ಭ್ರಷ್ಟಾಚಾರ ಕಂಡು ಬಂದಲ್ಲಿ ದೂರು ನೀಡಿ: ಎಸಿಬಿ ಡಿವೈಎಸ್ಪಿ ಉಜ್ಜನಕೊಪ್ಪ

ಲೋಕದರ್ಶನ ವರದಿ

ಯಲಬುರ್ಗ 19: ಸಾರ್ವಜನಿಕರು ಯಾವುದೇ ಸರಕಾರಿ ಸೌಲಭ್ಯ ಪಡೆಯಬೇಕಾದರೆ ಯಾವುದೇ ಕಾರಣಕ್ಕೂ ಲಂಚ ನೀಡಬಾರದು ಎಂದು ಎಸಿಬಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜನತೆಗೆ ಲಂಚವಿಲ್ಲದೆ ಯಾವ ಕೆಲಸಗಳು ಆಗುವದಿಲ್ಲಾ ಎನ್ನುವದು ಗೊತ್ತಿದೆ ಆದರೆ ಲಂಚ ಕೊಡುವವರು ತಾವೇ ಆಗಿದ್ದಾರೆ ಅದನ್ನು ಸುಲಭವಾಗಿ ಹೇಳುತ್ತಾರೆ ಆದರೆ ಕಾನೂನಿನ ಪ್ರಕಾರ ಯಾರು ದೂರು ನೀಡಲು ಮುಂದೆ ಬರುವದಿಲ್ಲಾ ಇದರಿಂದ ಲಂಚದ ಪ್ರಕರಣಗಳಲ್ಲಿ ಲಂಚ ಪಡೆದವರಿಗೆ ಶಿಕ್ಷೆ ಆಗುತ್ತಿಲ್ಲಾ, ಒಂದು ಉತ್ತಮ ಸಮಾಜ ನಿಮರ್ಾಣ ಮಾಡುವ ಜವಾಬ್ದಾರಿ ನಿಮ್ಮ ಕೈಯಲ್ಲಿದೆ ಅದನ್ನು ಅರಿತು ಕಾನೂನಿನ ಪ್ರಕಾರ ಆಗುವಂತಹ ನಿಮ್ಮ ಕೆಲಸಕ್ಕೆ ಯಾಕೆ ನೀವು ಲಂಚ ನೀಡುತ್ತಿರಿ ಎನ್ನುವದು ಗೊತ್ತಾಗುತ್ತಿಲ್ಲಾ ಅಧಿಕಾರಿಗಳಿಗೆ ನಿಮ್ಮ ಕೆಲಸ ಮಾಡುವ ಸಲುವಾಗಿ ಸರಕಾರ ವೇತನ ನೀಡುತ್ತದೆ ಅದನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು.

ಸರಕಾರಿ ನೌಕರರು ನಿಮ್ಮಿಂದ, ಹಣ, ವಸ್ತು, ಅಥವಾ ಇನ್ನೀತರ ಕೆಲಸಗಳ ಮುಖಾಂತರ ನಿಮ್ಮನ್ನು ಉಪಯೋಗಿಸಿಕೊಂಡರೆ ಅದು ಸಹಿತ ಭ್ರಷ್ಟಾಚಾರವಾಗಿದೆ ಕರ್ತವ್ಯ ವಿಳಂಬ ಮಾಡಿದರೆ ನೀವು ದೂರ ನೀಡಬಹುದು ಎಂದರು. ತಾಪಂ ಇಒ ಢಾ. ಡಿ ಮೋಹನ್, ಎಸಿಬಿ ಸಿಪಿಐ ಎಸ್ ಎಸ್ ಬಿಳಗಿ, ಸಿಬ್ಬಂದಿಯಾದ ಬಸವರಾಜ ಪಾಟೀಲ, ದಕ್ಷಿಣಮೂತರ್ಿ, ಎನ್ಎನ್ಆರ್ಎಲ್ಎಮ್ನ ಉದಯಕುಮಾರ ಸೇರಿದಂತೆ ಅನೇಕ ಮಹಿಳೆಯರು ಹಾಜರಿದ್ದರು.