ಹೊಸಪೇಟೆ: ಸಚಿವ ಸಿ.ಟಿ.ರವಿ ಪ್ರವಾಸಿ ತಾಣಗಳಿಗೆ ಭೇಟಿ

ಲೋಕದರ್ಶನ ವರದಿ

ಹೊಸಪೇಟೆ 05: ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕ್ರತಿ ಹಾಗೂ ಸಕ್ಕರೆ ಖಾತೆ ಸಚಿವ ಸಿ.ಟಿ.ರವಿ ಅವರು ಹಂಪಿಯ ವಿವಿಧ ಪ್ರವಾಸಿ ತಾಣಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

   ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಮೊದಲಿಗೆ ಆಗಮಿಸಿ ವಿರೂಪಾಕ್ಷೇಶ್ವರರ ದರ್ಶನ ಪಡೆದರು. ಲಕ್ಷ್ಮೀ ಆನೆಯು ಸಚಿವರಿಗೆ ಹೂಮಾಲೆ ಹಾಕುವುದರ ಮೂಲಕ ಸ್ವಾಗತಿಸಿತು.

    ವಿದ್ಯಾರಣ್ಯ ಪೀಠದ ಶ್ರೀಗಳ ಆಶೀವರ್ಾದ ಪಡೆದರು. ನಂತರ ಅವರು ವಿರೂಪಾಕ್ಷೇಶ್ವರ ದೇವಸ್ಥಾನ ಹಾಗೂ ಎದುರುಬಸವಣ್ಣ ಮಂಟಪದ ಸುತ್ತಮುತ್ತಲಿನ ಮಂಟಪಗಳ, ಸಾಲುಕಂಬಗಳ ಸ್ಥಿತಿ ಪರಿಶೀಲಿಸಿದರು. ನಂತರ ಮಾತನಾಡಿದ ಅವರು ಹಂಪಿ ಉತ್ಸವಕ್ಕೆ ನಿರ್ದಿಷ್ಟ ದಿನಾಂಕ ನಿಗದಿಪಡಿಸಲಾಗುವುದು ಮತ್ತು ಬಹಳ ದೊಡ್ಡ ಅಸಹಜ ಘಟನೆ ಆದಂತಹ ಸಂದರ್ಭದಲ್ಲಿ ಸರಳವಾಗಿ ಆಚರಿಸಲಾಗುವುದು. ಮಂಟಪಗಳು, ಸ್ಮಾರಕಗಳು ಉಳಿಯಲೇಬೇಕು,ಯಾವುದೇ ಬೆಲೆ ತೆತ್ತಾದರೂ ಸರಿ ಎಂದರು. ಅಧ್ಯಯನ ಕಾರಣದಿಂದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿರುವುದಾಗಿ ತಿಳಿಸಿದರು.

    ಈ ಸಂದರ್ಭದಲ್ಲಿ ಶಾಸಕ ಸೋಮಲಿಂಗಪ್ಪ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೇರಿದಂತೆ ಇತರರು ಇದ್ದರು.