ಲೋಕದರ್ಶನವರದಿ
ಬ್ಯಾಡಗಿ:ಪ್ರಕೃತಿಯ ಮುಂದೇ ಮಾನವ ಶೂನ್ಯ ಎಂಬ ಮಾತನ್ನು ಮತ್ತೆ ಸ್ವತಃ ಪ್ರಕೃತಿ ಸಾಬೀತು ಪಡಿಸಿದೆ. ಮಾನವ ತಾನೇ ಮಾಡಿದ ಸ್ವಯಂ ಕೃತ ಅಪರಾಧಕ್ಕೆ ಬೆಲೆ ತೆರುವಂತಾಗಿದ್ದು ಪ್ರಕೃತಿ ವಿಕೋಪಗಳು ನಡೆದಾಗ ಅನುಕಂಪಕ್ಕಿಂತ ಸಹಾಯ ಹಸ್ತ ಚಾಚುವ ಕೈಗಳು ಶ್ರೇಷ್ಠವೆನಿಸಿಕೊಳ್ಳತ್ತವೆ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಹೇಳಿದರು.
ಪಟ್ಟಣದ ಶಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಉತ್ತರ ಕನರ್ಾಟದ ನೆರೆ ಸಂತ್ರಸ್ತರಿಗೆ ಎರಡು ಟ್ರಕ್ಗಳಲ್ಲಿ ಅಗತ್ಯ ಸಾಮಗ್ರಿಗಳನ್ನು ರವಾನಿಸಿ ಮಾತನಾಡಿದರು.
ಕಳೆದ ಕೆಲ ದಿನಗಳಲ್ಲಿ ಸುರಿದ ವರುಣನ ರೌದ್ರಾವತಾರಕ್ಕೆ ಉತ್ತರ ಕನರ್ಾಟಕ ಅಕ್ಷರಸಃ ನಲುಗಿ ಹೋಗಿದೆ.ಲಕ್ಷಾಂತರ ಜನರು ನಿರಾಶ್ರಿತರಾಗಿದ್ದು ನೂರಾರು ಜನ ಪ್ರಾಣ ಕಳೆದು ಕೊಂಡಿದ್ದಾರೆ ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ನೆರೆ ಸಂತ್ರಸ್ತರಿಗೆ ನೆರವಿಗೆ ಮುಂದಾಗಬೇಕಿದೆ ಅಂದಾಗಮಾತ್ರ ನೋವಲ್ಲಿರುವ ಜನರ ಕಣ್ಣೀರು ಒರೆಸಲು ಸಾಧ್ಯ ಎಂದರು.
ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ತಾಲೂಕಿನ ಜನತೆ ಎಲ್ಲರ ನೋವಿಗೆ ಮಿಡಿ ಯುವವರಾಗಿದ್ದು ಈ ಹಿಂದೆ ಕೊಡಗು, ಕೆರಳದಲ್ಲಿ ಸುರಿದ ಮಹಾ ಮಳೆಗೆ ಜನರು ಸಿಲುಕಿದ್ದಾಗ ನೆರವಿಗೆ ಬಂದು ಸಾಕಷ್ಟು ಸಹಾಯ ಮಾಡಿದ್ದಾರೆ ಇದೀಗ ಉತ್ತರ ಕನರ್ಾಟಕದ ಜನತೆಯ ಸಹಾಯಕ್ಕೆ ಬಂದಿದ್ದು ಆಹಾರ ಉತ್ಪನ್ನ ಔಷಧಿ ಬಟ್ಟೆ, ದಿನಬಳಕೆ ವಸ್ತುಗಳನ್ನು ನೀಡಿದ್ದು ಮಾನವೀಯತೆಗೆ ಸಾವಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದರು.
ರೈತ ಮುಖಂಡರಾದ ಮಲ್ಲಿಕಾಜರ್ುನ ಬಳ್ಳಾರಿ, ಕಿರಣ ಗಡಿಗೋಳ, ಪುರಸಭೆ ಸದಸ್ಯರಾದ ಬಸವರಾಜ ಛತ್ರದ, ಈರಣ್ಣ ಬಣಕಾರ, ಪಿಎಲ್ಡಿ ಬ್ಯಾಂಕ ಅಧ್ಯಕ್ಷ ಶಿವ ಯೋಗಿ ಶೀರೂರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪ್ರಕಾಶ ಬನ್ನಿಹಟ್ಟಿ, ಮಲ್ಲೇಶಪ್ಪ ಬಣ ಕಾರ, ಜಗದೀಶ ಗೌಡ ಪಾಟೀಲ, ಪಾಂಡುರಂಗ ಸುತಾರ, ಬಸವರಾಜ ಹಾವನೂರ, ಸೇರಿ ದಂತೆ ಇನ್ನಿತರು ಉಪಸ್ಥಿತರಿದ್ದರು.