ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ: ಉಪನ್ಯಾಸ ಮತ್ತು ಜನಜಾಗೃತಿ ಕಾರ್ಯಾಗಾರ

Harmful effects of alcohol and drugs: Lecture and public awareness workshop

ಗದಗ 17:  ಮದ್ಯ , ಮಾದಕ ವಸ್ತುಗಳು ರಾಷ್ಟ್ರದ ಅಭಿವೃದ್ಧಿಗೆ ಮಾರಕವಾದಂತಹ ವಸ್ತುಗಳಾಗಿವೆ. ಇಂದಿನ ಯುವ ಜನತೆ ಮಾದಕ ವಸ್ತುಗಳ ಸೇವನೆಯನ್ನು ಪ್ರತಿಷ್ಠೆಯನ್ನಾಗಿಸಿಕೊಳ್ಳುವದರ ಮೂಲಕ ತಮ್ಮ ಆರೋಗ್ಯವನ್ನು ಅಷ್ಟೆ ಅಲ್ಲದೇ ದೇಶದ ಅಭಿವೃದ್ಧಿಗೂ ಮಾರಕವಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ.ಸುರೇಶ ನಾಡಗೌಡರ ಅವರು ನುಡಿದರು. 

ನಾಗಾಮಿಯ  ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವವಿದ್ಯಾಲಯದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಮನಚಾಯತರಾಜ್  ವಿಶ್ವ ವಿದ್ಯಾಲಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ (ಮಾ.15) ಜರುಗಿದ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಉಪನ್ಯಾಸ ಮತ್ತು ಜನಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. 

ಮದ್ಯ ಸೇವನೆ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುತ್ತದೆ. ಮನೆಯಲ್ಲಿನ ಹಿರಿಯರ ನಡುವಳಿಕೆ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಯಾವುದೇ ದುಶ್ಚಟಗಳು ಮೀತಿಮಿರಬಾರದು ಅಲ್ಲದೇ  ತಮ್ಮ ಜೀವನದ ಉದ್ದೇಶಕ್ಕೆ ಮಾರಕವಾಗಬಾರದು ಎಂದರು.  

ಕಾರ್ಯಕ್ರಮದಲ್ಲಿ  ಡಾ. ಅಬ್ದುಲ ಅಜೀಜ್ ಮುಲ್ಲಾ,  ಸೇರಿದಂತೆ ವಿಶ್ವವಿದ್ಯಾಲಯದ ವಿಧ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ನಾಗರತ್ನ ನಾಯ್ಕ ಸ್ವಾಗತಿಸಿದರು, ಡಾ.ಸಂಧ್ಯಾ ವಂದಿಸಿದರು. ಚಂದ್ರ​‍್ಪ ಬಾರಂಗಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಪ್ರೀತಿ ನೂಲ್ವಿ ಪ್ರಾರ್ಥಿಸಿದರು.ರಾಜಶೇಖರ ಹಿರೇಮಠ ಹಾಗೂ ತಂಡದವರು  ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಜಾಗೃತಿ ಗೀತೆಗಳನ್ನು ಪ್ರಚುರ ಪಡಿಸಿದರು.