ಜಾನುವಾರುಗಳು ರೋಗಕ್ಕೀಡಾದರೆ-ಕಾಣೆಯಾದರೆ ತಕ್ಷಣ ಮಾಹಿತಿ ಲಭ್ಯವಾಗುವ ಚಿಪ್ ಅಳವಡಿ

ಯಲ್ಲಾಪುರ 24: ರೈತರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಎಲ್ಲ ಜಾನುವಾರುಗಳ ಕಿವಿಗೆ ಚಿಪ್ ಅಳವಡಿಸಲಾಗುತ್ತಿದ್ದು, ಇದರಿಂದ ಯಾವುದೇ ಜಾನುವಾರುಗಳು ರೋಗಕ್ಕೀಡಾದರೆ ಅಥವಾ ಕಾಣೆಯಾದರೆ ತಕ್ಷಣ ಮಾಹಿತಿ ಲಭ್ಯವಾಗುತ್ತದೆ. ಅಲ್ಲದೇ, ಅಕಾಲಿಕ ಮರಣವನ್ನಪ್ಪಿದರೆ ಸಕರ್ಾರದ ವಿಮೆ ಪಡೆಯಲು ಅನುಕೂಲವಾಗುತ್ತದೆ. ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.

                ಅವರು  ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ. 'ಜಿಲ್ಲೆಯಲ್ಲಿ 230 ಫಲಾನುಭವಿಗಳಿಗೆ ವಿಮೆ ಸೌಲಭ್ಯ ದೊರೆತಿಲ್ಲ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಕುರಿತಾಗಿಯೂ ತಕ್ಷಣ ಗಮನ ಹರಿಸಲಾಗುವದು ಎಂದರು. ಜಾನುವಾರುಗಳ ಕಿವಿಗೆ ಚಿಪ್ ಅಳವಡಿಸುವ ಕಾರ್ಯ ಜಿಲ್ಲೆಯಲ್ಲಿ ಶೇ 60ರಷ್ಟು ಮಾತ್ರ ಕಾರ್ಯಗತವಾಗಿದೆ.

                ಆದ್ದರಿಂದ ಇಂಥ ಉಪಯುಕ್ತ ಯೋಜನೆಯನ್ನು ಎಲ್ಲ ಪ್ರದೇಶಗಳ ಹೈನುಗಾರರಿಗೆ ತಲುಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ತ್ವರಿತ ಗಮನ ಹರಿಸಬೇಕು ಎಂದರು.ರಾಜ್ಯದಲ್ಲಿ 600 ಪಶುವೈದ್ಯರ ಹುದ್ದೆ ಖಾಲಿ ಇದ್ದು, ಇನ್ನು 2 ತಿಂಗಳ ಒಳಗೆ ಕುರಿತು ನೂತನ ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು. ಕೇವಲ 31 ಪಶುವೈದ್ಯರು ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯಲ್ಲಿ ಖಾಲಿ ಇರುವ 114 ಹುದ್ದೆಗಳನ್ನೂ ಶೀಘ್ರವಾಗಿ ಭತರ್ಿ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಸಚಿವ ವೆಂಕಟರಾವ್ ನಾಡಗೌಡರನ್ನು  ಶಾಸಕ ಶಿವರಾಮ ಹೆಬ್ಬಾರ ಗೌರವಿಸಿದರು.

                ಕೆಪಿಸಿಸಿ ಸದಸ್ಯ ವಿಜಯ ಮಿರಾಶಿ, ತಾ. ಪಂ. ಅಧ್ಯಕ್ಷೆ ಭವ್ಯಾ ಶೆಟ್ಟಿ, ಪಶು ಸಂಗೋಪನಾ ಇಲಾಖೆಯ ಜಿಲ್ಲಾ ಉಪನಿದರ್ೇಶಕ ಡಾ.ಸುಬ್ರಾಯ ಭಟ್ಟ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕರ, ನಾಗರಾಜ ನಾಯ್ಕ, ಅಮಿತ ಅಂಗಡಿ, ಶ್ರೀಧರ ಶೆಟ್ಟಿ, ಕಿರಣ ಗಾಂವ್ಕರ ಇದ್ದರು