ಹರಪನಹಳ್ಳಿ: ಸೂರಿಗಾಗಿ ಕೋಟಿ ಹೆಜ್ಜೆ ಹೆಸರಿನಲ್ಲಿ ಕಾಲ್ನಡಿಗೆ ಜಾಥ

ಲೋಕದರ್ಶನ ವರದಿ

ಹರಪನಹಳ್ಳಿ 19: ಭಾರತ ಕಮ್ಯುನಿಸ್ಟ್ ಪಕ್ಷ (ಅಕ) ರಾಜ್ಯದ ಬಡ ಜನರಿಗೆ ವಸತಿ ಕಲ್ಪಿಸುವಂತೆ ಒತ್ತಾಯಿಸಿ ಸೂರಿಗಾಗಿ ಕೋಟಿ ಹೆಜ್ಜೆ ಹೆಸರಿನಲ್ಲಿ  ಕಾಲ್ನಡಿಗೆ ಜಾಥವನ್ನು ಬಳ್ಳಾರಿ ಯಿಂದ ಬೆಂಗಳೂರು ವರೆಗೆ ಸುಮಾರು 927 ಜಾಥ ನಡೆಸುತ್ತಿದ್ದೆ.ಜಾಥ ಫೆಬ್ರವರಿ 2 ರಂದು ಬಳ್ಳಾರಿಯಲ್ಲಿ ಉದ್ಘಾಟನೆಗೊಂಡು, ಇಂದು ಹರಪನಹಳ್ಳಿ ತಾಲ್ಲೂಕಿನ "ಬಳಿಗನೂರು" ಗ್ರಾಮಕ್ಕೆ  ಆಗಮಿಸಿತು. 

ಜಾಥದವನ್ನು ಉದ್ದೇಶಿಸಿ ಸಿಪಿಐ  ರಾಷ್ಟ್ರೀಯ ಕಾರ್ಯದಶರ್ಿ ಗಳು, ಕೇರಳ ರಾಜ್ಯದ ಮಾಜಿ ಅರಣ್ಯ ಸಚಿವರು ಹಾಗೂ ಪ್ರಸ್ತುತಪಡಿಸುವ ರಾಜ್ಯಸಭಾ ಸದಸ್ಯರಾದ  ಬಿನೋಯ್ ವಿಶ್ವಂ ಮಾತನಾಡಿ ರಾಜ್ಯದ ಎಲ್ಲಾ ಬಡವರಿಗೆ ಸೂರೊಂದು ದೊರಕುವವರೆಗೂ ಸಿಪಿಐ ನಿರಂತರವಾಗಿ ಹೋರಾಟ ನಡೆಸಲಿದೆ ಎಂದು ತಿಳಿಸಿದರು. ಇಂದು ನಮ್ಮನ್ನು ಆಳುವ ಸರಕಾರಗಳು ಬಡ ಜನರ ವಿರೋಧಿ ಸರಕಾರಗಳಾಗಿವೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಜರಾತ್ ರಾಜ್ಯದ ಅಹಮದಾಬಾದ್ ನಗರಕ್ಕೆ ಆಗಮಿಸಲಿದ್ದು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಕ್ರೀಡಾಂಗಣ ಕ್ಕೆ ತೆರಳುವ ಮಾರ್ಗದಲ್ಲಿ ಬರುವ ಸ್ಲಂಮ್ ನಿವಾಸಿಗಳು ಕಾಣದಂತೆ ಗೋಡೆಯನ್ನು ಕಟ್ಟುವಂತೆ ಕೇಂದ್ರ ಮತ್ತು ಗುಜರಾತ್ ಸರಕಾರ ಮಾಡುತ್ತಿರುವದು ನಾಚಿಕೆಗೇಡಿನ ಸಂಗತಿ. ಪ್ರಧಾನಿ ನರೇಂದ್ರ ಮೋದಿ ಯವರ  "ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬುದು ನಾಟಕೀಯ ಘೋಷಣೆ. ಗುಜರಾತ್ ಅಭಿವೃದ್ಧಿ ಯಾಗದೆ ದೇಶಕ್ಕೆ ಹೇಗೆ ಮಾದರಿಯಾಯಿತು ಎಂದು ಗುಜರಾತ್ ಮಾಡಲ್ ಬಗ್ಗೆ ವ್ಯಂಗ್ಯ ಮಾಡಿದರು. ದೇಶದಲ್ಲಿ ಬಡವರಿಗೆ ಆಹಾರ, ಉದ್ಯೋಗ, ಬದುಕಿನ ಭದ್ರತೆಗಾಗಿ ಮನೆಯೊಂದು ಕಲ್ಲಿಸುವುದು ಸರಕಾರದ ಮೊದಲ ಆಧ್ಯತೆಯಾಗಬೇಕು ಆದರೆ ಕೇಂದ್ರ ಸರಕಾರ ಇಂದು ಓಖಅ, ಅಂಂ, ಓಕಖ ಕಾಯ್ದೆಗಳ  ಹೆಸರಿನಲ್ಲಿ ಜನರ ಮೂಲ ಸಮಸ್ಯೆಗಳ ಬಗ್ಗೆ ಆಲೋಚನೆ ಮಾಡದಂತೆ  ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದೆ ಎಂದು ಕೇಂದ್ರ ಸರಕಾರದ ಓಖಅ ಅಂಂ ಕಾಯಿದೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಅಠಿ ಪಕ್ಷ ಬಡ ಜನರ ವಸತಿಗಾಗಿ ನಡೆಸುತ್ತಿರುವ ಈ ಹೋರಾಟ ಅಧಿಕಾರಕ್ಕಾಗಿ ನಡೆಸುತ್ತಿರುವ ಹೋರಾಟವಲ್ಲ ಬದಲಿಗೆ ಬಡ ಜನರ ಬದುಕಿಗಾಗಿ ನಡೆಸುತ್ತಿರುವ ಹೋರಾಟವಾಗಿದೆ. 

ಸಭೆಯಲ್ಲಿ, ರಾಜ್ಯ ಕಾರ್ಯದರ್ಶಿ  ಸಾತಿ ಸುಂದರೇಶ್ ಹೆಚ್.ಕೆ.ರಾಮಚಂದ್ರಪ್ಪ, ಚಿಣಣಛಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್, ಹೆಚ್.ಎಂ.ಸಂತೋಷ,  ನಾಗಭೂಷಣರಾವ್, ಎಂ.ಸಿ.ಡೋಂಗ್ರೆ, ಎ.ಎಸ್.ಮೋನಪ್ಪ, ಧರ್ಮರಾಜ್ ಮುಂತಾದವರು ಉಪಸ್ಥಿತರಿದ್ದರು.