾಮೀಣ ಭಾಗದ ಅಕ್ರಮ ಸಾರಾಯಿ ಮಾರಾಟ ನಿಷೇಧಿಸಬೇಕು - ಶ್ರೀಕಾಂತ ದುಂಡಿಗೌಡ್ರ
ಶಿಗ್ಗಾವಿ 01: ಗ್ರಾಮೀಣ ಪ್ರದೇಶದ ಜನರು ಬಹುತೇಕವಾಗಿ ದಿನಗೂಲಿ ಮಾಡುವಂತವರಾಗಿದ್ದು,ಪ್ರತಿದಿನ ದುಡಿದ ಹಣವನ್ನು ಕುಡಿತಕ್ಕೆ ಹಾಳು ಮಾಡುತ್ತಿದ್ದಾರೆ ಅಕ್ರಮ ಸರಾಯಿ ಮಾರಾಟವು ಕಾನೂನು ಬಾಹಿರವಾದದ್ದರಿಂದ, ಗ್ರಾಮೀಣ ಆರ್ಥಿಕತೆಗೆ ನಷ್ಟವನ್ನುಂಟು ಮಾಡುತ್ತಿದೆ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು. ತಾಲೂಕಿನ ಬನ್ನೂರ ಅಕ್ರಮ ಸಾರಾಯಿ ಮಾರಾಟದ ವಿರುದ್ಧ ಮಹಿಳೆಯರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಅಕ್ರಮವಾಗಿ ಮಾರಾಟ ಮಾಡಿರುವ ಸರಾಯಿ ಸರ್ಕಾರಕ್ಕೆ ತೆರಿಗೆ ಇರುವುದಿಲ್ಲ, ಇದು ದೇಶದ ಆರ್ಥಿಕ ಬೆಳವಣಿಗೆಯನ್ನು ಕಡಿತಗೊಳಿಸುತ್ತದೆ. ಆದ್ದರಿಂದ ಈ ಕೂಡಲೇ ತಾಲ್ಲೂಕ ಆಡಳಿತ ಎಚ್ಚೆತ್ತುಕ್ಕೊಂಡು ಗ್ರಾಮೀಣ ಪ್ರದೇಶಗಳಲ್ಲಿನ ಅಕ್ರಮ ಸಾರಾಯಿ ಮಾರಾಟದ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಗ್ರಾಮದ ಹಿರಿಯರ ಯುವಕರ ಮಹಿಳೆಯರ ಜೊತೆಗೂಡಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ವೇ.ಮೂ. ಶಿವಾನಂದಯ್ಯ ಹಿರೇಮಠ, ಮಹಾಲಿಂಗಯ್ಯ ಚಿಕ್ಕಮಠ, ಕುಬೇರಗೌಡ ಪೊಲೀಸಗೌಡ್ರ, ಶಂಭನಗೌಡ ಪೊಲೀಸ ಪಾಟೀಲ, ಟಾಕಣಗೌಡ ಪಾಟೀಲ, ವೀರನಗೌಡ ಪಾಟೀಲ, ಎಫ್ ವಿ ಪೋಲೀಸಗೌಡ್ರ, ಬಾಪುಗೌಡ ಪಾಟೀಲ, ಹಸನಸಾಬ ಶೇಖಸನದಿ, ಮಹದೇವಪ್ಪ ಅಗಡಿ, ಗುಡ್ಡಪ್ಪ ಹರಿಜನ,ಸವಿತಾ ಕುನ್ನೂರ, ನೀಲವ್ವ ದೊಡ್ಡಮನಿ, ಚನ್ನವ್ವ ಮೆಳ್ಳಾಗಟ್ಟಿ, ಮಾದೇವಿ ದೊಡ್ಡಮನಿ,ಲಕ್ಷ್ಮವ್ವ ಮೂಕಪ್ಪನವರ, ಶಾಂತವ್ವ ದುಂಡಿಗೌಡ್ರ, ಮಂಜುಳಾ ಮೂಕಪ್ಪನವರ,ಕಲ್ಪನಾ ದೊಡ್ಮನಿ,ಗಂಗವ್ವ ಮೆಳ್ಳಾಗಟ್ಟಿ,ಪುಷ್ಪಾ ಮಡಿವಾಳರ, ನೇತ್ರಾ ಮೆಳ್ಳಾಗಟ್ಟಿ, ಇನ್ನೂ ಅನೇಕರು ಇತರರಿದ್ದರು.