ಪಕ್ಷದಲ್ಲಿ ನಿಷ್ಠಾವಂತನಾಗಿ ಕಾರ್ಯನಿರ್ವಹಿಸುತ್ತೇನೆ

ಸಂಬರಗಿ 03: ಕಾಗವಾಡ ವಿಧಾನಸಬಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕ ಯಾರೇ ಅಭ್ಯರ್ಥಿಯಾದರೂ ಪಕ್ಷದಲ್ಲಿ ನಿಷ್ಟಾವಂತನಾಗಿ ಕಾರ್ಯ ನಿರ್ವಹಿಸುತ್ತೇನೆಂದು ಅಥಣಿ ಪುರಸಭೆಯ ಮಜಿ ಅಧ್ಯಕ್ಷರು ರಾವಸಾಬ ಐಹೊಳೆ ಹೇಳಿದರು. ತಾಂವಶಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಗ್ರಾಮದಲ್ಲಿ ಪಕ್ಷದಲ್ಲಿ ನಿಷ್ಟಾವಂತನಾಗಿ ಕೆಲಸಮಾಡುವ ಕಾರ್ಯಕರ್ತರಿದ್ದಾರೆ. ಯಾವುದೇ ಚುನಾವಣೆ ಆದರೆ ಗ್ರಾಮಮಟ್ಟದಲ್ಲಿ ಬಿರುಸಿನಿಂದ ಚುನಾವಣೆ ಆಗುತ್ತಿವೆ. ಆಕಾರಣ ಪಕ್ಷದಲ್ಲಿರುವ ಕೆಲವು ನಿಷ್ಟಾವಂತರು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ. ಈ ಉಪಚುನಾವಣೆಯಲ್ಲಿ ಕಾಗವಾಡ ವಿಧಾನಸಭಾ ಕ್ಷೇತ್ರಕ್ಕೆ ಯಾರೇ ಅಭ್ಯರ್ಥಿಯಾದರೂ ನಾವು ಬೆನ್ನೆಲುಬಾಗಿ ನಿಂತು ಕೆಲಸಮಾಡುತ್ತೇವೆ. ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳು ಬರಗಾಲ ಪೀಡಿತ ಗ್ರಾಮಗಳನ್ನು ಲಕ್ಷ್ಯವಹಿಸಿ ಕೆಲಸ ಮಾಡಬೇಕು. ಈ ಭಾಗದಲ್ಲಿ ರೈತರ ಜಮೀನಿಗೆ ನೀರಾವರಿ ಅವಶ್ಯಕತೆಯಿದ್ದು ನೀರಿಲ್ಲದೇ ರೈತರು ಕಂಗಾಲಾಗಿದ್ದಾರೆ. ಮಳೆ ಇಲ್ಲದೇ ಕಳೆದ ಹಂಗಾಮಿನಲ್ಲಿ ಬೆಳೆಗಳು ಬತ್ತಿ ಹೋಗಿವೆ. ಸರ್ಕಾರ ಬರಪೀಡಿತ ಗ್ರಾಮಗಳಿಗೆ ಬತ್ತಿಹೋಗಿರುವ ಬೆಳೆಗೆ ಸಹಾಯಧನ ನೀಡಬೇಕೆಂದು ಅವರು ಆಗ್ರಹಿಸಿದರು. ಈ ವೇಳೆ ದಿಲೀಪ ವಾಘಮಾರೆ, ಬಂದೇಸಾಬ ಮುಲ್ಲಾ, ರಾಯಗೊಂಡ ಮಿರ್ಜೆ, ಪಾಂಡು ಕಾಂಬಳೆ ಮತ್ತೀತರರು ಹಾಜರಿದ್ದರು.