ಹುಕ್ಕೇರಿ 17: ಎರಡು ದಿನದಲ್ಲಿ ಕಳ್ಳತನ ಪ್ರಕರಣವನ್ನು ಭೇದಿಸಿದ ಹುಕ್ಕೇರಿ ಪೋಲಿಸ್ ಇನ್ಸಪೇಕ್ಟರ ಮಹಾಂತೇಶ. ಬಸ್ಸಾಪುರೆ ಕಳೆದ ಎರಡು ದಿನಗಳ ಹಿಂದೆ ಹುಕ್ಕೇರಿ ನಗರದಲ್ಲಿ ಜರುಗಿದ ಎರಡು ಕಳ್ಳತನ ಪ್ರಕರಣವನ್ನು ಹುಕ್ಕೇರಿ ಪೋಲಿಸ್ ಇನ್ಸಪೇಕ್ಟರ ಮಹಾಂತೇಶ ಬಸ್ಸಾಪೂರೆ ಬೇಧಿಸುವಲ್ಲಿ ಸಫಲರಾಗಿದ್ದಾರೆ.ಪಟ್ಟಣದ ಬುದ್ದ ಬಸವ ಅಂಬೇಡ್ಕರ್ ಕೋ ಆಪರೇಟಿವ ಸೋಸೈಟಿ ಮತ್ತು ಕೀರಾಣಿ ಅಂಗಡಿ ಕಳ್ಳತನವಾಗಿ 48 ಘಂಟೆಗಳ ಸಮಯದಲ್ಲಿ ಕಳ್ಳನನ್ನು ಬಂಧಿಸಿ ಹುಕ್ಕೇರಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.ಕಳ್ಳತನ ಪ್ರಕರಣವನ್ನು ಬೆಳಗಾವಿ ಪೊಲೀಸ ಅಧೀಕ್ಷಕ ಭೀಮಾಶಂಕರ ಗುಳೆದ ಗಂಭೀರವಾಗಿ ಪರಿಗಣಿಸಿ ಎರಡು ತಂಡಗಳನ್ನು ರಚಿಸಿ ಅವರ ಮಾರ್ಗದರ್ಶನದ ಮೇರೆಗೆ 26 ವರ್ಷದ ಹುಕ್ಕೇರಿ ನಗರದ ಸ್ವಾಮಿ ವಿವೇಕಾನಂದ ನಗರದ ರಾಘವೇಂದ್ರ ಶಿವಶಂಕರ ದೊಡಮನಿ ಇವನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಬಂಧಿತನಿಂದ ಐದು ಸಾವಿರ ರೂಪಾಯಿ ನಗದು ಮತ್ತು ಕಳ್ಳತನಕ್ಕೆ ಉಪಯೋಗಿಸಿದ್ದ ಒಂದು ಲಕ್ಷ ರೂಪಾಯಿಯ ಬಜಾಜ್ ಪಲ್ಸರ ದ್ವಿ ಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ಹೆಚ್ಚುವರಿ ಎಸ್ ಪಿ ಶೃತಿ ಮತ್ತು ರಾಮಗೊಂಡ ಬಸರಗಿ ಮತ್ತು ಗೋಕಾಕ ಡಿ ಎಸ್ಪಿ ಡಿ ಎಚ್ ಮುಲ್ಲಾ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಗಳಾದ ಚಂದ್ರಶೇಖರ ಗಸ್ತಿ, ಎ ಎಸ್ ಸನದಿ, ರವಿ ಢಂಗ, ಮಂಜು ಕಬ್ಬೂರಿ, ಅಜೀತ ನಾಯಿಕ, ರಮೇಶ ಹನಮನ್ನವರ, ಕುಮಾರ ಕರೆನ್ನವರ, ಬಸವರಾಜ ನಾವಿ ಇವರನ್ನೂ ಒಳಗೊಂಡ ಅಪರಾಧ ಪತ್ತೆ ದಳವು ಎರಡು ಪ್ರಕರಣಗಳನ್ನು ಪತ್ತೆ ಮಾಡಿದ ಸಿಬ್ಬಂದುಗಳಿಗೆ ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಭೀಮಾಶಂಕರ ಗುಳೆದ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.