ಕೊಪ್ಪಳ 27: ಹನ್ನೆರಡನೆ ಶತಮಾನದ ಬಸವಾದಿ ಶರಣರಲ್ಲಿ ಒಬ್ಬರಾದ ಹಡಪದ ಅಪ್ಪಣ್ಣನವರು ಸೇವಾನುಭವಿ ಶಿವಯೋಗಿ ಶರಣರಾಗಿದ್ದರು ಎಂದು ಕೊಪ್ಪಳ ತಹಶೀಲ್ದಾರ್ ಗುರುಬಸವರಾಜ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಶುಕ್ರವಾರದಂದು ಏರ್ಪಡಿಸಲಾಗಿದ್ದ, ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹನ್ನೆರಡನೆ ಶತಮಾನವು ಒಂದು ಕ್ರಾಂತಿಕಾರಿ ಯುಗವಾಗಿತ್ತು. ಈ ಕಾಲದಲ್ಲಿ ಬಸವಣ್ಣನವರು ಸಮಾನತೆ ಸಾರುವುದರ ಜತೆಗೆ ಅನುಭವ ಮಂಟಪದ ಮೂಲಕ ನೂರಾರು ಶರಣರನ್ನು ಒಂದೆಡೆ ಸೇರಿಸಿ, ಜಾತೀಯತೆ, ಶೋಷಣೆಗಳ ವಿರುದ್ಧ ಹೋರಾಟ, ಸಾಮಾಜಿಕ ಸುಧಾರಣೆ, ಸಮಾನತೆಗಾಗಿ ಚಚರ್ೆ ನಡೆಸಿದ್ದ ಶರಣರು, ಅಲ್ಲಿಯೇ ಕಲ್ಯಾಣ ಕ್ರಾಂತಿಯನ್ನುಂಟು ಮಾಡಿದ್ದಾರೆ. ಅನುಭವ ಮಂಟಪದ ಸಭೆಯು ಯಶಸ್ವಿಯಾಗಲು ಹಡಪದ ಅಪ್ಪಣ್ಣನವರ ಶ್ರಮ ಪ್ರಮಖವಾದದ್ದು. ಜಗಜ್ಯೋತಿ ಬಸವೇಶ್ವರರ ಆಪ್ತರಾಗಿದ್ದ ಅಪ್ಪಣ್ಣನವರು ತಮ್ಮ ಕಾಯಕ ನಿಷ್ಠೆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ. ಶರಣರು ಹಾಕಿಕೊಟ್ಟ ಮಾರ್ಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯ ಸಕರ್ಾರವು ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿಯನ್ನು ಸಕರ್ಾರಿ ಕಾರ್ಯಕ್ರಮವನ್ನಾಗಿ ಆಚರಿಸುತ್ತಿದೆ ಎಂದು ಕೊಪ್ಪಳ ತಹಶೀಲ್ದಾರ್ ಗುರುಬಸವರಾಜ ಅವರು ಹೇಳಿದರು.
ಸಿಂಧನೂರಿನ ನ್ಯಾಷನಲ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಗೋವಿಂದರಾಜ ಬಾರಕೇರ ಅವರು ಶಿವಶರಣ ಹಡಪದ ಅಪ್ಪಣ್ಣನವರ ಕುರಿತು ವಿಶೇಷ ಉಪನ್ಯಾಸ ನೀಡಿ, ಕ್ರಿ.ಶ ಸುಮಾರು 1134 ರಲ್ಲಿ ಚನ್ನವೀರಪ್ಪ ಹಾಗೂ ದೇವಮ್ಮ ಎಂಬ ದಂಪತಿಗಳಿಗೆ ಮಸಬಿನಾಳ ಗ್ರಾಮದಲ್ಲಿ ಜನಿಸಿದ ಅಪ್ಪಣ್ಣನವರು, 243ಕ್ಕೂ ಅಧಿಕ ವಚನಗಳನ್ನು ರಚಿಸಿದ್ದಾರೆ ಎಂದು ಅಧ್ಯಯನದಿಂದ ತಿಳಿಯುತ್ತದೆ. ಹಡಪದ ಅಪ್ಪಣ್ಣನವರು 12ನೇ ಶತಮಾನದಲ್ಲಿನ ಬಸವಾದಿ ಶಿವಶರಣ ರಲ್ಲಿ ಒಬ್ಬರಾಗಿದ್ದರು. 