ಉನ್ನತ-ಕಾರ್ಯಕ್ಷಮತೆಯ ಕೈಗಾರಿಕಾ ಡ್ರೋನ್‌ಗಳು ಭಾರತದಲ್ಲಿ ನಿರ್ಮಾಣ

High-performance industrial drones built in India

ಉನ್ನತ-ಕಾರ್ಯಕ್ಷಮತೆಯ ಕೈಗಾರಿಕಾ ಡ್ರೋನ್‌ಗಳು ಭಾರತದಲ್ಲಿ ನಿರ್ಮಾಣ 

ಬೆಳಗಾವಿ 21: ಕೃಷಿ ಮತ್ತು ಸಮೀಕ್ಷೆ ಸೇರಿದಂತೆ ವೈವಿಧ್ಯಮಯ ವಿನ್ಯಾಸಗೊಳಿಸಲಾದ ಉನ್ನತ-ಕಾರ್ಯಕ್ಷಮತೆಯ ಕೈಗಾರಿಕಾ ಡ್ರೋನ್‌ಗಳ ತಯಾರಿಸುವಲ್ಲಿ ಎ.ಎಮ್‌.ಎಕ್ಸ್‌ ಡ್ರೋನ್ಸ್‌ ಪರಿಣತಿ ಹೊಂದಿದೆ. ತನ್ನ ಗ್ರಾಹಕರ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ಮತ್ತು ತನ್ನ ಡ್ರೋನ್‌ಗಳ ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳಲು ಕಂಪನಿಯು ಕಟಿಬದ್ಧವಾಗಿದೆ ಎಂದು ಫ್ಲೈಡ್ರೊ ಅಕಾಡೆಮಿ ಸಂಸ್ಥಾಪಕ ಮತ್ತು ಸಿಇಓ ಕೇದಾರನಾಥ ಕಾಮತ ಅವರು ಹೇಳಿದರು. 

ಅವರು ಇಂದು ಆದರ್ಶ ಪ್ಯಾಲೇಸ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಎ.ಎಮ್‌.ಎಕ್ಸ್‌ ಡ್ರೋನ್ಸ್‌ ಬೆಳಗಾವಿಯಲ್ಲಿ ತನ್ನ ಕೈಗಾರಿಕಾ ಡ್ರೋನ್ ತಂತ್ರಜ್ಞಾನ ಪ್ರದರ್ಶನ ಮತ್ತು ಫ್ಲೈಡ್ರೊ ಅಕಾಡೆಮಿ ಮೂಲಕ ವೃತ್ತಿಪರ ರಿಮೋಟ್ ಪೈಲಟ್ ವಿಮಾನ ವ್ಯವಸ್ಥೆಗಳ ತರಬೇತಿಯ (ಡಿ.ಜಿ.ಸಿ.ಎ ರಿಮೋಟ್ ಪೈಲಟ್ ಪ್ರಮಾಣೀಕರಣ) ಪ್ರಾಮುಖ್ಯತೆಯ ಮಹತ್ವದ ಬಗ್ಗೆ ತಿಳಿಸಿದರು.  

ಫ್ಲೈಡ್ರೊ ಅಕಾಡೆಮಿಯಿಂದ ಕೌಶಲ್ಯಪೂರ್ಣ ಡ್ರೋನ್ ಆಪರೇಟರ್‌ಗಳ, ಡಿ.ಜಿ.ಸಿ.ಎ-ಅಧಿಕೃತ ಡ್ರೋನ್ ಬಗ್ಗೆ ಸಮಗ್ರ ತರಬೇತಿಯನ್ನು ನೀಡಲಾಗುತ್ತದೆ. ಪ್ರಾಯೋಗಿಕ ಕೌಶಲ್ಯಗಳು ಮತ್ತು ಉದ್ಯಮ-ನಿರ್ದಿಷ್ಟ ಕೋರ್ಸ್‌ಗಳ ಮೇಲೆ, ಸುರಕ್ಷಿತ ಮತ್ತು ಪರಿಣಾಮಕಾರಿ ಡ್ರೋನ್ ಕಾರ್ಯಾಚರಣೆ ಬಗ್ಗೆ ತರಬೇತಿ ಕೇಂದ್ರೀಕೃತವಾಗಿರುತ್ತದೆ, ನಮ್ಮ ಮುಂದುವರಿದ ಡ್ರೋನ್ ತಂತ್ರಜ್ಞಾನ ಮತ್ತು ಭಾರತದಲ್ಲಿಯೇ ಉತ್ತಮ ಗುಣಮಟ್ಟದ ಡ್ರೋನ್‌ಗಳನ್ನು ತಯಾರಿಸುವ ನಮ್ಮ ಸಮರೆ​‍್ಣಯನ್ನು ಪ್ರದರ್ಶಿಸಲು ನಾವು ಹೆಮ್ಮೆಪಡುತ್ತೇವೆ ಎಂದು ಸಿಇಓ ಕೇದಾರನಾಥ ಕಾಮತ ತಿಳಿಸಿದರು.   

ಎ.ಎಮ್‌.ಎಕ್ಸ್‌ ಡ್ರೋನ್‌ಗಳು ವೈವಿಧ್ಯಮಯ ಅನ್ವಯಿಕೆಗಳಿಗಾಗಿ ಉನ್ನತ-ಕಾರ್ಯಕ್ಷಮತೆಯ ಕೈಗಾರಿಕಾ ಡ್ರೋನ್‌ಗಳನ್ನು ಭಾರತದಲ್ಲಿ ತಯಾರಿಸಲಾಗಿದೆ ಮತ್ತು ತಂತ್ರಜ್ಞಾನಕ್ಕೆ ಒತ್ತು ನೀಡುತ್ತದೆ  


ಫ್ಲೈಡ್ರೊ ಅಕಾಡೆಮಿ ಡಿ.ಜಿ.ಸಿ.ಎ -ಅನುಮೋದಿತ ಡ್ರೋನ್ ತರಬೇತಿಯನ್ನು ನೀಡುತ್ತದೆ, ಮತ್ತು ಪ್ರಾಯೋಗಿಕ ಕೌಶಲ್ಯಗಳು ಮತ್ತು ಉದ್ಯಮ-ನಿರ್ದಿಷ್ಟ ಕೋರ್ಸ್‌ಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ, 

ಕೈಗಾರಿಕೆಗಳಲ್ಲಿ ಡ್ರೋನ್ ಸೇವೆಗಳಿಗೆ ಹೆಚ್ಚುತ್ತಿರುವ ಬೇಡಿಕೆ, ಕೌಶಲ್ಯಪೂರ್ಣ ಡ್ರೋನ್ ಪೈಲಟ್‌ಗಳು ಮತ್ತು ನಿರ್ವಾಹಕರ ಹೆಚ್ಚುತ್ತಿರುವ ಅಗತ್ಯ, ವೃತ್ತಿ ಪ್ರಗತಿ ಮತ್ತು ವಿಶೇಷತೆಗೆ ಅವಕಾಶಗಳು, ಉದ್ಯಮಶೀಲತೆ ಮತ್ತು ಸ್ವಂತ ಡ್ರೋನ್ ವ್ಯವಹಾರವನ್ನು ಪ್ರಾರಂಭಿಸುವ ಸಾಮರ್ಥ್ಯ ಬೆಳವಣಿಗೆಯ ನೀರೀಕ್ಷೆಗಳಾಗಿದೆ ಎಂದು ಕೇದಾರನಾಥ ಕಾಮತ ತಿಳಿಸಿದರು.