ಲೋಕದರ್ಶನ ವರದಿ
ಹೋಸಪೇಟೆ 01: ದೇಶೀಯವಾದ ಪಾರಂಪರಿಕ ಜ್ಞಾನವು ಬೇರಿನಂತೆ ಹಾಗೂ ಆಧುನಿಕ ತಂತ್ರಜ್ಞಾನವು ಚಿಗುರಿನಂತೆ. ಆದ್ದರಿಂದ ವಿದ್ಯಾರ್ಥಿಗಳು ಪಾರಂಪರಿಕ ಜ್ಞಾನವನ್ನು ಉಪೇಕ್ಷಿಸದೆ, ಅರಿಯಲು ಪ್ರಯತ್ನಿಸಿದರೆ, ಅವರು ಸಮಾಜಕ್ಕೆ ಉಪಯುಕ್ತ ಕೊಡುಗೆ ನೀಡಲು ಸಾಧ್ಯ ಎಂದು ಕನ್ನಡ ವಿವಿ ಕುಲಪತಿ ಡಾ.ಸ.ಚಿ.ರಮೇಶ್ ಅಭಿಪ್ರಾಯಪಟ್ಟರು. ಪ್ರೌಢದೇವರಾಯ ತಾಂತ್ರಿಕ ಕಾಲೇಜಿನ ವಾಷರ್ಿಕೋತ್ಸವ ಸಿಂಚನ-2019 ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಚುಕ್ಕಿಯಿಂದ ರೇಖೆಗಳ ಮೂಲಕ ಆಕರ್ಷಕ ವಿನ್ಯಾಸ ರೂಪಿಸುವ ರಂಗೋಲಿಯಲ್ಲಿ ಸಿವಿಲ್ ತಂತ್ರಜ್ಞಾನದ ಎಳೆಗಳನ್ನು ಕಾಣಬಹುದು. ಹಚ್ಚೆಯು ಸೌಂದರ್ಯವರ್ಧಕವಷ್ಟೇ ಅಲ್ಲ್ಲದೆ ರೋಗನಿರೋಧಕವು ಆಗಿತ್ತು ಎಂಬುದರಲ್ಲಿ ವೈದ್ಯಕೀಯ ತಿಳುವಳಿಕೆ ಅಡಕವಾಗಿದೆ. ರೈತರು ಹಗೇವುಗಳನ್ನು ನಿಮರ್ಿಸುವಾಗ ಗಾಳಿ ಬೆಳಕು ನೀರಿನ ಹರಿವುಗಳ ಬಗ್ಗೆ ತಾಂತ್ರಿಕ ಸ್ವರೂಪದ ತಿಳುವಳಿಕೆ ಇಟ್ಟುಕೊಂಡಿದ್ದರು. ಶ್ರವಣ ಬೆಳಗೊಳದ ಗೊಮ್ಮಟ ವಿಗ್ರಹವನ್ನು ಪ್ರಮಾಣಬದ್ಧವಾಗಿ ನಿಮರ್ಿಸುವಲ್ಲಿ ತಂತ್ರಜ್ಞಾನದ ಪಾತ್ರವಿತ್ತು. ನಮ್ಮ ಜನಪದರು ನಿರಕ್ಷರಕುಕ್ಷಿಗಳಾಗಿದ್ದರೂ, ಅವರಲ್ಲಿ ತಾಂತ್ರಿಕತೆಯ ಚಾತುರ್ಯಗಳು ಅಡಕವಾಗಿದ್ದವು. ಅವು ಅವರ ನಂಬಿಕೆ ಆಚರಣೆ, ದುಡಿಮೆಗಳೂ ಆಗಿದ್ದವು ಎಂದು ಹೇಳಿದರು.
