ಹರಪನಹಳ್ಳಿ: ಪುರಸಭಾ ಚುನಾವಣೆ ಘೋಷಣೆ

ಲೋಕದರ್ಶನ ವರದಿ

ಹರಪನಹಳ್ಳಿ 03: ಪುರಸಭಾ ಚುನಾವಣೆ ಘೋಷಣೆ ಆಗಿದ್ದು,  ಮೆ.9 ರಂದು ಜಿಲ್ಲಾಧಿಕಾರಿಗಳು  ಅಧಿಸೂಚನೆ ಹೊರಡಿಸುವರು, ಮೆ.16 ರಂದು ಗುರುವಾರ ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದೆ, ಮೆ.17 ರಂದು ನಾಮಪತ್ರಗಳನ್ನು ಪರಿಶೀಲಿಸುವ ದಿನವಾಗಿದ್ದು, ಮೆ.20 ರಂದು ನಾಮಪತ್ರ ಹಿಂತೆಗೆದುಕೊಳ್ಳುವ ದಿನ, ಮೆ.29 ರಂದು ಬುಧವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಟವರೆಗೆ ಮತದಾನ  ನಡೆಯಲಿದೆ. ಮೆ.31 ರಂದು ಶುಕ್ರವಾರ ತಾಲೂಕು ಕೇಂದ್ರದಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಲಿದೆ.

ವಾರ್ಡಗಳ ಮೀಸಲಾತಿ: ವಾರ್ಡ 1 (ಗುಡೇಕೋಟೆ) ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ (ಕುರುಬರಗೇರಿ) ಸಾಮಾನ್ಯ, ವಾರ್ಡ 3(ಅಗಸನಕಟ್ಟಿ) ಪರಿಶಿಷ್ಠ ಜಾತಿ ಮಹಿಳೆ, ವಾರ್ಡ 4 (ಜೋಯಿಸರ ಕೇರಿ) ಸ.ಸಾಮಾನ್ಯ, ವಾರ್ಡ 5 (ಬಾಪೂಜಿ ನಗರ) ಹಿಂದುಳಿದ ವರ್ಗ (ಎ), ವಾರ್ಡ 6 (ಬಾಣಗೇರಿ) ಪರಿಶಿಷ್ಟ ಪಂಗಡ ಮಹಿಳೆ,  ವಾರ್ಡ 7 (ಸುಣಗಾರಿಗೇರಿ) ಸಾಮಾನ್ಯ., ವಾರ್ಡ 8 (ಸಂಡೂರುಗೇರಿ) ಸಾಮಾನ್ಯ, ವಾರ್ಡ 9(ಉಪ್ಪಾರಗೇರಿ) ಹಿಂದುಳಿದ ವರ್ಗ  ಬಿ. ವಾರ್ಡ 10 (ಶಿಲಾರಗೇರಿ) ಪರಿಶಿಷ್ಟ ಜಾತಿ, 

 ವಾರ್ಡ 11(ಚಿತ್ತಾರಗೇರಿ) ಸಾಮಾನ್ಯ, ವಾರ್ಡ 12 (ಪಠಾಣಗೇರಿ) ಸಾಮಾನ್ಯ ಮಹಿಳೆ, ವಾರ್ಡ 13(ಹಿಪ್ಪಿತೋಟ) ಸಾಮಾನ್ಯ, ವಾರ್ಡ 14 (ತೆಲುಗರ ಓಣಿ) ಸಾಮಾನ್ಯ, ವಾರ್ಡ 15 (ಸಾಳೇರಓಣಿ) ಹಿಂದುಳಿದ ವರ್ಗ ಎ ಮಹಿಳೆ, ವಾರ್ಡ 16 (ಗುಡಿಕೇರಿ) ಸಾಮಾನ್ಯ ಮಹಿಳೆ,  ವಾರ್ಡ 17(ಗೌಳೇರಕೇರಿ) ಹಿಂದುಳಿದ ವರ್ಗ(ಎ), ವಾರ್ಡ 18 (ಬ್ರೂಸ್ ಪೇಟೆ), ಹಿಂದುಳಿದ ವರ್ಗ ಎ. ವಾರ್ಡ 19 (ಮೇಗಳಪೇಟೆ) ಸಾಮಾನ್ಯ ಮಹಿಳೆ, ವಾರ್ಡ 20( ಹಳೆ ಕುರುಬರಕೇರಿ) ಸಾಮಾನ್ಯ ಮಹಿಳೆ.  ವಾರ್ಡ 21 (ಅಂಬೇಡ್ಕರ ನಗರ) ಪರಿಶಿಷ್ಟ ಜಾತಿ, ವಾರ್ಡ 22 (ಹುಲ್ಲುಗರಡಿಕೇರಿ) ಸಾಮಾನ್ಯ ಮಹಿಳೆ, ವಾರ್ಡ 23 ( ಕೊರಪರಕೇರಿ) ಪರಿಶಿಷ್ಟ ಪಂಗಡ ಮಹಿಳೆ, ವಾರ್ಡ 24 (ಗುಂಡಿನಕೇರಿ) ಸಾಮಾನ್ಯ ಮಹಿಳೆ, ವಾರ್ಡ 25 (ತೆಕ್ಕದಗಕೇರಿ) ಪರಿಶಿಷ್ಟ ಪಂಗಡ, ವಾರ್ಡ 26 (ವಾಲ್ಮೀಕಿ ನಗರ) ಸಾಮಾನ್ಯ ಮಹಿಳೆ, ವಾರ್ಡ 27 (ಗಾಜಿಕೇರಿ) ಪರಿಶಿಷ್ಟ ಪಂಗಡ 14 ವಾರ್ಡಗಳು  ಸಾಮಾನ್ಯ ಕ್ಷೇತ್ರಗಳಾಗಿ, ಓಬಿಸಿ 6, ಎಸ್ಸಿ 3, ಎಸ್ಟಿ 4 , ಹೀಗೆ ಕ್ಷೇತ್ರಗಳು ಮೀಸಲು ನಿಗದಿ ಮಾಡಲಾಗಿದ್ದು, ಒಟ್ಟಾರೆ ಮಹಿಳೆಯರಿಗೆ 12 ವಾರ್ಡಗಳನ್ನು ಮೀಸಲಿರಿಸಲಾಗಿದೆ.