ಸಂಘಟನೆ ಶಕ್ತಿ ಕ್ರಿಯಾಶೀಲವಾಗಿದ್ದರೆ ಸಮಾಜಕ್ಕೆ ಉನ್ನತ ಕೊಡುಗೆ

ಲೋಕದರ್ಶನ ವರದಿ

ಯಲ್ಲಾಪುರ 6: ಸಂಘಟನೆ ಶಕ್ತಿ ಕ್ರಿಯಾಶೀಲವಾಗಿದ್ದರೆ ಸಮಾಜಕ್ಕೆ ಉನ್ನತ ಕೊಡುಗೆ ನೀಡಲು ಸಾಧ್ಯ. ಆ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉತ್ತಮ ಕಾರ್ಯ ಮಾಡುತ್ತಿರುವುದು ಎಲ್ಲ ಸಂಘಟನೆಗೆ ಮಾದರಿ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

     ಅವರು ಭಾನುವಾರ ತಾಲೂಕಿನ ಅರಬೈಲ್ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಲ್ಲಾಪುರ-ಮುಂಡಗೋಡ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಮ್ಮಿಕೊಂಡ ಗುಳ್ಳಾಪುರ ಮತ್ತು ಅರಬೈಲ್ ಸಂಘಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಧರ್ಮಸ್ಥಳ ಸಂಘ ಅನೇಕ ಕುಟುಂಬಗಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದು, ಆಥರ್ಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿಯೂ ಎಲ್ಲ ಸಹಕಾರವನ್ನು ನೀಡುತ್ತಿದೆ. ಬಡವರ ಹಣವನ್ನು ಬಡವರಿಗಾಗಿಯೇ ಮೀಸಲಿಟ್ಟು ಧರ್ಮಸ್ಥಳದ ಧಮರ್ಾಧಿಕಾರಿ ವಿರೇಂದ್ರ ಹೆಗ್ಗಡೆ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಆಥರ್ಿಕವಾಗಿ ಬಲಿಷ್ಠಗೊಳ್ಳುವ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

       ಒಂದು ಸಕರ್ಾರ ಕೈಗೊಳ್ಳುವ ಯಾವುದೇ ಯೋಜನೆಗಳು ತಲುಪುವುದಕ್ಕಿಂತ ಯಶಸ್ವಿಯಾಗಿ ಗ್ರಾಮಾಭಿವೃದ್ಧಿ ಯೋಜನೆ ಸಾರ್ವಜನಿಕರನ್ನು ತಲುಪುತ್ತಿರುವುದು ಶ್ಲಾಘನೀಯ. ಆಥರ್ಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿರುವ ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಯ ಚಿಂತನೆಯ ಹಿನ್ನೆಲೆಯಲ್ಲಿ ಕಾರ್ಯ ಕೈಗೊಂಡಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಂತಾನುಹಂತವಾಗಿ ಆಶಯದ ಅನುಷ್ಠಾನದಲ್ಲಿ ಅತ್ಯಂತ ವ್ಯವಸ್ಥಿತ ಸಾಧನೆ ಮಾಡಿದೆ ಎಂದರು. 

   ಪ್ರಗತಿ ಬಂಧು ಸ್ವಸಹಾಯ ಸಂಘದ ಅಧ್ಯಕ್ಷ ವಿಷ್ಣು ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಸದಸ್ಯೆ ಚಂದ್ರಕಲಾ ಭಟ್ಟ, ಇಡಗುಂದಿ ಗ್ರಾ.ಪಂ ಸದಸ್ಯರಾದ ಶ್ರೀಕಾಂತ ಶೆಟ್ಟಿ, ನಾಗರಾಜ ನಾಯ್ಕ, ಆನಂದರಾಯ ಗೋಳ್ಸಂಗಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಾಕೇಶ, ಮೇಲ್ವಿಚಾರಕ ಪ್ರಶಾಂತ, ಪ್ರಮುಖರಾದ ಕೃಷ್ಣಾನಂದ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.