ದೇಶದಲ್ಲಿಯೇ ನಂ.1 ಬಿಗ್ ಬಾಸ್ ಕಾರ್ಯಕ್ರಮ 29 ರಂದು ನಮ್ಮ ಕಲರ್ಸ್ ಕನ್ನಡದಲ್ಲಿ...

ಕಿಚ್ಚ ಸುದೀಪ್ ಸತತ 11 ನೇ ಬಾರಿ ಹೋಸ್ಟ್  ಮಾಡುತ್ತಿರುವ ಬಿಗ್ ಬಾಸ್ ಕಾರ್ಯಕ್ರಮ ದೇಶದಲ್ಲಿಯೇ  ನಂ.1 ಸ್ಥಾನದಲ್ಲಿರುವುದು ವಿಶೇಷ. ಸ್ವರ್ಗ-ನರಕ ಥೀಮ್ ನಲ್ಲಿ ಬರುವುದರಿಂದ ಹೆಚ್ಚು ಕುತೂಹಲವನ್ನು ಹುಟ್ಟು ಹಾಕಿದೆ.

ಬಿಗ್ ಬಾಸ್ ಕಾರ್ಯಕ್ರಮ ದೇಶದಲ್ಲಿಯೇ ಹಿಂದಿ ಹೊರತುಪಡಿಸಿ ಕನ್ನಡದಲ್ಲಿ ಹೆಚ್ಚು ಯಶಸ್ವಿಯಾಗಿದೆ. ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಹೊಸ ಹೊಸ ಸವಾಲುಗಳೊಂದಿಗೆ ಸೆಪ್ಟೆಂಬರ್ 29ಕ್ಕೆ  ಕನ್ನಡಿಗರ  ಮನೆಮನೆಗೆ ಅದ್ಧೂರಿಯಾಗಿ ಎಂಟ್ರಿ ಕೊಡಲಿದೆ..

ಕನ್ನಡದ ಬಿಗ್ ಬಾಸ್ ಕಾರ್ಯಕ್ರಮ ಜನಸಾಮಾನ್ಯರ ಕಾರ್ಯಕ್ರಮ. ಇಲ್ಲಿ ಹಲವಾರು ಜನರಿಗೆ ಹೊಸ ಬದುಕನ್ನು ನೀಡಿದೆ. ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ರಾಜ್ಯದ ಎಲ್ಲಾ ಭಾಗಗಳಿಂದ 16 ಪ್ರತಿಭೆಗಳನ್ನು ಆಯ್ಕೆ ಮಾಡಲಾಗುತ್ತದೆ. ಅಲ್ಲದೇ ವೀಕ್ಷಕರೇ ಹಲವು ಸ್ಪರ್ಧಿಗಳನ್ನು ಆಯ್ಕೆ ಮಾಡಿರುವುದು ಬಿಗ್ ಬಾಸ್ 11 ರ ಇನ್ನೊಂದು ವಿಶೇಷ.

ಕಲರ್ಸ್  ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ & ಟೀಮ್ ಬರುವ ಭಾನುವಾರ ಹತ್ತಾರು ಹೊಸತನದಲ್ಲಿ   ಬರುವ ಗ್ಯಾರಂಟಿ ನೀಡಿದ್ದಾರೆ. ಬರುವ ಶನಿವಾರ ರಾಜಾರಾಣಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಹೆಸರು ಪ್ರಕಟಗೊಳ್ಳಲಿದೆ. ಸೆಪ್ಟೆಂಬರ್ 29 ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ಚಾನಲ್ ಹಾಗೂ 9.30 ರಾತ್ರಿ ಜಿಯೋ ಸಿನಿಮಾ ಆಪ್ ನಲ್ಲಿ ಬಿಗ್ ಬಾಸ್ ವೀಕ್ಷೀಸಬಹುದು.

ಬಿಗ್ ಬಾಸ್ ಬಿಗ್ ಬಾಸ್ ಸೀಸನ್ - 11 ಪ್ರಾರಂಭದ ಪ್ರೆಸ್ ಮೀಟ್ ನಲ್ಲಿ ಅಲೋಕ್ ಜೈನ್ , ಪ್ರೆಸಿಡೆಂಟ್, ಜನರಲ್ ಎಂಟರ್ಟೇನ್ಮೆಂಟ್, ಬಾನಿಜೆ ಏಷ್ಯಾ ಹಾಗೂ ಎಂಡಮಾಲ್ ಶೈನ್ ಇಂಡಿಯಾದ ಸಂಸ್ಥಾಪಕ ದೀಪಕ್ ಧರ್, ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್, ಪ್ರಂಶಾಂತ್ ಹಾಗೂ ಕಿಚ್ಚ ಸುದೀಪ್ ಬಿಗ್ ಬಾಸ್ ಯಶಸ್ಸಿನ ಹಾದಿಯ ಬಗ್ಗೆ ಮುಕ್ತವಾಗಿ ಮಾತನಾಡಿದರು