ಲೋಕದರ್ಶನ ವರದಿ
ಹೊಸಪೇಟೆ 30: ಪರಂಪರಾನುಗತವಾಗಿ ಬಂದಿರುವ ಹೆಣ್ಣಿನ ಬಗೆಗಿನ ತಪ್ಪು ಕಲ್ಪನೆಗಳನ್ನು ಮುರಿದು ಹೊಸ ಅರ್ಥವತ್ತಾದ, ಆಕೆಗೂ ಸಮಾನ ಅವಕಾಶಗಳನ್ನು ನೀಡಿದರೆ ಮಾತ್ರ ಪಂಪ ಕುವೆಂಪು ಅವರ ಮನುಷ್ಯ ಜಾತಿ ತಾನೊಂದೆ ವಲಂ, ವಿಶ್ವಮಾನವ ಪರಿಕಲ್ಪನೆಗಳು ಸಾರ್ಥಕವಾಗುತ್ತವೆ." ಎಂದು ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕಿ ಗಾಯತ್ರಿ ಭಾವಿಕಟ್ಟಿ ಅಭಿಪ್ರಾಯಪಟ್ಟರು.
ಸ್ಥಳೀಯ ಎಂ.ಪಿ.ಪ್ರಕಾಶ್ ನಗರದಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಶಂಕರ್ ಆನಂದ್ ಸಿಂಗ್ ಸಕರ್ಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಆರನೇ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ "ಮಹಿಳೆ ಮತ್ತು ಸಮಾಜ"ವಿಷಯದ ಕುರಿತು ಮಾತನಾಡುತ್ತಿದ್ದರು. ಮುಂದುವರೆದು "ಅಕ್ಕಮಹಾದೇವಿ ಈ ಲೋಕದ ಸ್ಥಿತಿಯನ್ನು ವಿರೋಧಿಸಿ ಸಮ ಸಮಾಜದ ಆಶಯವನ್ನು ಗಟ್ಟಿಯಾಗಿ ಪ್ರತಿಪಾದಿಸಿದ ದಿಟ್ಟ ಮಹಿಳೆ. ಹೆಣ್ಣಿಗೆ ಎರಡನೇ ದಜರ್ೆಯ ಪ್ರಜೆಯ ಸ್ಥಾನವನ್ನು ನೀಡುತ್ತಿರುವ ಸಮಾಜದ ಮನೋಭಾವಗಳು ಬದಲಾಗದ ತನಕ ಸಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಗುವುದಿಲ್ಲ. ಪುರುಷನಿಗೆ ಯಾವ ಬಗೆಯ ಸಾಮಥ್ರ್ಯಗಳಿವೆಯೋ ಅಷ್ಟೇ ಸಾಮಥ್ರ್ಯಗಳು ಮಹಿಳೆಗೂ ಇವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ.ಕನಕೇಶಮೂತರ್ಿ ವಹಿಸಿದ್ದರು. ಶಿಬಿರಾಧಿಕಾರಿ ಕೆ.ಶಿವಪ್ಪ, ಸಹ ಶಿಬಿರಾಧಿಕಾರಿ ಡಿ.ಎಂ.ಮಲ್ಲಿಕಾಜರ್ುನಯ್ಯ, ಅತಿಥಿ ಉಪನ್ಯಾಸಕ ಚಿಪ್ಪೋಲು ನಾಗರಾಜ, ಮಾಲಾ, ಸುರೇಶ್ ಸಿ. ಮೊದಲಾದವರು ಉಪಸ್ಥಿತರಿದ್ದರು. ಶಿಬಿರದ ಸ್ವಯಂಸೇವಕ ತ್ರಿವೇಣಿ ಸ್ವಾಗತಿಸಿ ನಿರೂಪಿಸಿದರು. ಮೌಲಾಹುಸೇನ್ ವಂದಿಸಿದರು.