ಹೊಸಪೇಟೆ: ರೋಗಗಳ ಬಗ್ಗೆ ನಿರ್ಲಕ್ಷ್ಯ ಸಲ್ಲದು: ಡಾ.ಕಮಲಮ್ಮ

ಲೋಕದರ್ಶನ ವರದಿ

ಹೊಸಪೇಟೆ 25: ಪ್ರಸ್ತುತ ದಿನಮಾನಗಳಲ್ಲಿ ತಕ್ಷಣವೇ ಪತ್ತೆ ಹೆಚ್ಚಲಾಗರದಂತಹ ರೋಗಗಳು ಉಲ್ಬಣಗೊಳ್ಳುತ್ತಿದ್ದು, ಜ್ವರ, ಕೆಮ್ಮ, ನೆಗಡಿ ಅಥವಾ ಸುಸ್ತಾದಲ್ಲಿ ತಕ್ಷಣವೇ ವೈದ್ಯರ ಬಳಿ ಹೋಗಬೇಕು ನಿರ್ಲಕ್ಷ್ಯ ತೋರಬಾರದು ಎಂದು ನಗರ ವೈದ್ಯಾಧಿಕಾರಿ ಡಾ.ಕಮಲಮ್ಮ ಸಲಹೆ ನೀಡಿದರು. 

7ನೇ ವಾರ್ಡ್  ಪಾಂಡುರಂಗ ಕಾಲೋನಿಯಲ್ಲಿ ಹಮ್ಮಿಕೊಂಡಿದ್ದ  ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ, ಆರೋಗ್ಯ ಮಹಾಭಾಗ್ಯವಾಗಿದೆ. ಇಂತಹ ಆರೋಗ್ಯ ಹದಗೆಟ್ಟಾಗ ಮಾನಸಿಕ, ದೈಹಿಕ ಮತ್ತು ಆಥರ್ಿಕ ಸಂಕಷ್ಟಗಳು ಉಂಟಾಗುತ್ತವೆ.  ಕಾರಣ ಪ್ರತಿಯೊಬ್ಬ ನಾಗರೀಕರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿದೆ. ಯುವಕರು ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ.  ವಿಜಯನಗರ ಯುವಕರ ಬಳಗವು ಈ ರೀತಿಯ ಕಾರ್ಯಕ್ರಮ ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು. 

ವಿಜಯನಗರ ಯುವಕರ ಸಂಘ ಸಂಸ್ಥಾಪಕಾಧ್ಯಕ್ಷ ಸೋಮಶೇಖರ ನಾಯಕ ಮಾತನಾಡಿ, ನಮ್ಮ ಮನೆ, ಸುತ್ತಮುತ್ತಲಿನ ವಾತಾವರಣ ಹಾಗೂ ನಗರವನ್ನು ಸ್ವಚ್ಛವಾಗಿಡುವ ಸಂಕಲ್ಪವನ್ನು ನಮ್ಮ ಸಂಘವು ಹೊಂದಿದೆ.  ಈ ನಿಟ್ಟಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಬೇಕಿದೆ. ಇದಕ್ಕೆ ಎಲ್ಲಾ ನಾಗರೀಕರ ಸಹಕಾರ, ಬೆಂಬಲ ಹಾಗೂ ನೆರವಿನ ಅಗತ್ಯವಿದೆ ಎಂದರು.  

ಸಂಘದ ಪದಾಧಿಕಾರಿ ಕಾಶಿವಿಶ್ವನಾಥ, ಕಾಶಿ ಬಡಿಗೇರ  ಸೇರಿದಂತೆ ಪಾಂಡುರಂಗ ಕಾಲೋನಿಯ ಹಿರಿಯರ ನಾಗರೀಕರು ಪಾಲ್ಗೊಂಡಿದ್ದರು.  ಸುಮಾರು 350 ಜನ ಶಿಬಿರದ ಪ್ರಯೋಜನ ಪಡೆದರು.  ಮಧುಮೇಹ, ರಕ್ತದೊತ್ತಡ, ಡೆಂಗ್ಯು, ಚಿಕನ್ಗುನ್ಯಾ, ಟೈಪೈಡ್, ಮಲೇರಿಯಾ ಕುರಿತಂತೆ ವೈದ್ಯರು ತಪಾಸಣೆ ನಡೆಸಿದರು.