ಹೊನ್ನಾವರ: ತಾ ಪಂ ಸಭಾಭವನದಲ್ಲಿ ಸಾಮಾನ್ಯ ಸಭೆ

ಲೋಕದರ್ಶನ ವರದಿ

ಹೊನ್ನಾವರ 12: ತಾಲೂಕ ಪಂಚಾಯತ ಸಭಾಭವನದಲ್ಲಿ ಅಧ್ಯಕ್ಷ ಉಲ್ಲಾಸ ನಾಯ್ಕ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿಪರಿಶೀಲನೆ ನಡೆಯಿತು.

       ಸಭೆ ಆರಂಭವಾಗುತ್ತಿದ್ದಂತೆ ಅಧ್ಯಕ್ಷ ಉಲ್ಲಾಸ ನಾಯ್ಕ ಕೆಲ ಇಲಾಖೆಯ ಅನುಪಾಲನಾ ವರದಿ ಇಲ್ಲದನ್ನು ಗಮನಿಸಿ ಆಕ್ರೋಶಿತರಾಗಿ ಅಧಿಕಾರಿಗಳಿಗೆ ಅನುಪಾಲನಾ ವರದಿ ನೀಡುವಂತೆ ಸೂಚಿಸಿದರು. ಸಣ್ಣ ನೀರಾವರಿ ಇಲಾಖಾ ಅಧಿಕಾರಿಗಳು ಸಭೆಗೆ ಸತತ ಗೈರು ಹಾಜರಿ ಉಳಿಯುತ್ತಿರುವದಕ್ಕೆ ಸದಸ್ಯರು ಸಿಟ್ಟಿಗೆದ್ದು ಅದ್ಯಕ್ಷ ಉಲ್ಲಾಸ ನಾಯ್ಕ ಅವರನ್ನು ಪ್ರಶ್ನಿಸಿದರು.ಪ್ರಶ್ನೆಗೆ ಪ್ರತಿಯಾಗಿ ಅಧ್ಯಕ್ಷ ಉಲ್ಲಾಸ ನಾಯ್ಕ ಪ್ರತಿಕ್ರಿಯಿಸಿ ಚಿಕ್ಕ ನೀರಾವರಿ ಇಲಾಖೆಯವರು ಪ್ರತಿಬಾರಿ ಸಭೆಯನ್ನು ಉದ್ದೇಶಪೂರ್ವಕವಾಗಿಯೇ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.ಅಲ್ಲದೇ ಇವರ ಬೇಜವಬ್ದಾರಿತನದ ಕಾರ್ಯ ವೈಖರಿಯಿಂದ ತಾಲೂಕಿನ ರೈತ ಸಮುದಾಯಕ್ಕೆ ತೊಂದರೆಯಾಗುತ್ತಿದೆ ಆದರು ಇಲಾಖೆ ಇನ್ನು ಎಚ್ಚೆತ್ತುಕ್ಕೊಂಡಿಲ್ಲ ಎಂದು ಅಸಮಧಾನ ಹೊರಹಕಿದರು.

      ವೇಳೆ ಸದಸ್ಯ ಅಣ್ಣಯ್ಯ ನಾಯ್ಕ ಆಕ್ರೋಶಿತರಾಗಿ, ತಾಲೂಕಾ ಪಂಚಾಯತ್ವೇ ಇದಕ್ಕೆ ಹೊಣೆಯಾಗಿದೆ ಅದ್ಯಕ್ಷರೇ ನೀವು ಇದರ ಜವಾಬ್ದಾರಿ ಹೊರಬೇಕು, ಕೂಡಲೇ ಸಭೆಗೆ ಅವರನ್ನು ಕರೆಯಿಸಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸದಸ್ಯರೆಲ್ಲರು ಪ್ರತಿಭಟನೆ ಹಾದಿ ತುಳಿಯಬೇಕಾಗುತ್ತದೆ. ತಾ.ಪಂ.ಸದಸ್ಯರಿಗೆ ಬೆಲೆ ಇಲ್ಲದಂತಾಗಿದೆಚಿಕ್ಕನೀರಾವರಿ ಇಲಾಖೆ ಬಹಳಷ್ಟು ಕಡೆಗಳಲ್ಲಿ ಕಳಪೆ ಕಾಮಗಾರಿ ನಡೆಸುತ್ತಿದೆ. ಇಲಾಖೆ ಅಧಿಕಾರಿಗಳು ಸಬೆಗೆ ಹಾಜರಿಲ್ಲದಿದ್ದರೆ ಯಾರಲ್ಲಿ ಸಾರ್ವಜನಿಕರ ಸಮಸ್ಯೆ ಪರಿಶೀಲನೆ ನಡೆಸಬೇಕು ಎಂದು ಅದ್ಯಕ್ಷರನ್ನು ಪ್ರಶ್ನಿಸಿದರು.

