ಹೊಸಪೇಟೆ: ನಿರಂತರ ಸುರಿದ ಭಾರಿ ಮಳೆಗೆ ಗೋಡೆ ಬಿದ್ದು ಓರ್ವ ವ್ಯಕ್ತಿ ಸಾವು

ಲೋಕದರ್ಶನ ವರದಿ

ಹೊಸಪೇಟೆ 26: ರಾತ್ರಿ ಇಡೀ ಸುರಿದ ಭಾರಿ ಮಳೆಗೆ ಗೋಡೆ ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಗಾಳೆಮ್ಮನಗುಡಿ ಗ್ರಾಮದಲ್ಲಿ ನಡೆದಿದೆ.

ಸಮೀಪದ ಹನುಮನಹಳ್ಳಿ ಗ್ರಾಮದ ಬಸಾಪುರದಲ್ಲಿ ಮಧ್ಯ ರಾತ್ರಿ 2 ಗಂಟೆ ಸುಮಾರಿಗೆ ಮನೆಯ ಗೋಡೆಕುಸಿದು ಮನೆಯ ಓರ್ವ ವೃದ್ಧ ದ್ಯಾಮಜ್ಜ ತಂದೆ ತಿರುಕಪ್ಪ 80 ವರ್ಷ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೆಳಿಗ್ಗೆ ಪಟ್ಟಣದ ಠಾಣೆಯ ಪಿ.ಎಸ್.ಐ.ಎಂ.ಶಿವಕುಮಾರ್  ಮತ್ತು ನಾಡಕಾರ್ಯಾಲಯದ ಕಂದಾಯ ನಿರೀಕ್ಷಕ ಗಣೇಶ ಗ್ರಾಮಲೆಕ್ಕಿಗರಾದ ಶಾರದ, ಬಸವರಾಜ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. 

ಮಳೆ ಅವಾಂತರ: 

ರಾತ್ರಿ ಇಡೀ ಸುರಿದ ಮಳೆಯಿಂದಾಗಿ ಸ್ಮಯೋರ್ ಕಾಖರ್ಾನೆಯ ಒಳ ಆವರಣದೊಳಗಿನ ನೀರೆಲ್ಲ ಕಾಂಪೌಂಡ್ ಕೆಳ ಭಾಗದಲ್ಲಿ ಒಡೆದುಕೊಂಡು ಗಾಳೆಮ್ಮನಗುಡಿ ಗ್ರಾಮದ ರಸ್ತೆ ಹಾಗೂ ಸೇತುವೆ ಕೆಳಗಡೆನುಗ್ಗಿ ರಸ್ತೆ ಬದಿಯ್ಲಿರುವ ಮನೆಗಳಿಗೆ ನುಗ್ಗಿ ಸಾರ್ವಜನಿಕರು ರಾತ್ರಿಇಡೀ ಜಾಗರಣೆ ಮಾಡಿದ್ದಾರೆ ರಾಜು, ಕೊಮಾರೆಪ್ಪ, ಗಜೇಂದ್ರಪ್ಪ, ಚಂದ್ರಶೇಖರ ಇವರ ಮನೆಗಳಿಗೆ ನುಗ್ಗಿ ಜನರನ್ನು ತೀವ್ರ ಸಂಕಷ್ಟಕ್ಕೀಡು ಮಾಡಿದೆ. ರಾತ್ರಿಇಡೀ ಜನರು ನೀರಿನಲ್ಲೆ ಕಾಲ ಕಳೆದಿದ್ದಾರೆ. ಅವಾಂತರಗಳು ಹೆಚ್ಚಾಗುತ್ತಿವೆ ಎಂದು ಸ್ಥಳೀಯರು ಸಮಸ್ಯೆ ವಿವರಣೆ ನೀಡಿದರು.   

ನೀರು ಹರಿದು ನದಿ ಸೇರುವ ಮಾರ್ಗದಲ್ಲಿ ಕಲ್ಲು ಮಣ್ಣು ತುಂಬಿ ನೀರು ಸುಗಮವಾಗಿ ಸಾಗದೇ ನಿಂತುಬಿಡುತ್ತದೆ ಇದರಿಂದ ರಸ್ತೆಗೆಲ್ಲಾ ಹರಿದು ಮನೆಗಳೊಳಗೆ ನುಗ್ಗತಿವೆ. ಇದೇ ಮಳೆಗಾಲದಲ್ಲಿ ಇದೇ ಸಮಸ್ಯೆಯುಂಟಾಗಿತ್ತು ಆದರೂ ಸಂಬಂಧಪಟ್ಟ ಅಧಿಕಾರಿಗಳು  ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ಆಗ್ರಹಸಿದ್ದಾರೆ. 

ಹೊಸಪೇಟೆ ತಹಸೀಲ್ದಾರರಾದ ಹೆಚ್.ವಿಶ್ವನಾಥ ಪ್ರತಿಕ್ರಿಯಿಸಿ ಕಾಖರ್ಾನೆಯವರು ತಮ್ಮ ವ್ಯಾಪ್ತಿಯಲ್ಲಿ ಕಾನೂನಾತ್ಮಕವಾಗಿ ಇದ್ದಾರೆ. ನಾಳೆ ಕಾಖರ್ಾನೆಯವರನ್ನೂ ಮತ್ತು ಎಲ್ ಅಂಡ್ ಟಿ.ಕಂಪನಿಯವರನ್ನೂ ಕರೆಸಿ ಸವರ್ೆ ಮಾಡಿ ನೀರು ಸುಗಮವಾಗಿ ಹರಿದು ಹೋಗುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.