ಲೋಕದರ್ಶನ ವರದಿ
ಕೊಪ್ಪಳ 27: ನಗರದ ಪ್ರಮುಖ ಜವಾಹರ್ ರಸ್ತೆ ಬಾಜಾರ್ ಏರಿಯಾದಲ್ಲಿರುವ ಪ್ರತಿಷ್ಠಿತ ಯೂಸೂಫಿಯಾ ಮಸೀದಿಗೆ ಇತ್ತಿಚೆಗೆ ಚುನಾವಣೆ ಮೂಲಕ ನೂತನ 11 ಜನ ಪದಾಧಿಕಾರಿಗಳು ಆಯ್ಕೆಗೊಂಡಿದ್ದು ಈ 11 ಜನ ಪದಾಧಿಕಾರಿಗಳ ಪೈಕಿ ಅತಿ ಹೆಚ್ಚು ಮತಗಳನ್ನು ಪಡೆದು ದಾಖಲೆ ನಿಮರ್ಿಸಿದ ಕೊಪ್ಪಳದ ಹಿರಿಯ ಸಮಾಜ ಸೇವಕ ಹಾಜಿ ಸೈಯ್ಯದ್ ಹಜರತ್ ಪಾಷಾ ಖಾದ್ರಿ (ಹಜ್ಜು ಖಾದ್ರಿ) ರವರು ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆಗೊಂಡಿದ್ದಾರೆ. ಎಲ್ಲಾ ಸದಸ್ಯರು ಸೇರಿ ಒಮ್ಮತದ ನಿರ್ಣಯ ಕೈಗೊಂಡು ಆಯ್ಕೆಮಾಡಿಕೊಂಡಿದ್ದಾರೆ.
ಸದರಿ ಆಡಳಿತ ಮಂಡಳಿಗೆ ಉಪಾಧ್ಯಕ್ಷರಾಗಿ ಮಹಮದ್ ಸಲಾವುದೀನ್(ಇಕ್ಬಾಲ್ ಖಾಜಿ) ಕಾರ್ಯದಶರ್ಿಯಾಗಿ ಮಹಮ್ಮದ್ ಅಬ್ದುಲ್ ಹಮೀದ್ ಹಾಗೂ ಖಜಾಂಚಿಯಾಗಿ ಸಯ್ಯದ್ ಯಜದಾನಿ ಪಾಷಾ ಖಾದ್ರಿ ಆಯ್ಕೆಗೊಂಡಿದ್ದು ಉಳಿದ 7 ಜನ ಸದಸ್ಯರು ಕಾರ್ಯಕಾರಿಣಿ ಸಮಿತಿಗೆ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ. ಜಿಲ್ಲಾ ವಕ್ಫ ಇಲಾಖೆಯ ಅಧಿಕಾರಿ ಮಕ್ಬೂಲ್ ಪಾಷಾ ರವರು ನೂತನ ಪದಾಧಿಕಾರಿಗಳ ಆಯ್ಕೆ ಘೋಷಿಸಿದ್ದಾರೆ.
ಸದರಿ ಯೂಸೂಫಿಯಾ ಮಸೀದಿಗೆ ಈ ಹಿಂದೆ ದಿವಂಗತ ಎಸ್.ಎನ್ ಖಾದ್ರಿ, ದಿ. ಮೈನುದ್ದೀನ್ ಹುಸೇನಿ, ದಿ. ಎಸ್,ಹೆಚ್ ಖಾದ್ರಿ, ಕರೀಮ್ ಸಾಬ್, ಅಜಗರ ಅಲಿ ನವಾಬ್, ಮಾಜಿ ಸಂಸದ ಸಯ್ಯದ್ ತಾಜುದ್ದೀನ್ ಖಾದ್ರಿ ಇತ್ಯಾದಿ ಮುಖಂಡರು ಸೇವೆ ಸಲ್ಲಿಸಿ ಮಸೀದಿಯ ಅಭಿವೃದ್ಧಿ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಿ ಶ್ರಮಿಸಿದ ಸದರಿ ಮಸೀದಿಗೆ ಈಗ ಇನ್ನೊರ್ವ ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿ ಮತ್ತು ತಮ್ಮನ್ನು ತಾವು ಸದಾ ಸಕ್ರೀಯವಾಗಿ ಸಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಶ್ರಮಿಸುತ್ತ ಸಮಾಜದ ಮತ್ತು ಸಾರ್ವಜನಿಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದ ಸಯ್ಯದ ಹಜರತ್ ಪಾಷಾ ಖಾದ್ರಿ (ಹಜ್ಜು ಖಾದ್ರಿ) ರವರು ಈ ಬಾರಿ ಸದರಿ ಮಸೀದಿಯ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಒಮ್ಮತದ ವ್ಯಕ್ತಿಯಾಗಿ ಆಯ್ಕೆಗೊಂಡಿದ್ದು ಸ್ವಚ್ಛ ಮತ್ತು ದಕ್ಷ ಆಡಳಿತ ಇವರಿಂದ ಜನ ಮತ್ತು ಸಮಾಜ ನಿರೀಕ್ಷಿಸಿದೆ.