       ಶಿಕ್ಷಣ ಇಲಾಖೆ ಕುರಿತ ಚಚರ್ೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಶ್ ಪದಕಿ ಮಾತನಾಡಿ ಮಳೆಯಿಂದ ಹಾನಿಗೊಳಗಾದ ಶಾಲೆಗಳ ದುರಸ್ಥಿ ಕಾರ್ಯ ನಡೆಯುತ್ತಿದೆ.ತಾಲೂಕಿನ 16 ಶಾಲೆಗಳ ದುರಸ್ತಿ ಕಾರ್ಯಕ್ಕೆ 17 ಲಕ್ಷ 65 ಸಾವಿರ ಹಣ ಬಿಡುಗಡೆಯಾಗಿ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ ವಿಭಾಗದಿಂದ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು ಕೇವಲ ಎರಡು ಶಾಲೆಗಳ ಕಾಮಗಾರಿ ಬಾಕಿ ಇದೆ ಎಂದರು.

     ಅದ್ಯಕ್ಷ ಉಲ್ಲಾಸ ನಾಯ್ಕ ಮಾತನಾಡಿ ಶಾಲಾ ಆರಂಭವಾಗಿ ಪ್ರಥಮ ಸೆಮಿಸ್ಟರ್ ಕಳೆದರು ಸಹ ಇದುವರೆಗು ಕೆಲ ಶಾಲಾ ವಿದ್ಯಾಥರ್ಿಗಳಿಗೆ ಸಮಸವಸ್ತ್ರ ಪೂರೈಕೆಯಾಗಿಲ್ಲ,ಶಿಕ್ಷಕರ ನೇಮಕ ಪ್ರಕ್ರಿಯೆಯು ನಡೆದಿಲ್ಲ ಎಂದು ಇಲಾಖೆಯ ಕುಂಠುತನಕ್ಕೆ ಕಿಡಿಕಾರಿದರು.

       ಇನ್ನು ಆರೋಗ್ಯ ಇಲಾಖಾ ಸಂಬಂದಿತ ಚಚರ್ೆಯಲ್ಲಿ ಇಲಾಖಾ ಅಧಿಕಾರಿಗಳು ಸಭೆಗೆ ತಿಳಿಸಿ ತಾಲೂಕು ವ್ಯಾಪ್ತಿಯಲ್ಲಿ 7 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗನ ಖಾಯಿಲೆ ಪತ್ತೆಯಾಗಿದೆ ಎಂದರು.

ಕೃಷಿ ಇಲಾಖೆೆ ಸಂಭಂದಿತ ಚಚರ್ೆಯಲ್ಲಿ ರೈತರಿಗೆ ಲಬ್ಯವಿರುವ ಇಲಾಖೆಯಲ್ಲಿನ ಯೋಜನೆಗಳ ಬಗ್ಗೆ  ಅಧಿಕಾರಿಗಳು ಮಾಹಿತಿ ತಿಳಿಸಿದರು.

       ತೊಟಗಾರಿಕೆ ಇಲಾಖೆ ಚಚರ್ೆಯಲ್ಲಿ ಅಧಿಕಾರಿಗಳು ಸಭೆಗೆ ತಿಳಿಸಿ ಬೆಲೆ ಪರಿಹಾರ ಅಜರ್ಿ ಪಡೆಯುತ್ತದ್ದೆವೆ ಎಂದರುಸದಸ್ಯ ಗಣಪಯ್ಯ ಗೌಡ ಪ್ರತಿಯಾಗಿ ಮಾತನಾಡಿ ಅಜರ್ಿ ಪಡೆಯೋ ಬಗ್ಗೆ ನನಗೆ ಮಾಹಿತಿ ಇಲ್ಲ ನಾನು ಸದಸದ್ಯನಾಗಿ ಜನರಿಗೆ ಹೇಗೆ ಹೇಳಲಿ ಎಂದು ಪೇಚಿಗೆ ಸಿಲುಕಿದರು.

ಬಗ್ಗೆ ಸದಸ್ಯ ಆರ್.ಪಿ ನಾಯ್ಕ ಸಭೆಗೆ ತಿಳಿಸಿ ಬೆಳೆ ಪರಿಹಾರ ವಿತರಣೆ ಸಕರ್ಾರ ಮಟ್ಟದಿಂದಲೇ ಆಗಬೇಕು ಇನ್ಸುರೆನ್ಸ್ ಕಂಪನಿಯಿಂದ ಬೆಡವೆಂದರು.

 ಇನ್ನು ಸಾರಿಗೆ ಇಲಾಖೆ ಸಂಬಂದಿತ ಚಚರ್ೆ ಬಂದಾಗ ಇಲಾಖಾ ಅಧಿಕಾರಿಗಳೊಂದಿಗೆ ಸದಸ್ಯ ತುಕಾರಾಮ್ ನಾಯ್ಕ ಮಾತನಾಡಿ ವಿದ್ಯಾಥರ್ಿಗಳು ಬಸ್ಸಿಗೆ ಜೋತಾಡುತ್ತಾ ಬಸ್ಸಿನ ಭಾಗಿಲ ಬಳಿ ನಿಲ್ಲುವ ಪರಿಸ್ಥಿತಿ ಕಂಡು ಬಂದಿದೆ. ಬಸ್ ಚಲಿಸುತ್ತಿರುವಾಗ ಎನಾದರು ಅನಾಹುತ ಸಂಭವಿಸುವ