ಲೋಕದರ್ಶನ ವರದಿ
ಹರಪನಹಳ್ಳಿ 24: ಇಡೀ ವಿಶ್ವವೇ ಭಾರತ ಕಡೆಗೆ ತಿರುಗಿ ನೋಡುವಂತೆ ಮಾಡಿದ ಏಕೈಕ ಪ್ರಧಾನಿ ನರೇಂದ್ರ ಮೋದಿ ಎಂದು ವಿಧಾನಪರಿಷತ್ ಸದಸ್ಯ ಮತ್ತು ದಾವಣಗೇರೆ ಲೋಕಸಭಾ ಚುನಾವಣೆ ಉಸ್ತುವಾರಿ ಆಯನೂರು ಮಂಜುನಾಥ್ ಹೇಳಿದರು.
ಪಟ್ಟಣದ ನಟರಾಜ ಕಲಾಭವನದಲ್ಲಿ ಆಯೋಜಿಸಲಾಗಿದ್ದ ಲೋಕಸಭಾ ಚುನಾವಣೆಯ ಪ್ರಯುಕ್ತ ಬಿಜೆಪಿ ಕಾರ್ಯಕರ್ತರ ಸಮಾವೇಶದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡಿ ಹಿಂದೆ ಕಾಂಗ್ರೇಸ್ಸರ್ಕಾರದಲ್ಲಿ ರಿಮೋಟ್ ಕಂಟ್ರೋಲ್ ಪ್ರಧಾನಿಯಾಗಿದ್ದ ಮನಮೋಹನ್ಸಿಂಗ್ ಅವರ ಆಡಳಿತ ಅವದಿಯಲ್ಲಿ ನಮ್ಮ ದೇಶ ದಿವಾಳಿ ಹಂತಕ್ಕೆ ತಲುಪಿತ್ತು. 2014 ರಲ್ಲಿ ಮೋದಿ ಪ್ರಧಾನಿಯಾದಗ ಇಡೀ ವಿಶ್ವವೇ ಭಾರತ ದೇಶದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ.
ಮೊನ್ನೆ ನಡೆದ ಏರ್ ಸಜರ್ಿಕಲ್ ಸ್ಟ್ರೇಕ್ ಮಾಡಿದಾಗ ಕಾಂಗ್ರೇಸ್ ನಾಯಕರಾದ ರಾಹುಲ್ಗಾಂದಿ ಮತ್ತು ಮಲ್ಲಿಕಾಜರ್ುನ್ಖಗರ್ೆ ಯವರು ಸಾಕ್ಷಿ ಕೇಳುತ್ತಿದ್ದಾರೆ ಇನ್ನು ಮುಂದಿನ ದಿನಗಳಲ್ಲಿ ಏರ್ ಸಜರ್ಿಕಲ್ ಸ್ಟ್ರೇಕ್ ಮಾಡಿದಾಗ ನಮ್ಮ ಸೈನಿಕರು ರಾಹುಲ್ಗಾಂದಿ ಮತ್ತು ಮಲ್ಲಿಕಾಜರ್ುನ್ಖಗರ್ೆ ಅವರನ್ನು ಕರೆದುಕೊಂಡು ಹೋಗಬೇಕು ಎಂದು ವ್ಯಂಗ್ಯ ಮಾಡಿದರು.
ದಾವಣಗೆರೆಯಲ್ಲಿ ನಿನ್ನೆ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ದಾವಣಗೆರೆ ಜಿಲ್ಲೆಗೆ ಬಿಜೆಪಿಯಿಂದ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ, ಆಯನೂರು ಮಂಜುನಾಥ್ ಅವರಿಗೆ ದಾವಣಗೆರೆ ಬಗ್ಗೆ ಯಾವುದೇ ಇಲ್ಲ ಎಂದು ಲೇವಡಿ ಮಾಡಿದ್ದಕ್ಕೆ ಇಂದು ಹರಪನಹಳ್ಳಿಯ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಆಯನೂರು ಮಂಜುನಾಥ್ ಮಾತನಾಡಿ ನಾನು ವಿದ್ಯಾಥರ್ಿ ಜೀವನದ ಹೋರಾಟದಲ್ಲಿ ಒಂದೂವರೆವರ್ಷ ಜೈಲಿಗೆ ಹೋಗಿ ಬಂದಿದ್ದೇನೆ, ನನ್ನ ಮೇಲೆ 32 ಕೇಸ್ ದಾಖಲಾಗಿದೆ. ನಾವು ಮಧ್ಯಾಹ್ನ 1 ಗಂಟೆಗೆ ಎಚ್ಚರವಾಗುವವರ ಬಳಿ ಹೇಳಿಸಿಕೊಳ್ಳುವಷ್ಟು ದಡ್ಡರಲ್ಲ ಎಂದು ತಿರುಗೇಟು ನೀಡಿದರು.
