ಲೋಕದರ್ಶನ ವರದಿ
ಹರಪನಹಳ್ಳಿ 19: ಶಿಕ್ಷಣ ಇಲಾಖೆ, ಹರಪನಹಳ್ಳಿ ಜೇಸಿಐ ಸ್ಪೂರ್ಥಿ ಘಟಕದ ಸಹಯೋಗದಲ್ಲಿ ಮಂಗಳವಾರ ಪರೀಕ್ಷೆ ಸಿದ್ಧತೆ ಕುರಿತು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಉಪನ್ಯಾಸ ಕಾರ್ಯಕ್ರಮ ಆರಂಭಗೊಂಡಿತು.
ಬಾಲಕೀಯರ ಸರ್ಕಾರಿ ಪ್ರೌಢಶಾಲೆ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸರ್ಕಾರಿ ಜ್ಯೂನಿಯರ್ ಕಾಲೇಜ್, ಬಾಲಕೀಯರ ಪ್ರೌಢಶಾಲೆಯ 450 ವಿದ್ಯಾರ್ಥಿಗಳು ಹಾಗೂ ವೀ.ವಿ.ಎಸ್.ಪ್ರೌಢಶಾಲೆಯ ಸೆಮಿನಾರ್ ಹಾಲ್ನಲ್ಲಿ ವೀ.ವಿ.ಎಸ್.ಮತ್ತು ಆರ್ ಎಸ್ ಎನ್, ಎಪಿಎಸ್ ಶಾಲೆಯ 350ಕ್ಕು ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನ.21ರ ವರೆಗೂ ವಿವಿಧೆಡೆ ಪರೀಕ್ಷಾ ಜಾಗೃತಿ ನಡೆಯಲಿದೆ.
ಮುಖ್ಯೋಪಾಧ್ಯಾಯ ಎಂ.ಕೊಟ್ರಬಸಪ್ಪ ಮಾತನಾಡಿ, ಅಂಕಗಳಿಗೆ ಮಾತ್ರ ಒದಬೇಡಿ, ತಿಳಿದುಕೊಳ್ಳುವ ವಿಚಾರ ಬದುಕಿಗೆ ದಾರಿಯಾಗಬೇಕು. ಮೌಲ್ಯಗಳ ಹಿಂದೆ ಓಡಬೇಕು. ಅಂಕಗಳಿಸಿ ಮೆಚ್ಚಿಸಲು ಓದಬೇಡಿ. ಖುಷಿ ಕೊಡುವ ವಿಷಯವಿದ್ದರೆ ಎಷ್ಟು ಬೇಕಾದರೂ ಓದಿ ಎಂದು ಕಿವಿಮಾತು ಹೇಳಿದರು.
ಬಿಇಒ ಎಸ್.ಎಂ.ವೀರಭದ್ರಯ್ಯ ಉದ್ಘಾಟಿಸಿದರು. ಮುಖ್ಯಶಿಕ್ಷಕ ಮುಸ್ತಾಫ ಅಧ್ಯಕ್ಷತೆವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ, ಜೆಸಿಐ ನಿಕಟಪೂರ್ವ ಅಧ್ಯಕ್ಷರಾದ ಪ್ರಸನ್ನಕುಮಾರಜೈನ್, ಪಿ.ಶಿವಕುಮಾರನಾಯ್ಕ, ಗಣಪತಿಭಟ್, ಜೇಸಿಐ ನಿಯೋಜಿತ ಅಧ್ಯಕ್ಷ ಡಿ.ವಿಶ್ವನಾಥ, ಕಾರ್ಯದರ್ಶಿ ಎಲ್.ಎ.ಮಹೇಶ, ಸಹ ಕಾರ್ಯದರ್ಶಿ ಟಿ.ಮಲ್ಲಿಕಾರ್ಜುನ, ಉಪಾಧ್ಯಕ್ಷರಾದ ವೀರನಗೌಡ್ರು, ಟಿ.ಎಂ.ವೀರೇಶ ಶಿಕ್ಷಕರಾದ ಷಣ್ಮುಖಪ್ಪ, ಇಸ್ಮಾಯಿಲ್ ಎಲಿಗಾರ, ಚೇತನ್, ಡಿ.ಶಶಿಕಲಾ, ಉಮಾಪತಿ, ಲತಾ ರಾಥೋಡ್ ಹಾಗೂ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳಿದ್ದರು.