ಬಾಗಲಕೋಟೆ , ಜೂನ್ 26, ಬಾಗಲಕೋಟೆಯಲ್ಲೂ ನಿನ್ನೆ ರಾತ್ರಿ ತಡರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಹಲವಾರು ಮನೆಗಳ ಚಾವಣಿ ಹಾರಿ ಹೋಗಿದ್ದು ಜನತೆ ರಾತ್ರಿಯಿಡಿ ಚಳಿ, ಮಳೆಯಲ್ಲೆ ಬೀದಿಯಲ್ಲೆ ಕಾಲ ನೂಕಿದ್ದಾರೆ. ಬಿರುಗಾಳಿ ಅವಾಂತರಕ್ಕೆ ಮನೆಗಳ ಶೀಟುಗಳು ಹಾರಿಹೋಗಿದ್ದರೆ ಮತ್ತೊಂದು ಕಡೆ ,ಬಾಳೆತೋಟಗಳು ನೆಲಸಮವಾಗಿದೆ. ಬನಹಟ್ಟಿ ತಾಲ್ಲೂಕಿನಲ್ಲಿ ಮಳೆಯ ಅವಾಂತರ ಹೆಚ್ಚಾಗಿದ್ದು . ತಾಲ್ಲೂಕಿನ ಕೆಸರಗೊಪ್ಪ,ಚಿಮ್ಮಡ,ಜಗದಾಳ-ನಾವಲಗಿಯಲ್ಲಿ ಬೀಸಿದ ಬಿರುಗಾಳಿಯ ರಭಸಕ್ಕೆ ಹಲವು ಮನೆಗಳ ಚಾವಣಿ ಹಾರಿ ಹೋಗಿದೆ ವಿದ್ಯುತ್ ಟ್ರಾನ್ಸಪಾರ್ಮರ್ ಗಳು ಹಾಳಾಗಿ ರಾತ್ರಿಯಿಡಿ ಜನರು ಕತ್ತಲೆಯಲ್ಲೆ ಬದುಕುವಂತಹ ದಾರುಣ ಪರಿಸ್ಥಿತಿ ಬಂದಿದೆ.