ಹಿಂದೆ ನಮ್ಮ ಜಾನಪದರ ಸಮುದಾಯಗಳಲ್ಲಿ ಎಂಜಿನೀಯರಿಂಗ್ ಕೋಸರ್್, ತರಬೇತಿ ಇರಲಿಲ್ಲ. ಅವುಗಳ ಅವಶ್ಯಕತೆಯೂ ಆಗ ಇರಲಿಲ್ಲ. ಆದರೆ ತಾಂತ್ರಿಕತೆಯ ತಿಳುವಳಿಕೆ ನಮ್ಮ ಪರಂಪರೆಯಲ್ಲೂ ಇತ್ತು ಎಂದುದನ್ನು ನಮ್ಮ ವಿದ್ಯಾಥರ್ಿಗಳು ಮರೆಯಬಾರದು. ನಮ್ಮ ಪರಂಪರೆಯ ಜ್ಞಾನವನ್ನು ಕುತೂಹಲ. ಕೌತುಕತೆಗಳಿಂದ ಅವಲೋಕಿಸಿದರೆ ಆಧುನಿಕ ತಂತಜ್ಞಾನ ಮತ್ತಷ್ಟು ವಿಸ್ತಾರಗೊಳ್ಳಬಹುದು ಆ ದಿಸೆಯಲ್ಲಿ ವಿದ್ಯಾಥರ್ಿಗಳು ಪ್ರಯತ್ನಿಸಬೇಕು ಎಂದು ಅವರು ತಾಂತ್ರಿಕ ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವೀ.ವಿ. ಸಂಘದ ಅಧ್ಯಕ್ಷ ಉಡೇದ ಬಸವರಾಜರವರು ಮಾತನಾಡಿ ವಿದ್ಯಾರ್ಥಿಗಳು ಉನ್ನತ ಸಾಧನೆಗೆ ಸಂಕಲ್ಪದಿಂದ ಪ್ರಯತ್ನಿಸಬೇಕು ಎಂದರು. ಅತಿಥಿಗಳಾಗಿ ಎಚ್.ಎಂ.ವೀರಭದ್ರಶರ್ಮಾ ಉಪಾಧ್ಯಕ್ಷರು, ಕೊಟ್ರಪ್ಪ ಕಾರ್ಯದಶರ್ಿಗಳು, ಕೋಳೂರು ಮಲ್ಲಿಕಾಜರ್ುನಗೌಡ ಕೋಶಾಧಿಕಾರಿಗಳು ಭಾಗವಹಿಸಿದ್ದರು. ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಜಾನೇಕುಂಟೆ ಬಸವರಾಜ, ವೀ.ವಿ. ಸಂಘದ ಕಾರ್ಯಕಾರಿ ಮಂಡಳಿಯ 20ಕ್ಕೂ ಹೆಚ್ಚು ಸದಸ್ಯರು ಹಾಗೂ ಮಾಜಿ ಪದಾಧಿಕಾರಿಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ.ಎಸ್.ಎಂ.ಶಶಿಧರ್ ಕಾಲೇಜಿನ ವಾಷರ್ಿಕ ವರದಿ ಮಂಡಿಸಿದರು. ಡಾ.ಬಿ.ಎಚ್.ಮಂಜುನಾಥ್ ಸ್ವಾಗತಿಸಿದರು. ಪಿದರ್ೋಸ್ ಮತ್ತು ಪೂಣರ್ಿಮಾ ನಿರೂಪಿಸಿದರು. ಸಿಂಚನ 2019 ವಾರ್ಷಿಕೋತ್ಸವ ಮುಖ್ಯ ಸಂಯೋಜಕ ವಸಂತಮ್ಮ.ಹೆಚ್ ವಂದಿಸಿದರು.
ಸಮಾರಂಭದಲ್ಲಿ ಆರು ಪ್ರತಿಭಾವಂತ ಟಾಪಸರ್್ ವಿದ್ಯಾಥರ್ಿಗಳಿಗೆ ಎಂ.ಎಸ್.ಪಿ.ಎಲ್. ಸಂಸ್ಥೆಯಿಂದ ಪ್ರಾಯೋಜಿತ ಚಿನ್ನದ ಪದಕ ನೀಡಿ ಪುರಸ್ಕರಿಲಾಯಿತು. ಮ್ಯೆಕಾನಿಕಲ್ ವಿಭಾಗದ ಭರತ್ ಕುಮಾರ್.ಎಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಸೌಮ್ಯಪ್ರಿಯ.ಜಿ.ಎಂ, ಗಣಕಯಂತ್ರ ವಿಭಾಗದ ರೋಶಿನಿ.ಎನ್, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮಂಜುನಾಥ.ಎನ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಪೂಣರ್ಿಮ.ಒ.ಎಂ., ಎಂ.ಬಿ.ಎ. ವಿಭಾಗದ ಯೋಗಶ್ರೀ.ಬಿ. ವೀ.ವಿ. ಸಂಘದ ಹಾಗೂ ಇತರ ದತ್ತಿ ಬಹುಮಾನಗಳನ್ನು ವಿದ್ಯಾಥರ್ಿಗಳಿಗೆ ವಿತರಿಸಲಾಯಿತು. ವಿಟಿಯು 3ನೇ ಯರ್ಾಂಕ್ ವಿಜೇತ ವಿದ್ಯಾಥರ್ಿನಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಸೌಮ್ಯಪ್ರಿಯ.ಜಿ.ಎಂ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ನಂತರ ಕಾಲೇಜಿನ ವಿದ್ಯಾಥರ್ಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.