ಹೊಸಪೇಟೆ: ನಗರಸಭೆಗೆ ಪ್ರಾದೇಶಿಕ ಆಯುಕ್ತ ಭೇಟಿ

ಲೋಕದರ್ಶನ ವರದಿ

ಹೊಸಪೇಟೆ 24: ನಿಗದಿತ ವೇಳೆಗೆ ಸಾರ್ವಜನಿಕರ ಕಡತ ವಿಲೇವಾರಿ ಮಾಡಿ. ಇಲ್ಲವಾದರೆ, ಮುಲಾಜಿಲ್ಲದೆ ಕ್ರಮಕೈಗೊಳ್ಳುವುದಾಗಿ ನಗರಸಭೆ ಅಧಿಕಾರಿಗಳಿಗೆ ಕಲಬುರಗಿ ಪ್ರಾದೇಶಿಕ ಆಯುಕ್ತ ಸುಭೋದ್ ಯಾದವ್ ಖಡಕ್ ಎಚ್ಚರಿಕೆ ನೀಡಿದರು. 

ನಗರಸಭೆ ಕಚೇರಿಯಲ್ಲಿ ಬುಧವಾರ ಬಿಲ್ ಕಲೆಕ್ಟರ್, ಇಂಜಿನಿಯರ್ ಸೇರಿ ಇತರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಆಸ್ತಿಗೆ ಸಂಬಂಧಿಸಿದ ಫಾರಂ ನಂ-3, ಖಾತೆ ಬದಲಾವಣೆ ಸೇರಿ ಇತರ ಸಾರ್ವಜನಿಕರ ಕಡತಗಳು ಒಂದು ವರ್ಷ ಮುಗಿದರೂ ಬಾಕಿ ಇರುವ ಕುರಿತು ದೂರುಗಳು ಸಲ್ಲಿಕೆಯಾಗಿವೆ. ಇದರಿಂದ ನಿಮ್ಮ ಕಾರ್ಯವೈಖರಿ ತಿಳಿಯಲಿದೆ. ಮಧ್ಯವತರ್ಿಗಳ ಹಾವಳಿಯೂ ಜಾಸ್ತಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. 

ಇದೇ ರೀತಿ ನಿರ್ಲಕ್ಷೃಮುಂದುವರಿದರೆ ಮುಲಾಜಿಲ್ಲದೇ ಕ್ರಮಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದರು. ನನೆಗುದಿಗೆ ಬಿದ್ದಿರುವ 247 ಶುದ್ಧ ಕುಡಿವ ನೀರಿನ ಯೋಜನೆ, ಬೈಪಾಸ್ನಲ್ಲಿ ಕೈಗೊಂಡಿರುವ ಉದ್ಯಾನ ನಿಮರ್ಾಣ ಕುರಿತು ಪೌರಾಯುಕ್ತ ವಿ.ರಮೇಶ್ ಅವರಿಂದ ಮಾಹಿತಿ ಪಡೆದರು. ಡಿಸಿ ಎಸ್.ಎಸ್.ನಕುಲ್, ಎಸಿ ಪಿ.ಎನ್.ಲೋಕೇಶ್, ತಹಸೀಲ್ದಾರ್ ಎಚ್.ವಿಶ್ವನಾಥ ಇತರರಿದ್ದರು.