ಆರೋಗ್ಯಯುತ ಜೀವನ ಬದುಕಿಗೆ ನಿತ್ಯ ಯೋಗ ಅಳವಡಿಕೆ ಅಗತ್ಯ: ಕರುಣಾ

ಲೋಕದರ್ಶನವರದಿ

ರಾಣೇಬೆನ್ನೂರು05:ಮನುಷ್ಯನ ಬದುಕು ಈ ಹಿಂದಿಗಿಂತಲೂ ಇಂದು ಅತೀಯಾದ ಯಾಂತ್ರಿಕತೆಯಿಂದ ಕೂಡಿದೆ.ಪರಿಣಾಮ ಒಂದಿಲ್ಲೋಂದು ರೋಗರುಜಿನಗಳಿಂದ ಆರೋಗ್ಯವಿಲ್ಲದ ಜೀವನ ಬದುಕಿನಿಂದ ನಿತ್ಯವೂ ಬಳಲುತ್ತಿದ್ದಾನೆ.ಇದಕ್ಕೆ ಪರಿಹಾರ ದಿನನಿತ್ಯವೂ ಯೋಗ,ಧ್ಯಾನ ಪ್ರಾಣಾಯಾಮ, ಅಳವಡಿಸಿಕೊಳ್ಳುವುದು ಅಗತ್ಯವಿದೆ ಎಂದು ನಗರದ ಈಶ್ವರನಗರದ ಸಭಾಭವನದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿಯು ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಆಯೋಜಿಸಿದ್ದ  ನೂತನ ಯೋಗ ಕೇಂದ್ರ ಉದ್ಘಾಟಿಸಿ ಸಾಮಾಜಿಕ ಕಾರ್ಯಕತರ್ೆ ಕರುಣಾ ಟೊಣ್ಣೆಪ್ಪನವರ ಹೇಳಿದರು.

ಹಣ ಎಷ್ಟಾದರೂ ಗಳಿಸಬಹುದು ಆದರೆ ಇಂದಿನ ಕಲುಷಿತ ವಾತಾವರಣದಲ್ಲಿ ಆರೋಗ್ಯಗಳಿಸುವುದು ಕಷ್ಟದಾಯಕ ಕೆಲಸವಾಗಿದೆ.ಅದಕ್ಕಾಗಿ ಕುಟುಂಬದವರೆಲ್ಲರೂ ಕನಿಷ್ಟ ಕಾಲವಾದರೂ ಯೋಗ ಕಲಿಕೆಯ ಶಿಬಿರದಲ್ಲಿ ಪಾಲ್ಗೋಳ್ಳುವುದರ ಮೂಲಕ ನಿರೋಗಿ ಬದುಕು ಸಾಗಿಸಲೂ ಮುಂದಾಗಬೇಕು ಎಂದು ಕರೆ ನೀಡಿದರು.

         ಯೋಗ ಶಿಕ್ಷಕ ಕೆ.ಸಿ.ಕೋಮಲಾಚಾರ ಅವರು ಬಾಬಾ ರಾಮದೇವಜಿ ಅವರ ಉದ್ದೇಶಿತ ಯೋಜನೆಯಂತೆ ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಆರಂಭವಾದ ಪತಂಜಲಿ ಯೋಗ ಕೇಂದ್ರಗಳು ಸಾವಿರಾರು ಸಂಖ್ಯೆಯಲ್ಲಿ ನಿತ್ಯವೂ ನಡೆಯುತ್ತಲಿವೆ ಎಂದರು.

ಇದೇ ಜೂ.21 ರಂದು ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವೂ ಎಲ್ಲೆಡೆಯೂ ನಡೆಯಲಿದೆ ಈ ನಿಮಿತ್ಯ ಇಂದು ನಗರದಲ್ಲಿ ಮತ್ತೋಂದು ಹೊಸ ಕೇಂದ್ರವನ್ನು ಆರಂಬಿಸಲಾಗಿದೆ ಈ ಭಾಗದ ನಾಗರೀಕರು ಸದುಪಯೋಗವನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು.

 ನಿವೃತ್ತ ನಗರ ಠಾಣಾ ಪಿಎಸ್ಐ ಹೆಚ್.ಟಿ ಅರಳಿಕಟ್ಟಿ ಅವರು ಸಮಾರಂಭದ ಅಧ್ಯಕ್ಷತೆವಹಿಸಿದ್ದರು.ಮುಖ್ಯ ಅತಿಥಿಗಳಾಗಿ ನಿವೃತ್ತ ಪಿ.ಎಸ್.ಐ ಎಸ್.ಎನ್ ಸೂರಣಗಿ ಮತ್ತೀತರ ಗಣ್ಯರು ಯೋಗ ಸಾಧಕರು ಪಾಲ್ಗೊಂಡಿದ್ದರು. 

ಯೋಗಪಟು ತೇಜಸ್ ಕುಮಾರ ಸ್ವಾಗತಿಸಿದರು. ಗಾಯತ್ರಿ ಕೋಮಲಾಚಾರ್ ನಿರೂಪಿಸಿ ವಂದಿಸಿದರು. ಶಿಬಿರದಲ್ಲಿ ನೂರಾರು ನಾಗರೀಕರು ಭಾಗವಹಿಸಿದ್ದರು.