ಶಿಗ್ಗಾವಿ 27 :ತಾಲೂಕಿನ ಕಡಹಳ್ಳಿ ಕ್ರಾಸ್ ಹತ್ತಿರದಜಮೀನಿನಲ್ಲಿ ಹಲವಾರು ವರ್ಷಗಳಿಂದ ಟಿ ಸಿ ತೊಂದರೆಅನುಭವಿಸುತ್ತಿರುವರೈತರು ಹೆಸ್ಕಾಂ ಅಧ್ಯಕ್ಷಖಾದ್ರಿಯವರಿಗೆ ಮನವಿ ಮಾಡಿಕೊಂಡಿದ್ದರು. ಮನವಿ ಸ್ವೀಕರಿಸಿದ ಹೆಸ್ಕಾಂ ಅಧ್ಯಕ್ಷಅಜ್ಜಿಂಪೀರಖಾದ್ರಿಯವರು ಶೀಘ್ರವಾಗಿ ರೈತರಿಗೆ ಸ್ಪಂದಿಸಿ ಹೊಸ ಟಿಸಿ ಅಳವಡಿಸಿ ಚಾಲನೆ ನೀಡಿದರು.ನಂತರ ವರದಿಗಾರರೊಂದಿಗೆ ಮಾತನಾಡಿಅವರುತಾಲೂಕಿನ ಕಡಹಳ್ಳಿ ಕ್ರಾಸ್ ಹತ್ತಿರ ಸಣ್ಣ ಸಣ್ಣ ಹಿಡುವಳಿದಾರ ರೈತರಿದ್ದು, ಇಲ್ಲಿಆರ್‌ಆರ್ ನಂಬರಇರುವ 9 ಐಪಿ ಸೇಟ್ಟ್ ಗಳಿದ್ದು, ಇದು 25ರ ಟಿಸಿ ಇರುವದರಿಂದ ಲೋಡ್ ಹೆಚ್ಚಿಗೆ ಆಗಿ ಪದೇ ಪದೇ ಟಿಸಿ ಸುಟ್ಟುತೊಂದರೆಯಾಗುತ್ತಿತ್ತು,ಇಲ್ಲಿನರೈತರು ನನಗೆ ಮನವಿ ಮಾಡಿದ್ದರಿಂದ ಶಿಘ್ರವಾಗಿ ಟಿಸಿ ಅಳವಡಿಸಿದ್ದೆವೆ. ಮತ್ತುಅವರ ನೀರಾವರಿ ಮಾಡುವಕನಸ್ಸನ್ನು ನನಸು ಮಾಡುವ ಪ್ರಯತ್ನ ಮಾಡಿದ್ದೆನೆ, ಈ ಕಾರ್ಯಕ್ಕೆ ಸ್ಪಂದಿಸಿದ ಎಲ್ಲಅಧಿಕಾರಿ ಮತ್ತು ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೆನೆಎಂದರು.
ಈ ಸಂದರ್ಭದಲ್ಲಿ ಮುಖಂಡರಾದಅಣ್ಣಪ್ಪ ಲಮಾಣಿ, ನಿಸಾರಅಹ್ಮದ ಪಾನವಾಲಾ, ಚನ್ನವೀರ ಹಿರೇಮಠ, ರುದ್ರಯ್ಯಚಿಕ್ಕಮಠ, ಚನ್ನಬಸಯ್ಯ ಹಿರೇಮಠ, ಬಸಯ್ಯ ಹಿರೇಮಠ, ಸಿದ್ದಲಿಂಗಯ್ಯ ಹಿರೇಮಠಸೇರಿದಂತೆಅಲ್ಲಿನರೈತರ ಮುಖಂಡರುರೈತರು ಉಪಸ್ಥಿತರಿದ್ದರು.