ಮನಸ್ಸು ನಿರ್ಮಲವಾಗಿದ್ದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ: ಮಹೇಶ ಮಾಸಲ್‌

ಬೆಳಗಾವಿ 23: ಮನೆಯಾಗಲೀ ಮನಸ್ಸಾಗಲೀ ನಿರ್ಮಲವಾಗಿದ್ದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ. ಹಾಗೆ ನಾವು ಜೀವನ ಗುರಿ ಮುಟ್ಟಬೇಕಾದರೆ  ಏಕಾಗ್ರತೆ, ಸಮ ಚಿತ್ತದಿಂದ ಕೆಲಸ, ಕಾರ್ಯಗಳನ್ನು ಮಾಡಬೇಕು  ಎಂದು ಮಾನವ ಮನೋವೃತ್ತಿ ಕೋಚ್‌ ಮತ್ತು ಉತ್ಸಾಹಿ  ತರಬೇತಿದಾರ ( mindset counselling  ) ಮಹೇಶ ಮಾಸಲ್‌ ಅವರು ಹೇಳಿದರು.

ಇಲ್ಲಿನ ನೆಹರು ನಗರದ ಕನ್ನಡ ಭವನದಲ್ಲಿ ಲಿಂಗಾಯತ  ಮಹಿಳಾ ಸಮಾಜ , ಮಹಾಲಕ್ಷ್ಮೀ ಮಹಿಳಾ ಮಂಡಳ ಹಾಗೂ ಕನ್ನಡ ಭವನ ಬೆಳಗಾವಿ ಸಹಯೋಗದಲ್ಲಿ ಸೋಮವಾರ    ʻʻಓ ಮನಸೇ ... ರಿಲ್ಯಾಕ್ಸ್‌ ʼʼ ಹಾಗೂ ಚಿಂತನ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು,

ಬೇರೆಯವರು ಹೇಳಿದ ಮಾತಿನಿಂದ ನೆಮ್ಮದಿ ಸಿಗುವಂತಿದ್ದರೆ ಪ್ರಪಂಚದಲ್ಲಿ ಪ್ರತಿಯೊಬ್ಬರೂ ಈ ಶಬ್ದಕ್ಕೆ ಉತ್ತರವನ್ನೇ ಹುಡುಕುತ್ತಿರಲಿಲ್ಲ. ನೆಮ್ಮದಿ ಅನ್ನುವುದು ವ್ಯಕ್ತಿಯ ಮನೋಭಾವಕ್ಕೆ ಸಂಬಂಧಪಟ್ಟಿದ್ದು. ನಿಮಗೆ ಯಾವ ಕೆಲಸವನ್ನು ಮಾಡಿದರೆ ಮನಸ್ಸಿಗೆ ಆನಂದ ಸಿಗುತ್ತದೆಯೋ ಆ ಕೆಲಸವನ್ನು ಮುಂದುವರಿಸಿ ಮನಸ್ಸಿಗೆ ತಾನಾಗಿಯೇ ನೆಮ್ಮದಿ ಸಿಗುತ್ತದೆ ಎಂದು ಕಿವಿಮಾತು ಹೇಳಿದರು.

ಯಾರನ್ನು ದೋಷಿಸಬಾರದು, ಕೈಲಾದಷ್ಟು ಪ್ರೀತಿ ಹಂಚಬೇಕು. ಮನಸ್ಸುಗಳನ್ನು ಕದಡಬಾರದು.

ಸಂಬಂಧಗಳು ಬಹುಪಾಲು ಸಂದರ್ಭದಲ್ಲಿ ಹಾಳಾಗುವುದು ಸ್ವಾರ್ಥದಿಂದ. ಕನಿಷ್ಠ ಬಾಂಧವ್ಯಕ್ಕಾಗಿಯಾದರೂ ಸ್ವಾರ್ಥ ಕಡಿಮೆ ಮಾಡಿಕೊಳ್ಳಿ. ಯಾರನ್ನುವಸ್ವಾರ್ಥಕ್ಕಾಗಿ ಬಳಸಿಕೊಳ್ಳಬೇಡಿ, ನೀವೂ ಹಾಗೆ ಬಳಕೆಯಾಗಬೇಡಿ‌. ಇಷ್ಟವಿಲ್ಲದ್ದನ್ನು ನೇರವಾಗಿ ನಯವಾಗಿಯೇ ನಿರಾಕರಿಸಿ. ಕೊಪಗೋಳುವುದು ಬೇಡ ಎಲ್ಲವನ್ನೂ ಸಮನಾಗಿ ಸ್ವೀಕರಿಸಿದಾಗ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯ.‌

ನಮಗೆ ಅಂದವೂ ಎಷ್ಟು  ಮುಖ್ಯವೋ..ನಮ್ಮ ಸುತ್ತಲಿನ ಪರಿಸರವು ಅಷ್ಟೇ ಮುಖ್ಯ. ಎಲ್ಲವನ್ನೂ ಸ್ವಚ್ಚವಾಗಿ ಇರಿಸಿಕೊಂಡು ಮಾನವೀಯತೆದೆಡೆ ಸಾಗೋಣ. ಜಗತ್ತು  ಸುಂದರವಾಗಿ‌ ಕಾಣಬೇಕಾದರೆ ಮನ-ಮನಸ್ಸುಗಳನ್ನು ಸ್ವಚ್ಚವಾಗಿ ಇರಿಸಿಕೊಳ್ಳಬೇಕು‌. ಎನ್ನುತ್ತ ಮನುಷ್ಯನಿಗೆ ನೆಮ್ಮದಿ ಮುಖ್ಯ,  ಹಣ ಅಲ್ಲ ನೆನಪಿರಲಿ ಎಂದರು. 

ಈ ಸಂದರ್ಭದಲ್ಲಿ   ಕನ್ನಡ ಭವನದ ಕಾರ್ಯದರ್ಶಿಗಳು, ಲೇಖಕರಾದ ಯ.ರು ಪಾಟೀಲ, ಸುನೀತಾ ಪಾಟೀಲ ಅವರು ಅಧ್ಯಕ್ಷತೆ  ವಹಿಸಿದರು. ಸಹ ಕಾರ್ಯದರ್ಶಿ  ವಿದ್ಯಾ ಗೌಡರ ಅವರು ಅತಿಥಿ ಪರಿಚಯಿಸಿದರು.     ಮಹಾಲಕ್ಷ್ಮೀ ಮಂಡಳದ  ಅಧ್ಯಕ್ಷೇ  ರಾಜೇಶ್ವರಿ ಕಲೂತಿ ಹಾಗೂ ಖಜಾಂಚಿ ಶೋಭಾ ಪಾಟೀಲ,   ಲಿಂಗಾಯತ ಮಹಿಳಾ ಸಮಾಜದ ಗೌರವ ಸದಸ್ಯೆ  ಶೈಲಜಾ ಪಾಟೀಲ,  ರತ್ನಪ್ರಭಾ ಬೆಲ್ಲದ,  ಕಾರ್ಯದರ್ಶಿ  ಶಾರದಾ ಪಾಟೀಲ  ನಿರೂಪಿಸಿದರು. ಲಕ್ಷ್ಮೀ ಪಾಟೀಲ ವಂದಿಸಿದರು.