ಸಂಸದ ಜಿ.ಎಂ.ಸಿದ್ದೇಶ್ ಮಾತನಾಡಿ ಬಿಜೆಪಿ ಎಂದರೆ ಕಾರ್ಯಕರ್ತರ ಪಕ್ಷ ನರೇಂದ್ರ ಮೋದಿ ಅವರು 5 ವರ್ಷಗಳ ಕಾಲ ಭ್ರಷ್ಟಚಾರ ರಹಿತ ಆಡಳಿತ ನಡೆಸಿದ ಏಕೈಕ ಪ್ರಧಾನಿ ಮೋದಿ ಮತ್ತು ದಿನಕ್ಕೆ 18 ಗಂಟೆ ಕೆಲಸ ಮಾಡಿದ ಏಕೈಕ ಪ್ರಧಾನಿ ಮೋದಿ ಎಂದರು. ದೇಶದಲ್ಲಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್, ಸಿಲಿಂಡರ್ 8 ಕೋಟಿ ಜನರಿಗೆ ವಿತರಿಸಲಾಗಿದೆ. ಆಯುಸ್ಮನ್ಭಾವ ಉಚಿತ ಕಾರ್ಡ 5 ಲಕ್ಷವರೆಗೆ ಆರೋಗ್ಯ ವಿಮೆ ದೊರೆಯಲಿದೆ. ಯಾರು ನಿವೇಶನ ಹೊಂದಿರುವವರಿಗೆ ಅಂತವರಿಗೆ ಮನೆ ನಿರ್ಮಿಸಿ ಕೊಡುವ ಯೋಜನೆ ಜಾರಿಯಲ್ಲಿದೆ. 2025 ವೇಳೆಗೆ ರೈತರ ಎಲ್ಲಾ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಕೊಡಲು ಪ್ರಧಾನಿ ಮೋದಿ ಚಿಂತನೆ ನಡೆಸಿದ್ದಾರೆ. ವಾಷರ್ಿಕ 6 ಸಾವಿರರೂ ರೈತರ ಖಾತೆಗೆ ಕೇಂದ್ರ ಸಕರ್ಾರ ಹಣ ಜಮಾ ಮಾಡುತ್ತಿದ್ದು, ರೈತರು ಸೂಕ್ತ ದಾಖಲೆಗಳನ್ನು ನೀಡಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶಾಸಕ ಜಿ.ಕರುಣಾಕರರೆಡ್ಡಿ ಮಾತನಾಡಿ ಸಮ್ಮಿಶ್ರ ಸಕರ್ಾರ ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ರೈತರಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದರು ಇದುವರೆಗೆ ಯಾವುದೇ ಸಾಲ ಮನ್ನಾವಾಗಿಲ್ಲ, ಮುಖ್ಯಮಂತ್ರಿ ಕುಮಾರ ಸ್ವಾಮಿ ಸುಳ್ಳು ಭರವಸೆ ನೀಡಿ ಜನರಿಗೆ ಮೋಸ ಮಾಡಿದ್ದಾರೆ. ಸಮ್ಮಿಶ್ರ ಸಕರ್ಾರ ಬಂದು 10 ತಿಂಗಳಲ್ಲಿ 4 ರಿಂದ 5 ಜನ ಉಪವಿಭಾಗ ಅಧಿಕಾರಿ ಮತ್ತು ತಹಶೀಲ್ದಾರ್ ಬದಲಾಣೆಯಾಗಿದ್ದಾರೆ. ಬಡವರಿಗೆ ಮನೆ ನಿಮರ್ಿಸಿಕೊಳ್ಳಲು ಮರಳು ಸಿಗುತ್ತಿಲ್ಲ. ಗ್ರಾಮಗಳಲ್ಲಿ ಎಸ್ಸಿ.