ರಾಯಬಾಗ 28: ಕರ್ನಾಟಕ ರಾಜ್ಯ ಸರ್ಕಾರಿ ನೌಕಕರ ಸಂಘದ ತಾಲೂಕಾ ಘಟಕದ ಅಧ್ಯಕ್ಷರಾಗಿ ಉಪಖಜಾನೆಯ ಇಲಾಖೆ ನೌಕರ ವಿಶ್ವನಾಥ ಹಾರೂಗೇರಿ ಆಯ್ಕೆಯಾದರು.
ಶುಕ್ರವಾರದಂದು ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ 20 ಮತಗಳನ್ನು ಪಡೆದು ಬಹುಮತದಿಂದ ಆಯ್ಕೆಯಾದರು. ಇವರ ಪ್ರತಿಸ್ಪರ್ದೇಯಾಗಿ ಚುನಾವಣೆ ಕಣದಲ್ಲಿದ್ದ ಹಾಲಿ ಅಧ್ಯಕ್ಷ ಆಯ್.ಆರ್.ನದಾಫ ರವರು ಕೇವಲ 6 ಮತಗಳನ್ನು ಪಡೆದು ಪರಾಭವಗೊಂಡರು. ವಿವಿಧ ಇಲಾಖೆಯಿಂದ ಆಯ್ಕೆಗೊಂಡಿದ್ದ 26 ಸದಸ್ಯರು ಮತಚಲಾಯಿಸಿದರು.
ನೀರಾವರಿ ಇಲಾಖೆ ಅಭಿಯಂತರ ನಿವಾಸ ಕಾಂಬಳೆ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಉಮೇಶ ಪೋಳ, ಎಸ್.ಎಸ್.ಪಾಟೀಲ, ಎಚ್.ಎಚ್.ನಾಗನ್ನವರ, ಶಿವಾನಂದ ಹುಲಬಾಳಿ, ಶಿವಪುತ್ರ ಹಾಡಕರ ಸೇರಿದಂತೆ ಅನೇಕರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.