ಲೋಕದರ್ಶನ ವರದಿ
ಮುದಗಲ್ಲ 11: ಪಟ್ಟಣದಲ್ಲಿ ಕಳೆದ 10ದಿನಗಳಿಂದ ಆಚರಿಸಲಾದ ಐತಿಹಾಸಿಕ ಮುದಗಲ್ಲ ಮೊಹರಂಗೆ ಮಂಗಳವಾರ ಕೋಟೆಯ ಹೋರಭಾಗದ ಚಾವಡಿ ಹಿಂಬದಿಯ ರಸ್ತೆಯಲ್ಲಿ ಹಸನ್-ಹುಸೇನ ಪೀರಾಗಳ ಸಾಮೂಹಿಕ ಭೇಟಿಯಿಂದ ಸಂಭ್ರಮದ ತೆರೆಬಿದ್ದಿತು.
ಸೆ. 1ರಿಂದ ಆರಂಭವಾಗಿದ್ದ ಮುದಗಲ್ಲ ಮೊಹರಂ ಹಬ್ಬಕ್ಕೆ ಮಂಗಳವಾರ ಚಾವಡಿ ಕಟ್ಟೆಯ ಹಿಂದಿನ ರಸ್ತೆಯಲ್ಲಿ ವೆಂಕಟರಾಯನಪೇಟೆಯ ಕಾಸಿಂ ಪೀರ, ಕಿಲ್ಲಾದ ಅಲಿ- ಅಬ್ಬಾಸಲಿ, ಮೇಗಳಪೇಟೆಯ ಹಸನ್- ಕಿಲ್ಲಾದ ಹುಸೇನ್ ಆಲಂಗಳು ಸಾಮೂಹಿಕವಾಗಿ ಭೇಟಿಯ ದೃಶ್ಯಗಳು ಲಕ್ಷಾಂತರ ಭಕ್ತರು ಸಾಕ್ಷಿಕರಿಸಿದವು. 4ಗಂಟೆ ಸುಮಾರಿಗೆ ಕಿಲ್ಲಾದ ಹುಸೇನಿ ಆಲಂ ದಗರ್ಾದಿಂದ ಮೆರವಣಿಗೆ ಮೂಲಕ ಪೀರಾಗಳನ್ನು ಕರೆತರಲಾಯಿತು. ಇತ್ತ ಮೆಗಳಪೇಟೆ ಹಸನ್ ದೇವರನ್ನು ಸಹ ಬಾಗಲಕೋಟೆ ರಸ್ತೆ ಮೂಲಕ ಕರೆತರಲಾಯಿತು. ಹಸನ್-ಹುಸೆನ್ರ ಐತಿಹಾಸಿಕ ಭೇಟಿಯ ಸಮಯದಲ್ಲಿ ಸಿಡಿ ಮದ್ದುಗಳು ಆಕಾಶದೆತ್ತರಕ್ಕೆ ಜಿಗಿದು ನಕ್ಷತ್ರದಂತೆ ಮಿಂಚುತ್ತಿರುವುದು ಒಂದೆಡೆಯಾದರೆ, ಆಂದ್ರಾಪ್ರದೇಶ, ತಮೀಳುನಾಡು, ತೆಲಂಗಾಣ, ಮಹಾರಾಷ್ಟ್ರ, ಗೋವಾ ಹಾಗೂ ವಿದೇಶಗಳು ಸೇರಿದಂತೆ ಸೂತ್ತಲಿನ ಗ್ರಾಮಗಳಿಂದ ಬಂದ ಲಕ್ಷಾಂತರ ಭಕ್ತರ ಘೋಷಣೆಗಳು ಮೊಳಗುತ್ತಿದ್ದವು. ಉತತ್ತಿ, ಹೂವು, ಹಣ್ಣು ಎಸೆಯುವ ಮೂಲಕ ಭಕ್ತರ ತಮ್ಮ ಇಷ್ಠಾರ್ಥಗಳನ್ನು ಈಡೇರಿಸಿಕೊಂಡರು.
ಸುಮಾರು ಮೂರು ಘಂಟೆಗಳ ಕಾಲ ನಡೆದ ಭೇಟಿಯ ಕಾರ್ಯಕ್ರಮ ರೋಮಾಂಚನಕಾರಿ ಯಾಗಿತ್ತು. ಭೇಟಿಯ ನಂತರ ಬಜಾರ ರಸ್ತೆ ಮೂಲಕ ಹಳೆಪೇಟೆಗೆ ತೆರಳಿ ಐತಿಹಾಸಿಕ ಭಾವಿಯಲ್ಲಿ ದಫನ್ ಕಾರ್ಯನಡೆಯಿತು.
ಭೇಟಿಯ ದೃಶ್ಯಾವಳಿಗಳನ್ನು ವೀಕ್ಷಿಸಲು ಲಿಂಗಸುಗೂರು ಕ್ಷೇತ್ರದ ಶಾಸಕ ಡಿ.ಎಸ್.ಹೂಲಗೇರಿ, ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಮಾಜಿ ಶಾಸಕ ಹಸನ್ಸಾಬ ದೋಟಿಹಾಳ, ಮಾನಪ್ಪ ವಜ್ಜಲ್, ಅನರ್ಹ ಶಾಸಕ ಪ್ರತಾಪಗೌಡರ ಪುತ್ರರಾದ ಪ್ರಸ್ನಪಾಟೀಲ್, ಚೇತನ ಪಾಟೀಲ್, ಸಹಾಯಕ ಆಯುಕ್ತ ರಾಜಶೇಖರ ಡಂಬಳ, ತಶೀಲ್ದಾರ ಚಾಮರಾಜ ಪಾಟೀಲ್, ಪೊಲೀಸ ಉಪವಿಭಾಗಾಧಿಕಾರಿ ಹರೀಶ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಂದಗಿ, ಜೆಡಿಎಸ್ ಮುಖಂಡ ಸಿದ್ದು ವೈ ಬಂಡಿ, ಕಾಂಗ್ರೆಸ್ ಮುಖಂಡ ಅಮರಗುಂಡಪ್ಪ ಮೇಟಿ, ಪುರಸಭೆ ಮಾಜಿ ಅದ್ಯಕ್ಷ ಅಶೋಕಗೌಡ ಪಾಟೀಲ, ಮಹಾಂತೇಶ ಪಾಟೀಲ್, ಅಜ್ಮೀರ ಸಾಬ, ದಾವೂದ ಸಾಬ, ಹನುಮಂತಪ್ಪ ಕಂದಗಲ್ಲ, ಪಿಕಾರ್ಡ ಬ್ಯಾಂಕ ಅಧ್ಯಕ್ಷ ನಾಗನಗೌಡ ತುರಡಗಿ, ಡಾ| ಅಯ್ಯಪ್ಪ ಬನ್ನಿಗೋಳ, ಗುರುಬಸಪ್ಪ ಸಜ್ಜನ್, ಬಿಜೆಪಿ ಮುಖಂಡರಾದ ವೀರನಗೌಡ ಲಕ್ಕಿಹಾಳ, ಗೀರಿಮಲ್ಲನಗೌಡ, ವೆಂಕನಗೌಡ ಐದನಾಳ, ಪರಮೇಶ, ಗೋವಿಂದ ನಾಯಕ, ಹುಸೇನಿ ಆಲಂ ಸಮೀತಿ ಅದ್ಯಕ್ಷ ಅಮೀರಬೇಗ್ ಉಸ್ತಾದ, ಕಾರ್ಯದಶರ್ಿ ಮಹ್ಮದ ಸಾಧಿಕಲಿ, ಜೆಡಿಎಸ್ ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅದ್ಯಕ್ಷ ಎಸ್.ಆರ್. ರಸೂಲ, ಮುಖ್ಯಾಧಿಕಾರಿ ಟಿ.ನರಸಿಂಹಮೂತರ್ಿ, ಪುರಸಭೆಯ ನೂತನ ಸದಸ್ಯರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.