ಕೊಡಗಿನಲ್ಲಿ ಲಕ್ಷಾಂತರ ಜನರ ಕಗ್ಗೊಲೆ ಮಾಡಿದ ವ್ಯಕ್ತಿ ಟಿಪ್ಪು: ಮತ್ತೇ ಕಿಡಿಕಾರಿದ ಶಾಸಕ ಬಸವನಗೌಡ ಪಾಟೀಲ ಯತ್ನಾಳ

ಜಮಖಂಡಿ 23: ಹಿಂದು ಸಮಾಜವನ್ನು ಮುಗಿಸುವ ಗುರಿಯನ್ನು ಹೊಂದಿದ ಟಿಪ್ಪು ಸುಲ್ತಾನ ಕೊಡಗಿನಲ್ಲಿ ಲಕ್ಷಾಂತರ ಮಂದಿಯ ಕಗ್ಗೊಲೆಯನ್ನು ಮಾಡಿದ ವ್ಯಕ್ತಿ. ಕೇರಳ ಮತ್ತು ಕರ್ನಾಟಕ ರಾಜ್ಯದಲ್ಲಿ 350 ದೇವಸ್ಥಾನವನ್ನು ನಿರ್ಣಾಮ ಮಾಡಿದ್ದು, ಮೇಲುಕೋಟಿಯಲ್ಲಿ ಇಂದಿಗೂ ದೀಪಾವಳಿಯ ಹಬ್ಬವನ್ನು ಆಚರಣೆ ಮಾಡುವುದಿಲ್ಲ, ದೇಶ ದ್ರೋಹಿ, ಹಿಂದು ಸಮಾಜವನ್ನು ಮತಾಂಧರ, ಹಿಂದು ಮಹಿಳೆಯರನ್ನು ಅತ್ಯಾಚಾರ ಮಾಡಿದ ವ್ಯಕ್ತಿ ಟಿಪ್ಪು ಸುಲ್ತಾನ ಎಂದು ವಿಜಯಪೂರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಮತ್ತೇ ಕಿಡಿಕಾರಿದರು. 

ನಗರದ ಉಮೇಶ ಆಳಮೇಲಕರ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಧೋಳ ನಗರದಲ್ಲಿ ಗಣೇಶನ ವಿಸರ್ಜಣೆಯಲ್ಲಿ ಟಿಪ್ಪು ಸುಲ್ತಾನ ಅವರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆಂದು ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ದೇಶದಲ್ಲಿ ಟಿಪ್ಪು ಸುಲ್ತಾನ, ಓರಂಗ್‌ಜೇಬ್ ಅವರ ವೈಭವೀಕರಣ ನಡೆಯಬಾರದು. ಕ್ರೂರ ಸುಲ್ತಾನರ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ಆದರೆ ನಮ್ಮ ಮೇಲೆ ಪ್ರಕರಣ ದಾಖಲಿಸಿದಕ್ಕೆ ಕಾನೂನಿನ ಪ್ರಕಾರ ಹೋರಾಟ ಮಾಡಲಾಗುತ್ತದೆ ಎಂದರು. 

