ಲೋಕದರ್ಶನ ವರದಿ
ಬೆಳಗಾವಿ 04: ಭಕ್ತನ ಅಥವಾ ಶಿಷ್ಯನ ಅಜ್ಞಾನ ಅಂಧಕಾರ, ಮೂಢನಂಬಿಕೆಗಳನ್ನು ದೂರ ಮಾಡಿ, ಬಾಳಿನಲ್ಲಿ ಬೆಳಕು ಕರುಣಿಸುವವನು ಶ್ರೇಷ್ಠ ಗುರು. ಅಂಥ ಗುರುವಿನ ಅನುಗ್ರಹದಿಂದ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಗಳು ಹೇಳಿದರು.
ಅವರು ತಮ್ಮ ಶ್ರೀಮಠದಲ್ಲಿ ಪ್ರತಿ ತಿಂಗಳು ಮೊದಲನೇ ಸೋಮವಾರದಂದು ನಡೆಯುವ 215ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನಿಧ್ಯವಹಿಸಿ ಪ್ರಸಾದವಾಣಿ ದಯಪಾಲಿಸಿದರು.
ಮಲ್ಲೂರಿನ ಪ್ರಣವಂ ಫೌಂಡೇಶನ್ದ ಸಂಸ್ಥಾನಕ ನಿಶ್ಚಲ ಸ್ವರೂಪಾನಂದ ಸ್ವಾಮಿಗಳು ಆಧ್ಯಾತ್ಮ ಚಿಂತನ ಕುರಿತು ಮೌಲಿಕವಾದ ಉಪನ್ಯಾಸ ನೀಡಿದರು. ಶ್ರೀಮಠದ ಉತ್ತರಾಧಿಕಾರಿ ಶಿವಯೋಗಿ ದೇವರು ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು.
ಮಹಾನಗರ ಪಾಲಿಕೆ ಸದಸ್ಯೆ ಸರಳಾ ಹೇರೇಕರ್, ಶರಣರಾದ ಎಸ್. ಎ. ವಿಭೂತಿ, ವಿಜಯಶಾಸ್ತ್ರಿ ಹಿರೇಮಠ, ಮುಂತಾದವರು ಪಾಲ್ಗೊಂಡಿದ್ದರು. ಉಮನ್ಯಾಸಕ ಎ. ಕೆ. ಪಾಟೀಲ ಸ್ವಾಗತಿಸಿ, ನಿರೂಪಿಸಿದರು. ರಾಜು ಪಡಗುರಿ ಗ್ರಂಥ ಪುಷ್ಪಾರ್ಪಣೆ, ವಕೀಲರಾದ ವಿ. ಕೆ. ಪಾಟೀಲ ಶರಣು ಸಮರ್ಪಣೆ ಮಾಡಿದರು.