12ನೇ ಶತಮಾನವು ಸಮಾನತೆಗಾಗಿ ಹೋರಾಡಿದ ಕಾಲ. "ನ್ಯಾಯಾಲಯದ ನ್ಯಾಯಾಧೀಶನು ಮತ್ತು ಒಬ್ಬ ಕ್ಷೌರಿಕನು ಸಮಾನ ವ್ಯಕ್ತಿಗಳು" ಎಂದು ರಾಷ್ಟ್ರ ಪಿತಾಮಹ ಮಹಾತ್ಮ ಗಾಂಧಿಜೀರವರು ಹೇಳಿದ್ದಾರೆ. ಆದರೆ ಎಲ್ಲಾ ಜಾತಿಯ ಜನರನ್ನು ಒಗ್ಗೂಡಿಸಿ ದೇಶದ ವಿವಿದ ಮೂಲೆಗಳಿಂದ ಶರಣರನ್ನು ಒಂದೆಡೆ ಸೇರಿಸಿ, ಸಮಾನತೆಗಾಗಿ 12ನೇ ಶತಮಾನದಲ್ಲಿಯೇ ಶರಣರು ಕರೆ ನೀಡಿದ್ದಾರೆ. ಸಮಾಜದಲ್ಲಿ ಇನ್ನೂ ಕೂಡ ಅಸಮಾನತೆ ಇದ್ದು, ಅದನ್ನು ಹೋಗಲಾಡಿಸಲು ಶರಣರು ಹಾಕಿ ಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕಾಗಿದೆ. ಜಯಂತಿಗಳು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಬಾರದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಉಪವಿಭಾಗಾಧಿಕಾರಿ ಸಿ.ಡಿ. ಗೀತಾ ಅವರು ವಹಿಸಿದ್ದರು. ಜಿಲ್ಲಾ ಸಂಖ್ಯಾ ಸಂಗ್ರಣಾಧಿಕಾರಿ ಕೃಷ್ಣಮೂತರ್ಿ ದೇಸಾಯಿ, ಗಣ್ಯರಾದ ಗಾಳೆಪ್ಪ ಕಡೆಮನಿ, ಈರಣ್ಣ ಕೊರಳಳ್ಳಿ, ಮಂಜುನಾಥ ಗೊಂಡಬಾಳ, ಸಮಾಜದ ಮುಖಂಡರಾದ, ಶರಣಪ್ಪ ದದೇಗಲ್, ಲಿಂಗಪ್ಪ ಹಂದ್ರಾಳ, ಬಸಪ್ಪ ಹಲಗೇರಿ, ಚಂದ್ರು ಜಿ., ಮಾರ್ಕಡಪ್ಪ ಗಿಣಿಗೇರಿ, ಗಾಳೇಪ್ಪ ಕಡೆಮನಿ ಸೇರಿದಂತೆ ಇತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಶಿವಶರಣ ಹಡಪದ ಅಪ್ಪಣ್ಣನವರ ಭಾವಚಿತ್ರದ ಮೇರವಣಿಗೆ ಕೋಟೆ ರಸ್ತೆಯ ಮಹೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು, ಗಡಿಯಾರ ಕಂಬದ ಮಾರ್ಗವಾಗಿ ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನದವರೆಗೆ ಅದ್ದೂರಿಯಾಗಿ ಜರುಗಿತು. ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮೆರವಣಿಗೆಗೆ ಚಾಲನೆ ನೀಡಿದರು. ಗಣ್ಯರಾದ ಸಿ.ವಿ. ಚಂದ್ರಶೇಖರ್ ಉಪಸ್ಥಿತರಿದ್ದರು. ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯ ಮುಂಚೂಣಿಯಲ್ಲಿದ್ದು, ಮೆರವಣಿಗೆ ವಿಜೃಂಭಣೆಯಿಂದ ನೆರವೇರಲು ಕಾರಣಕರ್ತರಾದರು. ವಿವಿಧ ಜಾನಪದ ಕಲಾ ತಂಡಗಳು ಮೇರವಣಿಗೆಯಲ್ಲಿ ಪಾಲ್ಗೊಂಡಿದ್ದವು.