ಮುಸ್ಲಿಂ ಸಮಾಜದವರು ಮೊದಲು ಟಿಪ್ಪು ಸುಲ್ತಾನರ ಬಗ್ಗೆ ತಿಳಿದು ಮಾತನಾಡಿ ಎಂದು ನನಗೆ ಹೇಳಬೇಕಾಗಿಲ್ಲ. ನಾನು ಟಿಪ್ಪು ಸುಲ್ತಾನ, ಛತ್ರಪತಿ ಶಿವಾಜಿ, ಮಾಹಾ ರಾಣಾಪ್ರತಾಪ ಸಿಂಹ ಹೀಗೆ ಹಲವಾರು ವ್ಯಕ್ತಿಗಳ ಬಗ್ಗೆ ಜೀವನ ಚರಿತ್ರೆಯನ್ನು ಓದಿ ತಿಳಿದುಕೊಂಡಿದ್ದೇನೆ. ದೇಶದಲ್ಲಿ ಇತಿಹಾಸವನ್ನು ತಿರುಚಿದ್ದಾರೆಂದು ತಿಳಿದ್ದುಕೊಂಡಿದ್ದೇನೆ. ಮಾಹಾ ರಾಣಾಪ್ರತಾಪ ಸಿಂಹ ಅವರ ಬಗ್ಗೆ ಚರಿತ್ರೆಯಲ್ಲಿ ಎಲ್ಲೂ ಇತಿಹಾಸದಲ್ಲಿ ಉಲ್ಲೇಖ ಮಾಡಿರುವುದಿಲ್ಲ. ಇತಿಹಾಸದಲ್ಲಿ ತಪ್ಪುಗಳನ್ನು ಮಾಡಿದ್ದಾರೆ. ಅದರ ಬಗ್ಗೆ ಪ್ರಧಾನಿ ಮೋದಿಜಿಯವರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ. ಸತ್ಯವಾದ ಇತಿಹಾಸವನ್ನು ಜನತೆ ಮುಂದೆ ತರಲು ಪ್ರಯತ್ನ ಮಾಡಿದ್ದಾರೆ. ದೇಶದಲ್ಲಿ ಮೊಗಲರ ಬಗ್ಗೆ ಪ್ರಶಂಸೆ ಮಾಡುವದು, ಅವರಿಂದ ಒಂದು ದೊಡ್ಡ ಕ್ರಾಂತಿ ಆಗದೆ ಎಂದು ಪಠ್ಯಪುಸ್ತಕದಲ್ಲಿ ಬಿಂಬಿಸಿ ಮಕ್ಕಳಲ್ಲಿ ತಿಳುವಳಿಕೆಯನ್ನು ನೀಡುತ್ತಿದ್ದಾರೆ. ಅದರಿಂದ ಹಿಂದು ಮಕ್ಕಳು ಹಾಗೂ ಹಿಂದುಗಳು ಹೊರಬರಬೇಕಾಗಿದೆ ಎಂದರು. 

ರಾಣಾ ಪ್ರತಾಪಸಿಂಹ, ಶಿವಾಜಿ ಮಹಾರಾಜರು ಎಷ್ಟು ಶೂರರ ಇದ್ದರು ಎಂಬುದರ ಬಗ್ಗೆ ಮಕ್ಕಳಲ್ಲಿ ತಿಳಿಸಬೇಕಾಗಿದೆ. ಅಕ್ಬರ್‌ನು ರಾಣಾ ಪ್ರತಾಪಸಿಂಹ ಅವರ ಎದುರಿಗೆ ಬರಲ್ಲೇ ಇಲ್ಲ. ಒಂದು ಯುದ್ಧದಲ್ಲಿ ಸಹ ಮುಂದೆ ಬರಲಿಲ್ಲ ಇಂತಹ ಹೇಡಿ, ಟಿಪ್ಪು ಸುಲ್ತಾನ ಖಡ್ಗದ ಮೇಲೆ ಕಾಫೀರ್ ಅವರ ರಕ್ತ ಬೇಕಾಗಿದೆ ಎಂದು ಬರೆದಿದ್ದಾರೆ. ಟಿಪ್ಪು ಸುಲ್ತಾನನ ಬಗ್ಗೆ ಯಾರು ವೈಭವೀಕರಣ ಮಾಡುತ್ತಾರೆ. ಅವರ ಅಂತ್ಯವಾಗುತ್ತದೆ ಎಂದು ಟೀಕಿಸಿದರು. 

