ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ಧೇಶಕರಿಗೆ ಸನ್ಮಾನ ಕಾರ್ಯಕ್ರಮ

Honorary program for the directors of Haveri District Cooperative Milk Producers' Union

ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ಧೇಶಕರಿಗೆ ಸನ್ಮಾನ ಕಾರ್ಯಕ್ರಮ  

ಶಿಗ್ಗಾವಿ 17 : ಹೆಚ್ಚಿನ ರೀತಿಯಲ್ಲಿ ರೈತರಿಗೆ ನೆರವು ಕೊಡಿಸುವಂತಹ ಕೆಲಸಗಳನ್ನ ನೂತನ ಕೆಎಂಎಫ್ ನಿರ್ದೇಶಕರು ಮಾಡಿ ರೈತರ ಆರ್ಥಿಕ ಭಲವರ್ಧನೆಗೆ ಶ್ರಮಿಸಬೇಕು ಎಂದು ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು. 

ತಾಲೂಕಿನ ಗಂಗೇಬಾವಿ ರೆಸಾರ್ಟನಲ್ಲಿ ಮಾಜಿ ಜಿಲ್ಲಾ ಪಂಚಾಯತಿಯ ಸದಸ್ಯ ಶಶಿಧರ ಹೊನ್ನಣ್ಣವರ ಬಳಗದ ವತಿಯಿಂದ ಹಮ್ಮಿಕೊಂಡ ನೂತನ ಶಿಗ್ಗಾವಿ ಹಾಗೂ ಸವಣೂರ ತಾಲೂಕಿನ ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೆಎಂಎಫ್) ನಿರ್ಧೇಶಕರಾದ ಶಶಿಧರ ಯಲಿಗಾರ ಹಾಗೂ ತಿಪ್ಪಣ್ಣ ಸಾತಣ್ಣವರ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೈನುಗಾರಿಕೆ ರೈತರ ಉಪಕಸುಬಾಗಿದೆ ಇದನ್ನು ಉದ್ಯಮವಾಗಿ ಪರಿಗಣಿಸಿ ಇದಕ್ಕೆ ವ್ಯಾಪಕವಾದ ಸೌಲಭ್ಯವನ್ನು ಕಲ್ಪಿಸಿ ಅವಶ್ಯವಿರುವ ಸಾಲ ಸೌಲಭ್ಯ, ಆಕಳು ಹಾಗೂ ಎಮ್ಮೆಗಳನ್ನ ನೀಡುವುದು ಮತ್ತು ಮೇವು, ಹಿಂಡಿಯನ್ನು ಸಬ್ಸಿಡಿ ದರದಲ್ಲಿ ನೀಡುವಂತಹ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕಾರ್ಯವಾಗಲಿ ಎಂದು ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಶಶಿಧರ ಹೊನ್ನಣ್ಣವರ, ಮುಖಂಡರಾದ ಗದಿಗಯ್ಯ ಹಿರೇಮಠ, ಸಿದ್ದಲಿಂಗೇಶ ಕಲಿವಾಳ, ಸಿರಾಜಅಹ್ಮದ್ ಮುಲ್ಲಾ, ಮಲ್ಲೇಶ್ ಬೂದಿಹಾಳ, ಯಲ್ಲಪ್ಪಗೌಡ ಪಾಟೀಲ್, ಸುರೇಶ್ ಮುರಾರಿ, ರಮೇಶ್ ಹುಬ್ಬಳ್ಳಿ, ಬಾಪುಗೌಡ ಪಾಟೀಲ ಹಾಗೂ ಇನ್ನೂ ಅನೇಕರು ಭಾಗವಹಿಸಿದ್ದರು.