ಗೃಹಲಕ್ಷ್ಮೀ ಹಣದಿಂದ ಗೂಗಿಹಾಳ ಗ್ರಾಮಸ್ಥರಿಗೆ ಹೊಳಿಗೆ ಊಟ

Holige Meals for villagers of Googihala with Grilahakshmi money

ಇಂಡಿ 07: ಮುಖ್ಯಮಂತ್ರಿ ಸಿದ್ದರಾಮಯ್ಯಾ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಜನಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆಗೊಳಿಸಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂಬ ವಿಪಕ್ಷದವರ ಹೇಳಿಕೆಗಳಿಗೆ ಸೂಕ್ತ ಉತ್ತರ ನೀಡಿ ಸ್ವಾವಲಂಬಿ ಕರ್ನಾಟಕ ರೂಪಿಸುವತ್ತ ಸರ್ಕಾರ ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಹೇಳಿದರು.  

ಅವರು ಇಂಡಿ ತಾಲ್ಲೂಕಿನ ತಾಂಬಾ ಸಮೀಪದ ಗೂಗಿಹಾಳ ಗ್ರಾಮದ ಗೃಹ ಲಕ್ಷ್ಮೀ ಯೋಜನೆ ಫಲಾನುಭವಿ ಮಾಬೂಬಿ ಅಬ್ಬಾಸಲಿ ಚೌಧರಿ ಎಂಬ ಫಲಾನುಭವಿ ಇವರು ಗೃಹ ಲಕ್ಷ್ಮೀ ನೀಡಿವ ಹಣ ಉಳಿಸಿ ಸಿಂದಗಿ ಶಾಸಕ ಅಶೋಕ ಮನಗೂಳಿ ಮತ್ತು ಸಮಸ್ಥ ಗ್ರಾಮಸ್ಥರಿಗೆ ಹೊಳಿಗೆ ಊಟ ಮಾಡಿಸಿ ತುಂಬಾ ತುಂಬಾ ಸುದ್ದಿಯಾಗಿದ್ದಾರೆ. 

ಈ ಸಂದರ್ಭದಲ್ಲಿ ಮಾತನಾಡಿ ಶಾಸಕರಾದ ಅಶೋಕ ಮನಗೂಳಿ ಅವರು ಮಾತನಾಡಿ ಹಳಸದ ಅನ್ನವಿಲ್ಲ ಅದು ಹಳಸುವ ಮುನ್ನ ಊಟಮಾಡಬೇಕು, ಬಾಡದ ಹೂವಿಲ್ಲ ಅದು ಬಾಡುವ ಮುನ್ನ ಮುಡಿಯಬೇಕು, ಕೆಡಲಾರದ ಹಣ್ಣುಗಳಿಲ್ಲ ಅವು ಕೇಡುವ ಮುನ್ನ ಸೇವಿಸಬೇಕು, ಸಾಯದ ಮನುಷ್ಯನಿಲ್ಲ ಸಾಯುವ ಮುನ್ನ ಸತ್ಯದ ಕಿರ್ತಿ ಪಡೆಯಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಸಿಂದಗಿ ತಾಲೂಕ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಗ್ಯಾರಂಟಿ ಯೋಜನೆ ಅಧ್ಯಕ್ಷ ಶ್ರೀಶೈಲ ಕವಲಗಿ, ಜಿಲ್ಲಾ ಕೆಡಿಪಿ ಸದಸ್ಯರಾದ ನೂರಹಮ್ಮದ ಅತ್ತಾರ, ಸುನಂದಾ ಯಂಪುರೆ, ಮಹಾನಂದ ಬಮ್ಮಣ್ಣಿ, ಜಯಶ್ರೀ ಹಂದನೂರ, ಗ್ರಾಮ ಪಂಚಾಯತ ಅಧ್ಯಕ್ಷ ರಜಾಕ ಚಿಕ್ಕಗಸಿ, ಪರಸು ಬಿಸನಾಳ, ರಾಚ್ಚಪ್ಪ ಗಳೇದ, ಅಪ್ಪಣ್ಣ ಕಲ್ಲೂರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು