ಲೋಕದರ್ಶನ ವರದಿ
ಶಿಗ್ಗಾವಿ 11: ದೇಶದ ಭವಿಷ್ಯ ಶಾಲಾ ಕೊಠಡಿಗಳಲ್ಲಿದೆ, ಇಂದು ಶಿಕ್ಷಣ ಜ್ಞಾನದ ಜೊತೆಗೆ ವಿಜ್ಞಾನಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ನಳಂದಾ ಶಿಕ್ಷಣ ಸಂಸ್ಥೆ ಶಿಗ್ಗಾವಿ, ನಳಂದಾ ಶಿಶುವಿಹಾರ, ರುದ್ರಮ್ಮ ಪಾಟೀಲ ಪೂರ್ಣ ಪ್ರಾಥಮಿಕ ಶಾಲೆ, ನಳಂದಾ ಪ್ರೌಢ ಶಾಲೆ ಶಿಗ್ಗಾವಿಯ 2018-19 ನೇ ಸಾಲಿನ ವಾಷರ್ಿಕ ಸ್ನೇಹ ಸಮ್ಮೇಳನ ಜರುಗಿತು.
ಮಕ್ಕಳು ಕೇವಲ ಶಿಕ್ಷಣ ಪಡೆಯುವುದಷ್ಟೆ ಅಲ್ಲ ಆ ಶಿಕ್ಷಣದ ಜೊತೆಗೆ ಶಿಸ್ತು, ಸಮಯ ಪ್ರಜ್ಞೆಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಇಂದಿನ ತಾಂತ್ರಿಕ ಯುಗದ ಶಿಕ್ಷಣದಲ್ಲಿ ಪೈಪೋಟಿ ಹೆಚ್ಚಾಗಿದೆ ಆಂಗ್ಲ ಮಾಧ್ಯಮಗಳ ಶಾಲೆಗಳು ನೂತನವಾಗಿ ತಲೆ ಎತ್ತಿದ್ದು ಕನ್ನಡ ಮಾಧ್ಯಮಗಳ ಪಠ್ಯಕ್ರಮ ಬದಲಾಗಬೇಕಿದೆ ಎಂದರು.
ನಳಂದಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪಿ ಆರ್ ಪಾಟೀಲ ಹಾಗೂ ಎಫ್ ಸಿ ಪಾಟೀಲ ಸೇರಿದಂತೆ ಹಲವಾರು ಹಿರಿಯರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಸಂಸ್ಥೆಯು ಶಿಕ್ಷಣದ ಬಗ್ಗೆ ಇರುವ ಅವರ ಖಾಳಜಿ ಮೇಲೆ ಈ ಸಂಸ್ಥೆಯ ಬೆಳವಣಿಗೆಗೆ ಕಾರಣವಾಗಿದೆ ಅಲ್ಲದೆ ಈಗಾಗಲೇ ಕಂಪೌಂಡ್ ನಿಮರ್ಾಣ ಮಾಡಲಾಗಿದೆ ಉಳಿದ ಕಂಪೌಂಡ ಕಟ್ಟಡ ಹಾಗೂ ಮಕ್ಕಳಿಗೆ ಶೌಚಾಲಯ ನಿಮರ್ಾಣ ಮಾಡಿ ಕೊಡುವ ಭರವಸೆ ನೀಡಿದರು.
ರಾಕ್ ಗಾರ್ಡನ್ ರೂವಾರಿಗಳಾದ ಟಿ ಬಿ ಸೊಲಬಕ್ಕನವರ ಮಾತನಾಡಿ, ಹೊರಗಿನಿಂದ ಬಂದ ಶಿಕ್ಷಣ ಸಂಸ್ಥೆಗಳು ಬೆಳೆದು ನಿಂತಿವೆ ಆದರೆ ಇಲ್ಲಿಯೇ ಇದ್ದು ಚಿಂತನಾಶಕ್ತಿಯುಳ್ಳ ಮನಸ್ಸುಗಳು ಒಡಗೂಡಿ ಕಟ್ಟಿರುವ ಶಿಕ್ಷಣ ಸಂಸ್ಥೆಗಳು ಬೆಳವಣಿಗೆಯಾಗಬೇಕಿದೆ ಎಂದರು.
ಭರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ತಾಲೂಕಿನ ಅಭಿವೃದ್ಧಿಯಲ್ಲಿ ಶಿಕ್ಷಣ ಅವಶ್ಯವಾಗಿದೆ, ಎಲ್ಲರೂ ಶಿಕ್ಷಣವಂತರಾದಾಗ ಮಾತ್ರ ತಾಲೂಕು ಮತ್ತು ಗ್ರಾಮದ ಅಭಿವೃದ್ಧಿ ಸಾಧ್ಯವಿದೆ ಎಂದರು.
ಜಿಲ್ಲಾ ನಿವೃತ್ತ ನ್ಯಾಯಾದೀಶರಾದ ಎಸ್ ಕೆ ಕುರಗೋಡಿ ಮಾತನಾಡಿದರು, ಹುಬ್ಬಳ್ಳಿಯ ಗುರು ಮುಳಗುಂದ ಅವರು ಉಪನ್ಯಾಸ ನೀಡಿದರು, ಸಂಸ್ಥೆಯ ಗೌರವ ಕಾರ್ಯದಶರ್ಿ ಎಫ್ ಸಿ ಪಾಟೀಲ ವಾಷರ್ಿಕ ವರದಿ ವಾಚನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಪಿ ಆರ್ ಪಾಟೀಲ ವಹಿಸಿದ್ದರು.
ಎಸ್ ಜಿ ಪಾಟೀಲ, ವಿ ವಿ ಕುರ್ತಕೋಟಿ ಬಿ ಜಿ ಖುಷರ್ಾಪೂರ, ಶಾಲೆಯ ಹಳೆ ವಿದ್ಯಾಥರ್ಿಗಳ ಸಂಘದ ಅಧ್ಯಕ್ಷ ಪ್ರಭುಗೌಡ ಕರೇಗೌಡ್ರ, ಡಾ. ಕುಮಾರಗೌಡ ಪಾಟೀಲ, ಬಸೆಟೆಪ್ಪ ಯಲಿಗಾರ, ಐ ಪಿ ಕೆ ಶೆಟ್ಟರ, ಸಿ ಎಸ್ ಹಾವೇರಿ, ಎಸ್ ಎಚ್ ಪಾಟೀಲ, ಎಮ್ ಬಿ ಹಳೆಮನಿ ಉಪಸ್ಥಿತರಿದ್ದರು, ಪಿ ವಿ ತೆಂಬದಮನಿ ಸ್ವಾಗತಿಸಿದರು, ಸಿ ಎಸ್ ಚರಂತಿಮಠ ನಿರೂಪಿಸಿದರು, ಎನ್ ಎಸ್ ಹಾದಿಮನಿ ವಂದಿಸಿದರು.