ಶಾಸಕ ವಿಜಯಾನಂದ ಕಾಶಪ್ಪನ್ನವರ ಅವನೊಬ್ಬ ಸಾಬರಿಗೆ ಹುಟ್ಟಿದ ಹಾಗೆ ಆಗಿದೆ. ಮುಂದಿನ ಚುನಾವಣೆಯಲ್ಲಿ ಹಿಂದುಗಳು ಯಾರು ಆತನಿಗೆ ಮತವನ್ನು ಹಾಕುವುದಿಲ್ಲ. ಕೇವಲ ಸಾಬರು ಮಾತ್ರ ಮತಗಳನ್ನು ಹಾಕುತ್ತಾರೆ ಎಂದು ವ್ಯಂಗ್ಯವಾಡಿದರು. ಪಾದಯಾತ್ರೆಯನ್ನು ಮಾಡಿದ್ದು ಡಾಂಭೀಕವಾಗಿ ಮಾಡಿದ್ದಾನೆ. ಸಬ್ ರಿಜಿಸ್ಟರ್ ಕಚೇರಿಯಲ್ಲಿ ಖರೀದಿಯನ್ನು ಹಾಕಿಕೊಳ್ಳಬೇಕಾದರೆ ಹಣ ನೀಡಬೇಕಂತೆ ಎಂದು ಆರೋಪಿಸಿ, ಅವನೊಬ್ಬ ಅಯೋಗ್ಯನಿದ್ದಾನೆ ಎಂದು ಲೇವಡಿ ಮಾಡಿದರು. ಆತ ಪಶ್ಚಾತಾಪ ಪಡೆದುಕೊಳ್ಳುತ್ತಿದ್ದಾನೆ. ಲೋಕಸಭೆ ಚುನಾವಣೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿಸಿ ತೀರಿಸುತ್ತೇನೆಂದು ಬಹಳವಾಗಿ ಹಾರಾಡುತ್ತಿದ್ದ. ಯಾಕೆ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರು ಎಂದು ಪ್ರಶ್ನಿಸಿದರು.  ಆದರೆ ಹಣವನ್ನು ಪಡೆದುಕೊಂಡು ಸುಮ್ಮನೆ ಕುಳಿತಿದ್ದಾನೆ ಆತ ಚುನಾವಣೆಯಲ್ಲಿ ಏನು ಮಾಡಲಿಲ್ಲ ಎಂದು ಗಜಕೇಸರಿ ಟೀಮ್‌ಗೆ ಟೀಕಿಸಿದರು. 

2ಎ, ಮೀಸಲಾತಿ :

ಪಂಚಮಸಾಲಿ ಸಮಾಜಕ್ಕೆ ಬಹಳ ಮೋಸವನ್ನು ಮಾಡಿದ್ದಾನೆ. ಇವಾಗ ಯಾವುದೇ ಚಕ್ಕಾರ ಎತ್ತುತ್ತಿಲ್ಲ. ಎಲ್ಲ ಪಂಚಮಸಾಲಿಯವರು ಹೋರಾಟ ಮಾಡುತ್ತಿದ್ದಾರೆ. ಆದರೆ ಇವನ್ನೊಬ್ಬ ಚುನಾವಣೆಯಲ್ಲಿ ಗೆಲುವುಗೋಷ್ಕರ ಮೀಸಲಾತಿ ಅಸ್ತ್ರವನ್ನು ಮುಂದೆ ಇಟ್ಟುಕೊಂಡಿದ್ದಾನೆ. ಇವಾಗ ಕಾಂಗ್ರೇಸ್ ಶಾಸಕರು ಮಾತನಾಡುತ್ತಿಲ್ಲ. ನಾನು ಬಿಜೆಪಿ ಸರಕಾರ ಇದ್ದ ಸಂದರ್ಭದಲ್ಲಿ ಧ್ವನಿ ಏತ್ತುತ್ತಿದೆ. 2ಬಿ, ಮೀಸಲಾತಿಯನ್ನು ಕೇವಲ ಪಂಚಮಸಾಲಿ ಸಮಾಜಕ್ಕೆ ನೀಡಿಲ್ಲ. ಎಲ್ಲ ಉಪಜಾತಿ ಪಂಗಡದ ಸಮಾಜಕ್ಕೆ ನೀಡಿದ್ದಾರೆ ಎಂದರು.