ಲೋಕದರ್ಶನ ವರದಿ
ಮುಂಡಗೋಡ 19: ಭತ್ತದ ಕಾಳಿರುವ ಹುಲ್ಲಿನ ಬಣವೆಗಳಿಗೆ ಆಕಸ್ಮಿಕವಾಗಿ ಬೆಂಕಿ ರೈತನಿಗೆ ಅಪಾರ ನಷ್ಟವುಂಟಾದ ಘಟನೆ ತಾಲೂಕಿನ ನಾಗನೂರ(ಹನಮಾಪುರ) ಪಂಚಾಯತ್ ವ್ಯಾಪ್ತಿಯ ಅಟ್ಟಣಗಿ ಗ್ರಾಮದ ಹೊಲದಲ್ಲಿ ಶುಕ್ರವಾರ ರಾತ್ರಿ ನಡೆದಿದೆ
ಅಟ್ಟಣಗಿ ಗ್ರಾಮದ ಸವರ್ೇ ನಂ 52 ರ ರೈತರಾದ ಲಕ್ಷಣ ರಾಮಣ್ಣ ವಡ್ಡರ, ಶಂಕ್ರಪ್ಪ ರಾಮಣ್ಣ ವಡ್ಡರ ಮತ್ತು ಈರವ್ವ ಅಜರ್ುನ ವಡ್ಡರ( ಮೂವರು ಅಣ್ಣ ತಮ್ಮಂದಿರೂ) ಸೇರಿದ ತಲಾ 1ಎಕರೆ 20(ಸುಮಾರು 4 ಎಕರೆ 20 ಗುಂಠೆ) ಯಲ್ಲಿ ಬೆಳೆದ ಭತ್ತದ ಕಾಳಿನ ಒಂದರ ಪಕ್ಕ ಇನ್ನೊಂದು ಇರುವ ಮೂರು ಬಣವಿಗಳಿಗೆ ನಿನ್ನೆ ರಾತ್ರಿ ಸುಮಾರು 9 ಗಂಟೆಗೆ ಅಕಸ್ಮೀಕ ಬೆಂಕಿ ತಗುಲಿದೆ. ಬೆಂಕಿಯ ಕೆನ್ನಾಲಗಿಗೆ ಈ ಮೂವರಿಗೆ ಸೇರಿದ ಮೂರು ಭತ್ತದ ಬಣವೆಗಳು ಸುಟ್ಟು ಕರಕಲಾಗಿವೆ . ಮಾಹಿತಿಯನ್ನು ಪಡೆದ ಅಗ್ನಿ ಶಾಮಕದಳದವರು ಘಟನಾ ಸ್ಥಳಕ್ಕೆ ಆಗಮಿಸಿ ಸುಮಾರು 7 ತಾಸು ಬೆಂಕಿಯನ್ನು ನಂದಿಸುವ ಕಾಯರ್ಾಚರಣೆ ನಡೆಸಿದರು. ಅಷ್ಟರೊಳಗಾಗಿ ಬಣವೆಗಳು ಅರ್ಧದಷ್ಟು ಸುಟ್ಟು ಕರಕಲಾಗಿತ್ತು. ಇದರಿಂದ ಸುಮಾರು ರೂ.1 ಲಕ್ಷ ದಷ್ಟು(ಅಗ್ನಿಶಾಮಕ ವರದಿಯಂತೆ) ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಮೂರೂ ಬಣವೆಗಳು ಅಕ್ಕ ಪಕ್ಕದಲ್ಲಿರುವುದರಿಂದ ಒಂದು ಬಣವೆಗೆ ತಾಗಿದ ಬೆಂಕಿ ಉಳಿದ ಇನ್ನೆರಡು ಬಣವೆಗಳನ್ನು ಆವರಿಸಿ ಹಾನಿಯನ್ನುಂಟುಯಾಗಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿ, ಪೊಲೀಸರು ಭೇಟಿನೀಡಿ
ಪರಿಶೀಲಿಸಿದ್ದಾರೆ