ಈ ಕುರಿತು ನೂತನ ಅಧ್ಯಕ್ಷ ಸಯ್ಯದ ಹಜರತ್ ಪಾಷಾ ಖಾದ್ರಿ (ಹಜ್ಜು ಖಾದ್ರಿ) ಮಾತನಾಡಿ ಮೂರು ವರ್ಷದ ಅವಧಿಯಲ್ಲಿ ಜಾಗಾ ಖರೀದಿಮಾಡಿ ಅರಬ್ಬಿ ಶಾಲೆ ಪ್ರಾರಂಭಿಸಲು ಆದ್ಯತೆ ನೀಡಲಾಗುವುದು ಮಸೀದಿಯ ಸರ್ವತೋಮುಖ ಅಭಿವೃದ್ಧಿ ಕೆಲಸಕ್ಕೆ ಆದ್ಯತೆ ಜೊತೆಗೆ ಇಲ್ಲಿಗೆ ಬರುವ ಸಾರ್ವಜನಿಕರಿಗೆ ಎಲ್ಲಾ ಸೌಕರ್ಯ ಶುದ್ಧ ಕುಡಿಯುವ ನೀರು ಪೂರೈಕೆ ಸೇರಿದಂತೆ ಅಗತ್ಯ ಸೌಕರ್ಯ ವದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಮಸೀದಿ ಆವರಣದಲ್ಲಿ ಸೂಚನಾ ಪೆಟ್ಟಿಗೆ ಅಳವಡಿಸಿ ಸಮಾಜದ ಜನರ ಸಮಸ್ಯೆ, ಬೇಡಿಕೆ ಮತ್ತು ಅವರ ಅಭಿಪ್ರಾಯಕ್ಕೆ ತಕ್ಕಂತೆ ಶ್ರಮಿಸುವುದಾಗಿ ಹೇಳಿದ ಅವರು ಬರುವ 50 ವರ್ಷದ ಅವಧಿಗೆ ಇಲ್ಲಿ ಏನೆಲ್ಲಾ ಬೇಕಾಗಿದೆ ಎಂಬುವುದರ ಬಗ್ಗೆ ಯೋಜನಾ ಪಟ್ಟಿ ಸಿದ್ದ ಪಡಿಸಿ ಅದರ ತಕ್ಕಂತೆ ಅದರ ಅನುಷಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವ ಇಂಗಿತ ವ್ಯಕ್ತ ಪಡಿಸಿದ ಅವರು ತಮ್ಮ ಆಯ್ಕೆಗೆ ಶ್ರಮಿಸಿದ 498 ಜನ ಸಮಸ್ತ ಸದಸ್ಯ ಮತದಾರರಿಗೆ ಚುನಾವಣೆ ಪ್ರಕ್ರಿಯೆ ಯಶಸ್ವಿಯಾಗಿ ನಿರ್ವಹಿಸಿದ ಜಿಲ್ಲಾ ವಕ್ಫಬೋರ್ಡ ಅಧಿಕಾರಿಗಳಿಗೆ ಹಾಗೂ ಶಾಂತಿಯುತ ಪೊಲೀಸ್ ಬಂದೋಬಸ್ತ ನಿರ್ವಹಿಸಿದ ಪೊಲೀಸ ಅಧಿಕಾರಿಗಳಿಗೆ ನೂತನ ಅಧ್ಯಕ್ಷರು ಅಭಿನಂದಿಸಿದರು.