ಎಸ್ಟಿ ಕಾಲೋನಿಗಳಲ್ಲಿ ಸಿ.ಸಿ ರಸ್ತೆ ನಿಮರ್ಾಣ ಮಾಡಿಸಿದ್ದೇವೆ. ದೇಶದಲ್ಲಿ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕು ಅದಕ್ಕಾಗಿ ದಾವಣಗೆರೆಯಿಂದ ಲೋಕಸಭಾ ಚುನವಣೆಯಲ್ಲಿ ಸಿದ್ದೇಶ್ ರವರನ್ನು ಹರಪನಹಳ್ಳಿ ತಾಲೂಕಿನಿಂದ ಅತ್ಯಂತ ಹೆಚ್ಚು ಮತಗಳಿಂದ ಆರಿಸಿ ಕಳುಹಿಸಬೇಕು ಎಂದು ನೆರೆದಿದ್ದ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ, ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಧನಂಜಯ್ ಕಡ್ಲಿಬಾಳು, ತಾಲೂಕು ಹಂಗಾಮಿ ಅಧ್ಯಕ್ಷ ಸತ್ತೂರು ಹಾಲೇಶ್ ಮಾತನಾಡಿದರು. ಪು.ಮಾಜಿ ಅಧ್ಯಕ್ಷ ಹೆಚ್.ಕೆ ಹಾಲೇಶ್, ಜಿ.ಪಂ.ಸದಸ್ಯೆ ಕೆ.ಆರ್. ಜಯಶೀಲ, ಜಿಲ್ಲಾ ಉಪಾಧ್ಯಾಕ್ಷ ಎಂ.ಪಿ.ನಾಯ್ಕ, ತಾಲೂಕು ಎಸ್ಟಿ ಮೋಚರ್ಾ ಅದ್ಯಕ್ಷ ಆರ್ ಲೋಕೆಶ್, ಬಿಜೆಪಿ ತಾಲೂಕು ಎಸ್ಟಿ ಮೋಚರ್ಾ ಉಪಾಧ್ಯಾಕ್ಷ ನಿಟ್ಟೂರು ಹಾಲಪ್ಪ, ಚಿರಸ್ತಹಳ್ಳಿ ಬಸವರಾಜಪ್ಪ, ಯಡಿಹಳ್ಳಿ ಶೇಖರಪ್ಪ, ತಾಲೂಕು ಯುವ ಮೋಚರ್ಾ ಅಧ್ಯಕ್ಷ ಮಾಡ್ಲಿಗೇರಿ ನಾಗರಾಜ, ತಾ.ಪಂ.ಉಪಾದ್ಯಕ್ಷ ಎಲ್.ಮಂಜ್ಯಾ ನಾಯ್ಕ, ಪು.ಉಪಾದ್ಯಕ್ಷ ಸತ್ಯನಾರಾನಾಣ, ಬಿಜೆಪಿ ಮುಖಂಡರಾದ ಬಾಗಳಿ ಕೊಟ್ರೇಶಪ್ಪ, ಜಿಲ್ಲಾ ಎಸ್ಟಿ ಮೋಚರ್ಾ ಕಾರ್ಯದಶರ್ಿ ಮನೋಜ್ ತಳವಾರ, ನಿಂಬ್ಯಾನಾಯ್ಕ, ಯು.ಪಿ.ನಾಗರಾಜ್, ರಾಘವೇಂದ್ರ ಶೆಟ್ಟಿ, ಸಂತೋಷ್, ಕೆ.ಕೃಷ್ಣ, ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಿಂದ ನೂರಾರು ಜನ ಬಿಜೆಪಿ ಯುವ ಮೋಚರ್ಾ ಕಾರ್ಯಕರ್ತರು ಮತ್ತು ತಾಲೂಕಿನ ಬಿಜೆಪಿ ಮುಖಂಡರು ಹಾಗೂ ಪದಾಧಿಕಾರಿಗಳು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು