ಇಂಗಳಗಿ ನಾಗರಾಜ್ ಇವರಿಗೆ ಕರ್ನಾಟಕ ವಿಭೂಷಣ ಪ್ರಶಸ್ತಿ ಪ್ರದಾನ

ಲೋಕದರ್ಶನ ವರದಿ

ಗಂಗಾವತಿ: ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನೀಯರಿಂಗ್ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಕರ್ನಾಟಕ ಸರಕಾರ ಸಹಯೋಗದೊಂದಿಗೆ ಬೆಂಗಳೂರಿನ ನಯನ ಸಂಭಾಗಣದಲ್ಲಿ ಗುರುವಾರ ಜರುಗಿದ ಕೆಂಪೆಗೌಡ ಕರ್ನಾಟಕ ಸಾಂಸ್ಕೃತಿಕ ಉತ್ಸವ-2019 ಕಾರ್ಯಕ್ರಮದಲ್ಲಿ ಕಲಾ ಸೇವೆ ಮತ್ತು ಪತ್ರಿಕಾ ರಂಗದಲ್ಲಿನ ಶ್ರಮಕ್ಕಾಗಿ ನಾಗರಾಜ್ ಇಂಗಳಗಿ ಇವರಿಗೆ ವಿಧಾನ ಪರಿಷತ್ ಸದಸ್ಯ ಅ.ದೇವೆಗೌಡರು ಕರ್ನಾಟಕ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. ಸರಟೂರು ಧರ್ಮಶ್ರೀ ಸೇವಾ ಸಮಿತಿಯ ಅಧ್ಯಕ್ಷರಾದ ಫಕೀರೇಶ್ವರ ಮಹಾಸ್ವಾಮಿಗಳು, ಚಲನಚಿತ್ರ ನಟರಾದ ಶಂಕರ್ ಭಟ್, ಡಾ.ಹೆಜ್ಜಾಜಿ ಮಹಾದೇವ, ಮೀನಾ, ಇಂದು ಸಂಜೆ ಪತ್ರಿಕೆ ಸಂಪಾದಕ ಗುರುರಾಜ್ ಹೂಗಾರ್ ಹಾಗೂ ಸಂಘಟಕ ಹಾಗೂ ಚಲನಚಿತ್ರ ನಿರ್ದೇಶಕ ರಮೇಶ್ ಸುರ್ವೆ  ಇತರರಿದ್ದರು.