ಲೋಕದರ್ಶನ ವರದಿ
ಹೊಸಪೇಟೆ 12: ಇತ್ತೀಚೆಗೆ ಸಂಯುಕ್ತ ಭಾರತೀಯ ಕೆ.ಹೆಚ್.ಇ.ಎಲ್.ಫೌಂಡೇಷನ್, ಇಂಡಿಯಾ ಹಾಗೂ ಇಂದುಶ್ರೀ ಆರ್ಗನೈಜೇಷನ್ ಸಹಯೋಗದಲ್ಲಿ ಗೋವಾದಲ್ಲಿ ಆಯೋಜಿಸಿದ್ದ ಯುನೈಟೆಡ್ ನ್ಯಾಷನಲ್ ಗೇಮ್ಸ್-2019 6ನೇ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ 5000 ಮೀ ಮತ್ತು 3000 ಮೀ ಓಟದ ಎರಡೂ ಸ್ಪರ್ಧೆಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಸ್ಥಳೀಯ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಅತಿಥಿ ಉಪನ್ಯಾಸಕ ಅಕ್ಕಿ ಮಲ್ಲಿಕಾರ್ಜುನ ಅವರು ಪ್ರಥಮ ಸ್ಥಾನವನ್ನು ಗಳಿಸಿದ್ದು ದುಬೈನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ ಆಯ್ಕೆಯಾಗಿರುತ್ತಾರೆ.
ಅವರ ಕ್ರೀಡೆಯಲ್ಲಿನ ನಿರಂತರ ಪರಿಶ್ರಮದ ಫಲವಾಗಿ ದೊರೆತ ಯಶಸ್ಸಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಜಿ.ಕಾನಕೇಶಮೂರ್ತಿ ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗ ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಮತ್ತು ಎಲ್ಲ ಸದಸ್ಯರು ಕಾಲೇಜಿನ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.