ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 06: ಪ್ರತಿಯೊಬ್ಬರೂ ಆರೋಗ್ಯದಿಂದಿರಬೇಕು ಪ್ರತಿಯೊಬ್ಬರಿಗೂ ಸಮಬಾಳು ಸಮುಪಾಲು ಸಮಾನ ಹಕ್ಕು ಎಂಬ ಧ್ಯೇಯವಾಖ್ಯದ ಜೊತೆ ಪ್ರತಿಯೊಬ್ಬರಿಗೂ ಆರೋಗ್ಯವು ದೊರಯುವ ನಿಟ್ಟಿನಲ್ಲಿ ಆಸ್ಪತ್ರೆಗಳಿಗೆ ಸೀಮಿತವಾಗದೇ ಮನೆ ಬಾಗಿಲಿಗೆ ಆರೋಗ್ಯ ನೀಡುವಂತಾಗಬೇಕೆಂದು ಬಳ್ಳಾರಿ ಲೋಕಸಭಾ ಸದಸ್ಯ ವಿ.ಎಸ್.ಉಗ್ರಪ್ಪ ಹೇಳಿದರು. ನಗರದ ಜಿವಿಪಿಪಿ ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಉಚಿತ ಬೃಹತ್ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರಿಗೂ ಆರೋಗ್ಯ ದೊರೆಯಬೇಕು ಎಂಬ ಉದ್ದೇಶದಿಂದ ಅನುದಾನದಲ್ಲಿ 4ಕೋಟಿ ರೂ ಆರೋಗ್ಯಕ್ಕಾಗಿ ಬಿಡುಗಡೆ ಮಾಡಲಾಗಿದೆ, ಜಿಲ್ಲಾ ವೈದ್ಯಾಧಿಕಾರಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಜನ ಸಂಪರ್ಕಕ್ಕೆ ತೆಗೆದುಕೊಂಡು ತಿಂಗಳಿಗೊಮ್ಮೆ ಜಿಲ್ಲೆಯಲ್ಲಿನ ಪ್ರತಿ ತಾಲೂಕಿನಲ್ಲಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸಬೇಕು ಎಂದು ತಿಳಿಸಿದರು. ಸ್ವಸ್ಥ ಸಮಾಜದ ನಿಮರ್ಾಣ ಮಾಡುವುದರಲ್ಲಿ ಆರೋಗ್ಯವು ಬಹು ಪ್ರಮುಖ ಪಾತ್ರ ವಹಿಸುತ್ತದೆ ಹಾಗಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಇದರ ಉಪಯೋಗವಾಗಬೇಕು, ಎಂದರು.
ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷೆ ಕೆ.ನಾಗಮ್ಮ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಸೌಭಾಗ್ಯ ತಿರುಮಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಯೋಗಿ, ಹೆಗ್ಡಾಳ್ ರಾಮಣ್ಣ, ಅಕ್ಕಿ ತೋಟೇಶ, ಮುಟುಗನಹಳ್ಳಿ ಕೊಟ್ರೇಶ್, ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಚಿಂತ್ರಪಳ್ಳಿ ದೇವೇಂದ್ರ, ಕನ್ನಿಹಳ್ಳಿ ಚಂದ್ರಶೇಖರ, ತಾಲೂಕು ಆರೋಗ್ಯ ಅಧಿಕಾರಿ ಡಾ. ಕೆ.ಸುಲೋಚನ, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಶಂಕರನಾಯ್ಕ, ಇ.ಓ ಬಿ.ಮಲ್ಲಾನಾಯ್ಕ, ತಹಶೀಲ್ದಾರ್ ಕೆ.ವಿಜಯಕುಮಾರ, ಕ್ಷೇತ್ರಶಿಕ್ಷಣಾಧಿಕಾರಿ ಶೇಖರಪ್ಪ ಹೊರಪೇಟೆ, ಪುರಸಭೆ ಮುಖ್ಯಾಧಿಕಾರಿ ಕೃಷ್ಣಾನಾಯ್ಕ, ಪಿಎಸ್ಐ ಮೌನೇಶ್ ರಾಥೋಡ್, ತಂಬ್ರಹಳ್ಳಿ ಠಾಣೆಯ ಪಿಎಸ್ಐ ಸರಳ ಹಾಗೂ ಬಳ್ಳಾರಿಯ ವಿಮ್ಸ್ನ ಅಧಿಕಾರಿಗಳು, ವೈಧ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಶಾರದ ಮತ್ತು ಸಂಗಡಿಗರು ಪ್ರಾಥರ್ಿಸಿದರು, ಶಿಕ್ಷಕ ಕೋಟ್ರೇಶ್ ನಿರೂಪಿಸಿದರು.ಡಾ. ಎಮ್.ಹೆಚ್.ರವೀಂದ್ರನಾಥ್ ವಂದಿಸಿದರು.