ಲೋಕದರ್ಶನ ವರದಿ
ಮೋಳೆ 20: ನಾನು ಮುಖ್ಯಮಂತ್ರಿ ಆಕಾಂಕ್ಷಿ.ನನಗೂ ಮುಖ್ಯಮಂತ್ರಿ ಆಗೋ ಆಸೆಯಿದೆ ಎಂದು ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಹೇಳಿದರು.
ದಿ.19 ರಂದು ಉಗಾರ ಪಟ್ಟಣದಲ್ಲಿ ಪತ್ರಕರ್ತರೊಡನೆ ಮಾತನಾಡುವಾಗ ಈ ವಿಷಯ ತಿಳಿಸಿದರು. ಉಪಮುಖ್ಯಮಂತ್ರಿ ಬೇಡವೇ ಬೇಡ, ನಿಗಮ ಮಂಡಳಿಯು ಬೇಡ, ಕೊಟ್ಟರೆ ರಾಜ್ಯವನ್ನು ಆಳುವ ಮುಖ್ಯಮಂತ್ರಿ ಹುದ್ದೆ ಕೊಡಲಿ ಇಲ್ಲವಾದರೆ ನಾನೋಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದರು.
ಮೊದಲಿನಿಂದಲು ರಾಜ್ಯದ ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಹೀಗಾಗಿ ಉಮೇಶ ಕತ್ತಿ ಪ್ರತ್ಯೇಕ ರಾಜ್ಯದ ಬಗ್ಗೆ ಪ್ರಸ್ತಾಪ ಮಾಡುತ್ತಾರೆ ಹೀಗಾಗಿ ನನ್ನ ಬೆಂಬಲ ಕೂಡಾ ಉಮೇಶ ಕತ್ತಿಗೆ ಇದೆ. ನಾನು ಮುಖ್ಯಮಂತ್ರಿಯಾಗುವ ಅರ್ಹತೆ ಹೊಂದಿದ್ದೇನೆ ಎಂದರು.
ತೆಲಂಗಾಣ ಮತ್ತು ಛತ್ತಿಸಗಡದಲ್ಲಿ ಪ್ರತ್ಯೇಕ ರಾಜ್ಯಗಳಾಗಿವೆ. ನಮ್ಮಲ್ಲಿ ಏಕೆ ಬೇಡ. ಅಭಿವೃದ್ಧಿ ದೃಷ್ಠಿಯಿಂದ ಕರ್ನಾಟಕದಲ್ಲಿಯೂ ಕೂಡಾ ಪ್ರತ್ಯೇಕ ರಾಜ್ಯವಾಗುವುದು ಸಮಂಜಸವಾಗಿದೆ ಎಂದರು.
ಕಾಗವಾಡ ಉಪಚುನಾವಣೆ ಕುರಿತು ಕೇಳಿದಾಗ 17 ಜನ ಶಾಸಕರ ಪ್ರಕರಣ ಸುಪ್ರಿಮ್ ಕೋರ್ಟಿನಲ್ಲಿದೆ. ಅದು ಇತ್ಯರ್ಥವಾಗುವವರೆಗೆ ಏನು ಹೇಳಲಾರೆ. ಒಬ್ಬೊಬ್ಬರದು ಒಂದೊಂದು ಕಾರಣಗಳಿಗೆ ಕಾಗವಾಡದ ಶಾಸಕರು ರಾಜೀನಾಮೆ ಕೊಟ್ಟಿಲ್ಲ, ಅವರು ಅನರ್ಹ ಆಗಲಿಕ್ಕಿಲ್ಲ, ಎಂಬ ಭಾವನೆ ನನ್ನದು, ಎಲ್ಲವು ಸುಒರಿಂ ಕೋರ್ಟಿನ ಜಜ್ಮೆಂಟ್ ಬಂದನಂತರವಷ್ಟೇ ಮುಂಇನದು ನೊಡೋಣ ಎಂದರು.