ರಬಕವಿ-ಬನಹಟ್ಟಿ01 : ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನೇಕಾರ ಮತ್ತು ರೈತ ಬಾಂಧವರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬನಹಟ್ಟಿಯ ಈಶ್ವರಲಿಂಗ ಮೈದಾನದಿಂದ ತಹಶೀಲ್ದಾರ ಕಛೇರಿ ವರೆಗೆ ಬೃಹತ್ ಪಾದಯಾತ್ರೆ ಕೈಗೊಂಡು ತಹಶೀಲ್ದಾರ ಕಛೇರಿ ಮುಂದೆ ಸಭೆ ನಡೆಸಿ ಮನವಿ ಅಪರ್ಿಸಿದರು.
ನೇಕಾರರು ಉಪಯೋಗಿಸುತ್ತಿರುವ ವಿದ್ಯುತಿನ ನಿಗದಿತ ಶುಲ್ಕ ಸಂಪೂರ್ಣ ತೆಗೆದುಹಾಕುವುದು. ನೇಕಾರರು ವಿದ್ಯುತ್ ಬಿಲ್ಲ ತುಂಬಲು ಆರು ತಿಂಗಳವರೆಗೆ ಕಾಲಾವಕಾಶ ನೀಡ ಬೇಕೆಂದು ನೇಕಾರರು ಮನವಿ ಅಪರ್ಿಸಿದರು. ಕಲ್ಲೋಳ್ಳಿ ವೆಂಕಟೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಳ್ಳಲಿದ್ದು, ಈ ಕಾಮಗಾರಿಯ ಜಾಕವೆಲ್ ಹಾಗೂ ಕಾಲುವೆ ನಿಮರ್ಾಣಕ್ಕಾಗಿ ರೈತರ ಭೂಮಿ ಸ್ವಾಧೀನ ಪಡಿಸಿಕೊಂಡಿದ್ದಾರೆ. ಸ್ವಾಧೀನ ಪಡಿಸಿಕೊಂಡ ಭೂಮಿಯ ಪರಿಹಾರವನ್ನು ಇನ್ನೂವರೆಗೂ ಸಕರ್ಾರ ನೀಡಿಲ್ಲ ಇದನ್ನು ಆದಷ್ಟು ಶೀಘ್ರದಲ್ಲಿ ನೀಡುವುದು, ರಾಷ್ಟ್ರೀಕೃತ ಬ್ಯಾಂಕಿನಲ್ಲಿನ ರೈತರ ಸಾಲ ಮನ್ನಾ ಮಾಡಿದೆ ಎಂದು ಸರಕಾರ ಆದೇಶಿಸಿದೆ. ಆದರೆ ಬ್ಯಾಂಕಿನವರು ಸಾಲವನ್ನು ವಸೂಲಿ ಮಾಡುತ್ತಾ, ರೈತರಿಗೆ ಹಿಂಸೆ ನೀಡುತ್ತಿದ್ದಾರೆ. ಇದು ತಕ್ಷಣ ನಿಲ್ಲ ಬೇಕು. ಉತ್ತರಪ್ರದೇಶ ಕೆ.ಬಿ.ಸಿ.ಎಲ್. ಇಂಡಿಯಾ ಕಂಪನಿ ರಬಕವಿ-ಬನಹಟ್ಟಿ ತಾಲೂಕಿನ ಹಳ್ಳಿಗರಿಂದ ಸುಮಾರು 13 ಕೋಟಿ ಹಣ ಎಫ್.ಡಿ. ಆರ್.ಡಿ. ಮೂಲಕ ತುಂಬಿಸಿಕೊಂಡು 5-6 ವರ್ಷಗಳಾದರೂ ಮರಳಿ ನೀಡಿಲ್ಲ. ಕಂಪನಿಯ ಮೇಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡು, ಹಣ ವಾಪಸ್ ನೀಡುವಂತೆ ಮಾಡಬೇಕೆಂದು ಆಗ್ರಹಿಸಿ ರೈತ ಮತ್ತು ನೇಕಾರ ಮುಖಂಡರು ಮನವಿ ಅಪರ್ಿಸಿದರು.
ರೈತ ಸಂಘದ ಗಂಗಪ್ಪ ಮೇಟಿ, ಶ್ರೀಕಾಂತ ಗುಳ್ಳನ್ನವರ, ಬಸವರಾಜ ಮೇಲೋಡಿ, ಸತ್ಯಪ್ಪ ಜನವಾಡ, ಸಿದ್ದು ಉಳ್ಳಾಗಡ್ಡಿ, ರವಿ ಫೀರೋಜಿ, ಅಶೋಕ ದೇಸಾಯಿ, ಗೋನಪ್ಪ ಬಿರಡಿ, ಹಣಮಂತ ಪೂಜೇರಿ, ನೇಕಾರ ಸಂಘದ ಶಿವಲಿಂಗ ಟಿರಕಿ, ಕಾಡಪ್ಪ ಫಕೀರಪೂರ, ಗಂಗಪ್ಪಾ ಒಂಟಗೂಡಿ, ಶ್ರೀಶೈಲ ಚಿಂಚಖಂಡಿ, ಶಂಕರ ಮಾಚಕನೂರ, ಬಸವರಾಜ ಮನ್ಮಿ, ರವೀಂದ ಗೋಡ್ಯಾಳ, ಸದಾಶಿವ ಗೊಂದಕರ ಸೇರಿದಂತೆ ಐದನೂರಕ್ಕೂ ಅಧಿಕ ರೈತರು, ಮಹಿಳೆಯರು, ನೇಕಾರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.