ವಾಣಿಜ್ಯ ನಗರದಲ್ಲಿ ವರುಣದ ರೌದ್ರನರ್ತನ

 ಮುಂಬೈ: ಎಡಬಿಡದೆ ಸುರಿಯಯುತ್ತಿರುವ ಮಳೆಗೆ ಅವಾಂತರ ಸೃಷ್ಟಿಸಿದೆ ಅಂದೇರಿಯಲ್ಲಿದ್ದ ಸಂಪರ್ಕ ಸೇತುವೆ ಮಳೆಯಿಂದ ಕುಸಿದು ಬಿದ್ದಿದೆ. ಸೇತುವೆ ಕುಸಿದಿದ್ದರಿಂದ ಇಬ್ಬರಿಗೆ ಗಾಯ, ನಾಲ್ಕು ವಾಹನಗಳಿಗೆ ಝಖಮ್ ಯಾಗಿದೆ. ಸಂಪರ್ಕ ರಸ್ತೆ ಬ್ಲಾಕ್ ಆಗಿದ್ದು, ವಾಹನ ದಟ್ಟಣೆ ಹೆಚ್ಚಾಗಿದೆ. ಬೆಳ್ಳಂಬೆಳಗೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಲೋಕಲ್ ಟ್ರೈನ್ಗಳು ತಡವಾಗಿ ಸಂಚರಿಸುತ್ತಿವೆ.

ತಾನೆ, ಗೋಟ್ಕೊಪುರ್, ಕುರ್ಲಾ, ದಾದರ್ ಸ್ಟೇಷನ್ಗಳಲ್ಲಿ ರೈಲಿಗಾಗಿ ಜನ ಗಂಟೆಗಟ್ಟಲೇ ಕಾಯುವಂತಾಗಿದೆ. ಮುಂಬೈ ನಗರದಲ್ಲಿ 97 ಮಿ.ಮಿ ಮೆಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