ಲೋಕದರ್ಶನ ವರದಿ
ಮುದ್ದೇಬಿಹಾಳ 24: ಇಲ್ಲಿನ ಬಸ್ ನಿಲ್ದಾಣದಿಂದ ಸ್ಟೇಟ್ ಬ್ಯಾಂಕ್ ಶಾಖೆಗೆ ಹೋಗುವ ರಸ್ತೆಪಕ್ಕದಲ್ಲಿ ಇರುವ ಉತ್ಕರ್ಷ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರವಿವಾರ ಹೃದಯರೋಗ ಉಚಿತ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಬಾಗಲಕೋಟೆಯ ದುರ್ಗಾವಿಹಾರ ಮೆಡಿಕಲ್ ಸೆಂಟರ್, ಮುದ್ದೇಬಿಹಾಳದ ಉತ್ಕರ್ಷ ಆಸ್ಪತ್ರೆ ಮತ್ತು ಡಾಕ್ಟರ್ಸ ಅಸೋಶಿಯೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರ ನಡೆಸಲಾಯಿತು. ಖ್ಯಾತ ಹೃದಯ ತಜ್ಞ ಡಾ.ಸಮೀರ ಕುಮಾರ ಶಿಬಿರ ನಡೆಸಿಕೊಟ್ಟರು. ಡಾ.ಪ್ರಶಾಂತ ಚಿಂಚೊಳ್ಳಿ, ರಾಘವೇಂದ್ರ ರಾವ್ ಅವರು ಶಿಬಿರದ ನೇತೃತ್ವ ವಹಿಸಿದ್ದರು.
ಮಕ್ಕಳ ತಜ್ಞ ಡಾ.ಎಸ್.ಬಿ.ನಾಗೂರ, ಶಸ್ತ್ರ ಚಿಕಿತ್ಸಾ ತಜ್ಞ ಡಾ.ಉತ್ಕರ್ಷ ನಾಗೂರ ಶಿಬಿರ ಸಂಯೋಜಿಸಿದ್ದರು. ಡಾ.ಸುಕನ್ಯಾ ಚಿಂಚೊಳ್ಳಿ, ಡಾ.ವೈಭವ್ ನಾಗೂರ, ಡಾ.ಸನ್ನಿ ಸಿಂಗ್, ಸಿಬ್ಬಂದಿಗಳಾದ ಸಂಜೀವ ಗುಡಿ, ಸುನೀಲ ಮೇಟಿ, ಉತ್ಕರ್ಷ ಆಸ್ಪತ್ರೆ ಸಿಬ್ಬಂದಿ ಸಹಕರಿಸಿದರು. ಬೆಳಿಗ್ಗೆ 10-30ರಿಂದ ಸಂಜೆ 4-30ರವರೆಗೆ ನಡೆದ ಶಿಬಿರದಲ್ಲಿ ಮುದ್ದೇಬಿಹಾಳ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಯಿಂದ 54 ರೋಗಿಗಳು ತಪಾಸಣೆಗೋಸ್ಕರ ಆಗಮಿಸಿದ್ದರು. ಇವರಲ್ಲಿ 50 ರೋಗಿಗಳಿಗೆ ಉಚಿತ ಇಸಿಜಿ ಮತ್ತು ಸಕ್ಕರೆ ತಪಾಸಣೆ ನಡೆಸಲಾಯಿತು.
ಈ ಪೈಕಿ ಬಿಪಿಎಲ್ ಕಾರ್ಡ ಹೊಂದಿರುವ ಇಬ್ಬರು ಕಡುಬಡ ರೋಗಿಗಳಿಗೆ ಉಚಿತವಾಗಿ ಎಂಜಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಇವರಿಬ್ಬರನ್ನೂ ಬಾಗಲಕೋಟೆಯಲ್ಲಿರುವ ಹಾರ್ಟ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್ನಲ್ಲಿ ದಾಖಲಿಸಿ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ ಎಂದು ಶಿಬಿರದ ನೇತೃತ್ವ ವಹಿಸಿದ್ದ ಡಾ.ಪ್ರಶಾಂತ ಚಿಂಚೊಳ್ಳಿ, ಡಾ.ಉತ್ಕರ್ಷ ನಾಗೂರ ತಿಳಿಸಿದರು.