ಜಮಖಂಡಿ 07: ತಾಲೂಕಿನ ಹುನ್ನೂರ ಗ್ರಾಮದಲ್ಲಿ ಮಹಿಳೆಯೋರ್ವಳು ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.
ಶೃತಿ ಶಿವಕುಮಾರ ಮಠಪತಿ (24) ಮನನೊಂದು ನೇಣು ಬಿಗ್ಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಹುನ್ನೂರ ಗ್ರಾಮದ ಬನಶಂಕರಿ ಕಾಲೊನಿಯಲ್ಲಿ ಶೃತಿ ಶಿವಕುಮಾರ ಮಠಪತಿ ಪ್ರೀತಿಸಿ ಮದುವೆಯಾಗಿದ್ದು. ಬಾಡಿಗೆ ಮನೆ ಮಾಡಿಕೊಂಡು ದಂಪತಿಗಳು ಸುಖಸಂಸಾರವನ್ನು ಮಾಡಿಕೊಂಡು ವಾಸವಾಗಿದ್ದು. 1.5 ವರ್ಷದ ಗಂಡು ಮಗುವಿಗೆ ಬೆಳಗ್ಗೆ ಬೇಗ ಎದ್ದು ಮಗುವಿಗೆ ಸರಿಯಾಗಿ ಊಟ, ಉಪಚಾರ ಮಾಡುತ್ತಿಲ್ಲ. ಪ್ರತಿ ದಿನ ತಡವಾಗಿ ಏಳುತ್ತಿಯಾ ಎಂದು ಪತಿ ತನ್ನ ಪತ್ನಿಗೆ ಹೇಳಿದ ವಿಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸಾರ್ವಜನಿಕರಿಂದ ಮಾಹಿತಿ ತಿಳಿದುಬರುತ್ತದೆ.
ಇನ್ನೂ ನಿಖರವಾದ ಮಾಹಿತಿ ತಿಳಿದು ಬಂದಿರುವುದಿಲ್ಲ.ಈ ಕುರಿತು ಗ್ರಾಮೀಣ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದ್ದು. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ.