ಹರಪನಹಳ್ಳಿ; ನಕಲಿ ಖೋಟಾ ನೋಟಿನ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸರು

ಲೋಕದರ್ಶನ ವರದಿ

ಹರಪನಹಳ್ಳಿ 29: ಚಿಗಟೇರಿ ಮತ್ತು ಹರಪನಹಳ್ಳಿ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದ್ದ ಖೋಟಾ ನೋಟು ಪ್ರಕರಣಗಳನ್ನು ಪತ್ತೆ ಮಾಡಲು ದಾವಣಗೆರೆ ಜಿಲ್ಲೆಯ್ಯ ಎಸ್ಪಿ ಹನುಮಂತರಾಯ ಮತ್ತು ಹೆಚ್ಚುವರಿ ಎಸ್ಪಿ ರಾಜು ಅವರ ನಿರ್ದೇಶನದಂತೆ ಮಾನ್ಯ ಡಿವೈಎಸ್ಪಿ ಹರಪನಹಳ್ಳಿ ಮಲ್ಲೇಶ್ ದೊಡ್ಮನಿ ಪೊಲೀಸ್ ವೃತ್ತ ನಿರೀಕ್ಷಕರಾದ ಕುಮಾರ್ ನೇತೃತ್ವದಲ್ಲಿ  ಪ್ರಕಾಶ್ ಪಿಎಸ್ಐ ಚಿಗಟೇರಿ ಲತಾ ಪಿಎಸ್ಐ  (ಅಪರಾಧ ವಿಭಾಗ)  ಶ್ರೀಧರ್, ಪಿಎಸ್ಐ (ಕಾ&ಸು) ವೃತ್ತದ ಸಿಬ್ಬಂದಿಯವರಾದ ಮಲ್ಲಿಕಾರ್ಜುನ ನಾಯಕ, ಕೊಟ್ರೇಶ್ ದೇವೇಂದ್ರಪ್ಪ, ಕುಮಾರ್, ಇಮಾಮ್ ಸಾಹೇಬ್, ಮನೋಹರ್ ಪಾಟೀಲ್, ರವಿ ದಾದಪುರ, ಮಹಾಂತೇಶ್ ಬಿಳಿಚೋಡು, ಚಂದ್ರು, ಎಸ್.ಜಿ.ಅಜ್ಜಪ್ಪ, ರವಿಕುಮಾರ್, ಮತ್ತಿಹಳ್ಳಿ ಕೊಟ್ರೇಶ್, ಹಾಲೇಶ್ ಜಿಎಂ.ನಾಗರಾಜ ಸುಣಗಾರ, ಗುರುರಾಜ್, ಮಾರುತಿ, ಶಿವರಾಜ್ ಹೂಗಾರ್, ವಿಷ್ಣುವರ್ಧನ, ಚಾಲಕರುಗಳಾದ ಹನುಮಂತಪ್ಪ ವಿನೋದ್ ಕುಮಾರ್ ಅವರನ್ನೊಳಗೊಂಡಂತೆ ವಿಶೇಷ ತಂಡವನ್ನು ರಚನೆ ಮಾಡಿದ್ದು ಮೇಲ್ಕಂಡ ತಂಡವು ಕಾರ್ಯಾಚರಣೆಯಲ್ಲಿ ತೊಡಗಿ ಒಟ್ಟು 11 ಜನರನ್ನು ಬಂದಿಸಿದ್ದಾರೆ. 

ಚಿಗಟೇರಿ ಠಾಣೆಯ ಗುನ್ನೆ ನಂ.05/2020 ಮತ್ತು ಹರಪನಹಳ್ಳಿ ಠಾಣೆಯ ಗುನ್ನೆ ನಮ್ಮ ನಂ.13/2020 ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿತರಿಂದ 100 500.ಮತ್ತು 2000 ಮುಖಬೆಲೆಯ ಒಟ್ಟು ರೂ.3.66.200/- 

ನಕಲಿ ನೋಟುಗಳನ್ನು ಹಾಗೂ ಎರಡು ಕಲರ್ ಪ್ರಿಂಟರ್ ಯಂತ್ರಗಳು ನೋಟು ತಯಾರಿಕೆಗೆ ಸಂಬಂಧಿಸಿದ ಜೆಲ್ ಪೆನ್ನು. ಟೇಪ್. ಸ್ಕೇಲ್.  ಕಟ್ಟರ್ ಇತರೆ ಸಾಮಗ್ರಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಗೂಡ್ಸ್ ಆಟೋವನ್ನು ವಶಕ್ಕೆ ಪಡೆಯಲಾಗಿದೆ. 

ಸದರಿ ಆರೋಪಿತರು ಕಲರ್ ಪ್ರಿಂಟರ್ ಸಹಾಯದೊಂದಿಗೆ ರೂ 100.500.2000 ಮುಖ ಬೆಲೆಯ ನೋಟುಗಳನ್ನು ಎಕ್ಸ್ಎಲ್ ಬಾಂಡ್ ಪೇಪರ್ ಗಳನ್ನು   ಉಪಯೋಗಿಸಿ ಕಲರ್ ಜೆರಾಕ್ಸ್ ಮಾಡಿ ಅನುಮಾನ ಬಾರದ ರೀತಿಯಲ್ಲಿ ಜಾತ್ರೆಗಳು, ಸಂತೆಗಳು, ಮದ್ಯದ ಅಂಗಡಿಗಳು, ವಯೋವೃದ್ಧರಿಗೆ ಗ್ರಾಮೀಣ ಭಾಗದ ಮುಗ್ಧ ಸಾರ್ವಜನಿಕರಿಗೆ ಚಲಾವಣೆ ಮಾಡುತ್ತಿದ್ದು ದಿ:26-01-2020 ರಂದು ಲೊಲೇಶ್ವರ ಗ್ರಾಮದಲ್ಲಿ ಚಲಾವಣೆ ಮಾಡಲು ಪ್ರಯತ್ನಿಸಿದಾಗ ಸದರಿ ಗ್ರಾಮದ ಸಾರ್ವಜನಿಕರಾದ   ದಫೆದಾರ್ ಮಲ್ಲಿಕಾಜರ್ುನ ಕುರುವತ್ತೆಪ್ಪ, ಸೋಮಶೇಖರಪ್ಪ ಆರೋಪಿ ಹನುಮಂತನನ್ನು ಧೈರ್ಯವಾಗಿ ಹಿಡಿದು ಠಾಣೆಗೆ ಬಂದು ದೂರು ನೀಡಿದ ಬಳಿಕ ಸದರಿ ಪ್ರಕರಣವು ಬೆಳಕಿಗೆ ಬಂದು ಇದರ ಜಾಲವನ್ನು ಪತ್ತೆ ಮಾಡಲು ಸಹಕಾರಿಯಾಗಿದೆ. 

ಜಾಲವನ್ನು ಪತ್ತೆ ಮಾಡಿದ ತಂಡಕ್ಕೆ ಎಸ್ಪಿ ದಾವಣಗೆರೆ ಜಿಲ್ಲೆ ಪ್ರಶಂಸೆ ವ್ಯಕ್ತಪಡಿಸಿ ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ ಹಾಗೂ ಈ ಬಗ್ಗೆ ಮಾಹಿತಿ ನೀಡಿದ ಲೊಲೇಶ್ವರ ಗ್ರಾಮದ ಸಾರ್ವಜನಿಕರಿಗೆ ಸನ್ಮಾನಿಸಿ ಪ್ರಶಂಸನಾ ಪತ್ರಗಳನ್ನು ನೀಡಿದ್ದಾರೆ.