ಚಿತ್ರಕಲಾವಿದ ನಡೋಣಿಗೆ ಗೌರವ ಡಾಕ್ಟರೇಟ್

ರಾಯಬಾಗ 26: ಬೆಂಗಳೂರಿನ ಇಂಡಿಯನ್ವರ್ಚುವಲ್ ಅಕಾಡೆಮಿ ಫಾರ್ ಪೀಸ್ ಆ್ಯಂಡ್ ಎಜುಕೇಶನ್ ಮುಕ್ತ ವಿವಿಯು ಪಟ್ಟಣದ ಖ್ಯಾತ ಚಿತ್ರಕಲಾವಿದ ಬಾಬುರಾವ್ ನಡೋಣಿ ಅವರನ್ನು ಗೌರವಡಾಕ್ಟರೇಟ್ ಪ್ರಶಸ್ತಿಗೆ ಆಯ್ಕೆ ಮಾಡಿದೆ. 

ಜು.27ರಂದು ಗೋವಾದ ಪಣಜಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಗೋವಾ ಮುಖ್ಯಮಂತ್ರಿಗಳು ಬಾಬುರಾವ್ ನಡೋಣಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. 

ಬಾಬುರಾವ್ ನಡೋಣಿಅವರು ಸಂಕ್ಷೀಪ್ತ ಪರಿಚಯ: ಚಿತ್ರಕಲೆಯಲ್ಲಿ ಅಪ್ರತಿಮ ಸಾಧನೆ ಮಾಡಿರುವ ಅಂತರರಾಷ್ಟ್ರೀಯ ಕಲಾವಿದ ಬಾಬುರಾವ್ ಅವರು ರಾಯಬಾಗ ಪಟ್ಟಣದ ನಿವಾಸಿಯಾಗಿದ್ದಾರೆ. ಬಾಲ್ಯದಿಂದಲೆ ಚಿತ್ರಕಲೆ, ರಂಗೋಲಿ ಕಲೆಗಳಲ್ಲಿ ಚಿತ್ರಗಳನ್ನು ಬಿಡಿಸಿ ಜನರಿಂದ ರಂಗೋಲಿ ಬಾಬು ಎಂದು ಕರೆಸಿಕೊಂಡಿದ್ದಾರೆ.

ಚಿತ್ರಕಲೆ ಅಷ್ಟೇ ಅಲ್ಲದೇ ಶಿಲ್ಪಕಲೆ, ಸಂಗೀತ, ಸಾಹಿತ್ಯ, ಯೋಗ, ಕೊಳಲುವಾದನ ಹೀಗೆ ಹಲವಾರು ಪ್ರತಿಭೆಗಳನ್ನು ಮೈಗೂಡಿಸಿಕೊಂಡಿರುವ ಇವರು ಬಹುಮುಖ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಕೇವಲ 20 ನಿಮಿಷಗಳಲ್ಲಿ ಭಾವಚಿತ್ರ ರಚಿಸುವ ಇವರ ಕೈಚಳಕದಿಂದ ದೇಶದಲ್ಲಿ ಪ್ರಸಿದ್ಧರಾಗಿದ್ದಾರೆ. ಇವರು ಸಮಕಾಲೀನ ಕಲೆ ಹಾಗೂ ನೈಜಕಲೆಯಲ್ಲಿ ಸಮನ್ವಯ ಸಾಧಿಸಿದ ಅಪರೂಪದಕ ಲಾವಿದರಾಗಿದ್ದಾರೆ. ಇವರ ಕಲಾಕೃತಿಗಳು ದೇಶವಿದೇಶಗಳಲ್ಲಿ ಪ್ರದರ್ಶನಗೊಂಡು ಜನಮನ್ನಣೆ ಪಡೆದಿವೆ.

ಸುಮಾರು 40 ವರ್ಷಗಳಿಂದ ಕಲಾಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಕಲಾಕೃತಿಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅನೇಕ ಪ್ರಶಸ್ತಿಗಳು ಲಭಿಸಿವೆ. ದೇಶದ ಹಲವಾರು ರಾಜ್ಯಗಳು, ವಿಶ್ವವಿದ್ಯಾಲಯಗಳು ಇವರನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನಿಸಿವೆ. ಕಲಾಸೇವೆಯೊಂದಿಗೆ ಸಮಾಜಸೇವೆ, ಪರಿಸರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು, ಗಡಿಭಾಗದಲ್ಲಿ ಹಲವಾರು ಕಲಾ ಚಟುವಟಿಕೆಗಳನ್ನು ಹಮ್ಮಿಕೊಂಡು ನಾಡಿನ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. 

ಬಾಬುರಾವ್ ನಡೋಣಿ ಅವರು ಚಿತ್ರಕಲೆಯಲ್ಲಿ ಮಾಡಿರುವ ಕಲಾಸೇವೆಯನ್ನು ಗುರ್ತಿಸಿ, ಜೀವಮಾನ ಸಾಧನೆಗಾಗಿ ಇಂಡಿಯನ್ ವರ್ಚುವಲ್ ಅಕಾಡೆಮಿ ಫಾರ್ ಪೀಸ್ ಆ್ಯಂಡ್ ಎಜುಕೇಶನ್ ಮುಕ್ತ ವಿಶ್ವವಿದ್ಯಾಲಯಯು ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿದೆ